ಜನತೆಯ ಪ್ರೀತಿ ವಿಶ್ವಾಸದಿಂದ ಸುರ್ದೀಘ ಸೇವೆ: ಡಾ.ಲಕ್ಷ್ಮಣ ನಾಯ್ಕ

ಜನತೆಯ ಪ್ರೀತಿ ವಿಶ್ವಾಸದಿಂದ ಸುರ್ದೀಘ ಸೇವೆ: ಡಾ.ಲಕ್ಷ್ಮಣ ನಾಯ್ಕ Good luck with the love and trust of the people: Dr. Lakshmana Nayka

ಶಿಗ್ಗಾವಿ 10  : ತಾಲೂಕಿನ ಜನತೆಯ ಪ್ರೀತಿ ವಿಶ್ವಾಸದಿಂದ 12 ವರ್ಷಗಳ ಕಾಲ ಸುರ್ದೀಘ ಸೇವೆ ಸಲ್ಲಿಸಲು ಅವಕಾಶ ನನಗೆ ಒದಗಿ ಬಂದಿತು ಎಂದು ಪ್ರಭಾರ ಆಡಳಿತಾಧಿಕಾರಿ ಡಾ.ಲಕ್ಷ್ಮಣ ನಾಯ್ಕ ಹೇಳಿದರು.  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವೈದ್ಯರು ಹಾಗೂ ಸಿಬ್ಬಂದಿಗಳ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಡಾ.ಹನುಮಂತಪ್ಪ ಸರ್ ನೇತೃತ್ವದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಉತ್ತಮ ತಂಡ ರಚನೆಗೊಂಡು ತಾಲೂಕಿನ ಜನತೆಗೆ ಉತ್ತಮ ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದಿತು ಅದರ ಸದುಪಯೋಗ ಜನತೆ ಪಡೆದುಕೊಂಡರು. 

ವರ್ಗಾವಣೆಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಾದ ಎಲುಬು ಕೀಲು ತಜ್ಞ ವೈದ್ಯರಾದ ಡಾ.ಲಕ್ಷ್ಮಣ ನಾಯಕ ಮುಂಡಗೋಡ ತಾಲೂಕ ಆಸ್ಪತ್ರೆ, ಅರವಳಿಕೆ ತಜ್ಞ ವೈದ್ಯರಾದ ಡಾ.ಗುರುರಾಜ ನವಲಗುಂದ ತಾಲೂಕ ಆಸ್ಪತ್ರೆ, ಚರ್ಮ ತಜ್ಞ ವೈದ್ಯರಾದ ಡಾ.ಸುಭಾಸ ಲೋಖ್ರೆ, ಕಿವಿ.ಮೂಗು,ಗಂಟಲು ತಜ್ಞ ವೈದ್ಯರಾದ ಡಾ.ವಿವೇಕ ಜೈನಕೇರಿ ಧಾರವಾಡ ಜಿಲ್ಲಾ ಆಸ್ಪತ್ರೆ, ದಂತ ತಜ್ಞರಾದ ಡಾ.ವಿದ್ಯಾವತಿ ಬ್ಯಾಟಪ್ಪನವರ ರಟ್ಟಿಹಳ್ಳಿ ತಾಲೂಕ ಆಸ್ಪತ್ರೆ, ಕಚೇರಿ ಅಧೀಕ್ಷಕ ಮುತ್ತಮ್ಮ, ಹಿರಿಯ ಶುಶ್ರೂಷಾಧಿಕಾರಿ ಆರ್ ಸಾರಮ್ಮ ಹಾವೇರಿ ಜಿಲ್ಲಾ ಆಸ್ಪತ್ರೆ, ವನಿತಾ ಕುರಂದವಾಡ ಹಾಗೂ ಉಮಾ ಮುಳಗುಂದ ಸವಣೂರ ತಾಲೂಕ ಆಸ್ಪತ್ರೆಗೆ, ಓಷಧ ವಿತರಕ ಅಧಿಕಾರಿ ನೀಲಮ್ಮ ಹಿರೇಮಠ ಕೋಣನಕೇರಿ ಆಸ್ಪತ್ರೆ, ಕ್ಷ ಕಿರಣ ತಂತ್ರಜ್ಞಾಧಿಕಾರಿ ಸುರೇಶ ಪಾಟೀಲ ರಾಣೇಬೆನ್ನೂರ ಸಾರ್ವಜನಿಕ ಆಸ್ಪತ್ರೆ, ದ್ವಿತೀಯ ದರ್ಜೆ ಸಹಾಯಕ ಜಾಫರ ಹಾನಗಲ್ ಸಾರ್ವಜನಿಕ ಆಸ್ಪತ್ರೆ ಇವರೆಲ್ಲರೂ ಶಿಗ್ಗಾವಿ ಆಸ್ಪತ್ರೆಯಿಂದ ನಿರ್ಗಮಿಸಿದರು.  ಈ ತಂಡವು ನಿರ್ಗಮಿಸುವಾಗ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕ ರಲ್ಲಿ ಆತಂಕದ ಭಾವನೆಗಳನ್ನು ಹೊಂದಿದ್ದು ಅಲ್ಲದೇ ಕುಟುಂಬದ ಸದಸ್ಯರನ್ನು ಕಳೆದುಕೊಂಡ ರೀತಿಯಲ್ಲಿ ವಾತಾವರಣ ಸೃಷ್ಟಿಯಾಗಿತ್ತು.

ತಾಲೂಕ ಆಸ್ಪತ್ರೆಯಿಂದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ಬೇರೆ ಕಡೆ ವರ್ಗಾವಣೆ ಆದರೂ ಆದರೆ ಇಲ್ಲಿ ಅವರ ಸ್ಥಾನವನ್ನು ತುಂಬಲು ಬೇರೆ ವೈದ್ಯರು ಬರುವದು ಸಾಧ್ಯವೇ ? ಆಗಾದರೆ ಸಾಮಾನ್ಯ ಜನರ ಗತಿಯೇನು ಯಕ್ಷಪ್ರಶ್ನೆಯಾಗಿದೆ ? 

ಹನುಮಂತಪ್ಪ ಓಲೇಕಾರ ಶಿಗ್ಗಾವಿ 

ಈ ಸಂದರ್ಭದಲ್ಲಿ ಆಸ್ಪತ್ರೆಯ ತಜ್ಞ ವೈದರಾದ ಡಾ.ರಾಜೇಶ್ವರಿ ಚನ್ನಪ್ಪಗೌಡ್ರ, ಡಾ.ತಬುಸುಮ್, ಡಾ. ಮಹೇಶ ಜಗದಣ್ಣವರ, ಡಾ ಪಾಟೀಲ, ಡಾ.ರೈತಾ, ಸೇರಿದಂತೆ ಶುಶ್ರೂಷಾ ಅಧೀಕ್ಷಕಿ ಸುಶೀಲಾ ದೇವಸೂರ, ಆಡಳಿತಾಧಿಕಾರಿ ಮಂಜುನಾಥ, ನೌಕರ ಸಂಘದ ಸದಸ್ಯರಾದ ಶಿವಯೋಗಿ ದೌತಾಲಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರವೀಣ ಗೋಣಿ ಕಾರ್ಯಕ್ರಮ ನಿರ್ವಹಿಸಿದರು.