ನಿತ್ಯ ಯೋಗ ಅಭ್ಯಾಸದಿಂದ ಉತ್ತಮ ಆರೋಗ್ಯ ವೃದ್ಧಿ, ನ್ಯಾಯಾಧೀಶ ಅಮೂಲ್ ಜಿ ಹಿರೇಕುಡಿ
Good health is enhanced by daily yoga practice: Judge Amulji Hirekudi
ಬ್ಯಾಡಗಿ 24 : . ಶುದ್ಧ ಹಾಗೂ ಶಾಂತ ಬದುಕನ್ನು ರೂಪಿಸಿಕೊಳ್ಳಲು ಶಕ್ತಿ ಯೋಗದಿಂದ ಮಾತ್ರ ಸಾಧ್ಯವಿದೆಯೆಂದು ಬ್ಯಾಡಗಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅಮೂಲ್ ಜೆ ಹೀರೆಕುಡಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ. ತಾಲೂಕು ನ್ಯಾಯವಾದಿಗಳ ಸಂಘ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಿದ್ದ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಯೋಗ ಎಂಬುದು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ ನಮ್ಮ ಆರೋಗ್ಯ ಚೆನ್ನಾಗಿದ್ದರೆ ದೈನಂದಿನ ಚಟುವಟಿಕೆ ಉತ್ಸವದಿಂದ ಸಾಗಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಉತ್ತಮ ಆಹಾರ ಸೇವಿಸುವದರ ಜೊತೆಗೆ ನಿತ್ಯ ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಹಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ ಯೋಗವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ ಅಲ್ಲದೆ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ ಯೋಗದಿಂದ ಆಗುವ ಪ್ರಯೋಜನ ಜನರಿಗೆ ಅರಿವಾಗಿದೆ ಪ್ರತಿ ದಿನ ಯೋಗ ಅಭ್ಯಾಸದಲ್ಲಿ ತೊಡಗಿಸಿ ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಯೋಗ ತರಬೇತುದಾರ ಮೌನೇಶ ಬಡಿಗೇರ ಮಾತನಾಡಿ ಪ್ರತಿಯೋಬ್ಬರು ಯೋಗ ಧ್ಯಾನ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ನೆಡಸಬಹುದು.
ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯದ ಸರಳ ಸೂತ್ರವಾಗಿದೆ. ಯೋಗದಿಂದ ನೆಮ್ಮದಿ, ತೃಪ್ತಿ, ಸಂತೋಷ ಲಭಿಸಲಿದೆ. ಮಾನವ ಸರ್ವತೋಮುಖ ಅಭಿವೃದ್ಧಿಗಾಗಿ ಯೋಗದ ಅವಶ್ಯಕತೆ ಇದೆ ಎಂದರು.ಯೋಗವು ಇಂದಿನ ದಿನಮಾನದಲ್ಲಿ ಮನುಷ್ಯನಿಗೆ ಅತ್ಯವಶ್ಯಕವಾಗಿದೆ. ಯೋಗವು ವ್ಯಕ್ತಿಯಲ್ಲಿನ ಶಕ್ತಿ ವೃದ್ಧಿಪಡಿಸುವ ವಿಧಾನವಾಗಿದೆ. ಮಾನವನ ಪ್ರಜ್ಞೆಯು ಆತ್ಮಶಕ್ತಿ ಅಭಿವೃದ್ಧಿಗೆ ಯೋಗವು ವಿಕಾಸವಾಗುತ್ತಿರುವ ಪ್ರಕ್ರಿಯೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ರಾಜು ಶೀಡೆನೂರ. ಎಚ್ ಜಿ ಮುಳುಗುಂದ. ಕಾರ್ಯದರ್ಶಿಗಳು. ಯೋಗ ತರಬೇತುದರಾದ ಮೌನೇಶ್ ಕುಡುಪಲಿ. ಕಾಂತೇಶ್ ನಾಯ್ಕರ್ . ಶಿರಸ್ತೇದಾರ್ ಜನಾರ್ಧನ್ ಬಾರ್ಕಿ. ಸುಜಾತ ನೆಲವಿಗಿ. ನ್ಯಾಯವಾದಿಗಳಾದ ಎಸ್‌ಎನ್ ಬಾರ್ಕಿ. ಬಿಜಿ ಹಿರೇಮಠ.ಎಂಬಿ ಹಾವೇರಿ. ಎಸ್ ಹೆಚ್ ಗುಂಡಪ್ಪನವರ. ಸಿಪಿ ಡೋಣ್ಣೆರ. ಎಂಕೆ ಕೊಡಿಹಳ್ಳಿ. ಎಸ್‌ಎಸ್ ಕೊನ್ನೂರ್. ಎಸ್ ಎಸ್ ಮೂಡೆರ್. ಕೆ ಎಸ್ ನಾಯಕರ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 