ಪ್ರಜೆ-ಪ್ರತಿನಿಧಿಗಳ ಪರಸ್ಪರ ಸಹಕಾರದಿಂದ ಉತ್ತಮ ಆಡಳಿತ ಸಾಧ್ಯ: ಎಸ್. ರೇವಣಸಿದ್ದಪ್ಪ
Good governance is possible through mutual cooperation between citizens and representatives: S. Reva
ಹೂವಿನಹಡಗಲಿ, ಆ. 28: ಪ್ರಜೆಗಳು ಮತ್ತು ಪ್ರಜಾಪ್ರತಿನಿಧಿಗಳು ಸದೃಢ ಪ್ರಜಾಪ್ರಭುತ್ವದ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರ ನಡುವೆ ಪರಸ್ಪರ ಸಂಬಂಧ ಹಾಗೂ ಸಹಕಾರವಿಲ್ಲದೆ ಯಶಸ್ವಿ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ವಿಶ್ರಾಂತ ಸಹ ಪ್ರಾಧ್ಯಾಪಕ ಎಸ್. ರೇವಣಸಿದ್ದಪ್ಪ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಪಟ್ಟಣದ ಜಿ.ಬಿ.ಆರ್. ಕಾಲೇಜಿನಲ್ಲಿ ನಡೆದ ಶ್ರೀಮತಿ ಕನ್ನಿಹಳ್ಳಿ ಗಂಗಮ್ಮ ಪರಮೇಶ್ವರ್ಪ ದತ್ತಿ, ಗಂಗಾವತಿ ಜನಾರ್ದನ ಶ್ರೇಷ್ಠಿ ಸ್ಮಾರಕ ದತ್ತಿ ಹಾಗೂ ಶ್ರೀ ರೇಣುಕಾಚಾರ್ಯ ವಿದ್ಯಾಸಂಸ್ಥೆ ದತ್ತಿ, ಕನ್ನಿಹಳ್ಳಿ ಅಡವಿಬಸಪ್ಪ-ಬಸಮ್ಮ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಜೆ-ಪ್ರತಿನಿಧಿಗಳ ವಿಷಯ ಕುರಿತು ಅವರು ಮಾತನಾಡಿದರು.
ಪ್ರಜೆಗಳು ಮತದಾನ ಮಾಡುವುದು, ಸರ್ಕಾರ ರಚಿಸುವುದು, ಸರ್ಕಾರವನ್ನು ಪ್ರಶಂಸಿಸುವುದು ಹಾಗೂ ಟೀಕಿಸುವುದು ತಮ್ಮ ಕರ್ತವ್ಯ ಎಂದು ತಿಳಿಸಿದ ಅವರು, ಪ್ರಜಾಪ್ರತಿನಿಧಿಗಳು ಕಾನೂನು ರೂಪಿಸುವುದು, ಕಾನೂನುಗಳ ಅನುಷ್ಠಾನ ಮಾಡುವುದು, ಸಂವಿಧಾನದ ಆಶಯದಂತೆ ಆಡಳಿತ ನಡೆಸುವುದು ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸುವುದು ತಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ತಾಲೂಕು ಪ್ರಥಮ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ. ಕೆ. ರುದ್ರ್ಪ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಗಳು ಮಹತ್ವದ್ದಾಗಿವೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಹಾಗೂ ಉಪನ್ಯಾಸಕ ಡಾ. ವೈ. ಚಂದ್ರಬಾಬು ಮಾತನಾಡಿದರು. ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಕು. ಎ. ಸ್ವಪ್ನ ಪ್ರಾರ್ಥಿಸಿದರು. ಕಸಾಪ ತಾಲೂಕು ಘಟಕದ ಎ.ಎಂ. ಚನ್ನವೀರಸ್ವಾಮಿ ಸ್ವಾಗತಿಸಿದರು. ಡಾ. ಜಕ್ಕಲಿ ಶರಣಪ್ಪ ಉಪನ್ಯಾಸಕರನ್ನು ಪರಿಚಯಿಸಿದರು.
ಸಂಗೀತ ಶಿಕ್ಷಕ ಬಿ. ಯು.ವರಾಜಗೌಡ, ಎಸ್. ರೇವಣಸಿದ್ದಪ್ಪ ಹಾಗೂ ಪಿ. ಬಸವರಾಜ ಭಾವಗೀತೆ, ಜಾನಪದ ಗೀತೆ ಮತ್ತು ಲಾವಣಿಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಇದೇ ವೇಳೆ ಉಪನ್ಯಾಸ ನೀಡಿದ ಎಸ್. ರೇವಣಸಿದ್ದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಉಪನ್ಯಾಸಕ ಪೂಜಾರ್ ಬಸವರಾಜ್ ವಂದಿಸಿದರು. ಉಪನ್ಯಾಸಕ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 