ಉತ್ತಮ ಸಂವಹನ, ಯಶಸ್ವಿ ಜೀವನದ ಮೂಲಾಧಾರ...
Good communication is the foundation of a successful life...
ವಿಜಯಪುರ 11 : ಉತ್ತಮ ಸಂವಹನವು ಸ್ಪಷ್ಟತೆ, ಆತ್ಮವಿಶ್ವಾಸ, ಉತ್ತಮ ಸಂಬಂಧಗಳು, ಸಂಘರ್ಷಗಳ ಪರಿಹಾರ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗಿದೆ. ಸಂವಹನವೆಂದರೆ ಕೇವಲ ಮಾತನಾಡುವುದಲ್ಲ. ಬದಲಾಗಿ ಪರಿಣಾಮಕಾರಿಯಾಗಿ ಆಲಿಸುವುದು, ದೈಹಿಕ ಭಾಷೆ ಮತ್ತು ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸೂಕ್ತ ಪ್ರತಿಕ್ರಿಯೆಯನ್ನು ನೀಡುವುದು ಮುಖ್ಯ.
ಇಂದಿನ ಆಧುನಿಕ ಯುಗದಲ್ಲಿ ವೈಯಕ್ತಿಕ ಮತ್ತು ವೃತ್ತಪರ ಯಶಸ್ಸಿಗೆ ಸಂವಹನ ಕೌಶಲ್ಯವು ಅತಿ ಅವಶ್ಯಕ ಎಂದು ಬಿ.ಎಲ್.ಡಿ.ಇ. ಫ.ಗು.ಹಳಕಟ್ಟಿ ತಾಂತ್ರಿಕ ಕಾಲೇಜಿನ ವ್ಯವಸ್ಥಾಪನಾ ಅಧ್ಯಯನ ವಿಭಾಗದ ಪ್ರೊ. ಸುಮಂಗಲಾ ಬದಾಮಿ ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲ್ರಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ದಿನಾಂಕ: 11-3-2026 ರಂದು “ಕಾರ್ೋರೇಟ್ ಜಗತ್ತಿನಲ್ಲಿ ಸಂವಹನ ಕೌಶಲ್ಯದ ಅಗತ್ಯತೆ” ವಿಷಯ ಕುರಿತು ಜರುಗಿದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ, ಅಂಕ ಪಡೆದರೆ ಸಾಕಾಗದು. ಭವಿಷ್ಯದ ಭದ್ರ ಕೀಲಿ ಕೈ ಎಂದೆನಿಸಿದ ಈ ಸಂವಹನ ಕೌಶಲ್ಯವನ್ನು ಪಡೆಯಬೇಕಾದರೆ ಮೊದಲು ಒಳ್ಳೆಯ ಕೇಳುಗನಾಗಬೇಕು ಮತ್ತು ಉತ್ತಮ ಆಲಿಸವವರಾಗಿ ಇನ್ನೊಬ್ಬರು ಹೇಳುವ ವಿಷಯವನ್ನು ಗಮನವಿಟ್ಟು ಕೇಳಬೇಕು. ಪರಿಣಾಮಕಾರಿ ಸಂವಹನಕ್ಕೆ ಆಳವಾದ ವಿಷಯ ಜ್ಞಾನ, ಅರ್ಥಪೂರ್ಣ ಓದುವಿಕೆ, ಆಂಗ್ಲಭಾಷೆಯ ಮೇಲಿನ ಹಿಡಿದತ, ಭಾಷಾ ಕೌಶಲ್ಯ, ಹೊಂದಿರಬೇಕಾಗುತ್ತದೆ.
ಪ್ರಸ್ತುತ ಕಂಪನಿಗಳು ಅಥವಾ ಕಾರ್ೊರೇಟ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಲ್ಲಿ ಯಶ ಗಳಿಸಬೇಕಾದರೆ, ನಮ್ಮಲ್ಲಿರುವ ಕೀಳರಿಮೆ ಮತ್ತು ಸಂಕುಚಿತ ಮನೋಭಾವನೆಯನ್ನು ತ್ಯಜಿಸಿ, ಆತ್ಮವಿಶ್ವಾಸದೊಂದಿಗೆ ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ಮಾತನಾಡುವ ಕಲೆಯನ್ನು ಬೆಳಸಿಕೊಂಡಿರಲೇಬೇಕು. ಅದಕ್ಕಂತಲೇ ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎನ್ನುವ ನಾಣ್ಣುಡಿಯಂತೆ, ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರುವ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ರೂಪಿಸುವ, ಸಂಬಂಧಗಳನ್ನು ಬೆಳಸೆಸುವ ಮತ್ತು ವೃತ್ತಿ ಜೀವನದಲ್ಲಿ ಸಾಧನೆ ತೋರಲು ಮತ್ತು ಉತ್ತಮ ಅವಕಾಶಗಳು ಗಿಟ್ಟಿಸಿಕೊಳ್ಳಲು ಸಂವಹನವು ಉತ್ತಮ ಸಾಧನವಾಗಿದೆ ಎಂದರು.
ಈ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಲಿಕೆ ಮತ್ತು ಚಟುವಟಿಕೆಗಳ ಆಧಾರಿತ ಗೇಮಗಳಿಂದ ಸಂವಹನ ಕೌಶಲ್ಯವು ವೈಯಕ್ತಿಕ ಮತ್ತು ಗುಂಪು ಕಾರ್ಯನಿರ್ವಹಣೆಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಸಂಪರ್ಕ-ಸಂವಹನವನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಬಲ್ಲದು ಎಂಬುದನ್ನು ಗೇಮ್ಗಳ ಮೂಲಕ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಮಾತನಾಡಿ, ಸಂದರ್ಶನ ಕಲೆ, ಸಂವಹನ ಕೌಶಲ್ಯ, ವಾಕ್ಚಾತುರ್ಯ, ಶ್ರಮ ವಿಭಜನೆ ಮತ್ತು ವೈಶಿಷ್ಟ್ಯೀಕರಣಗಳಂತಹ ಹಾಗೂ ಬಾಹ್ಯ ಕಾರ್ೊರೇಟ್ ಜಗತ್ತು ನೀರೀಕ್ಷಿಸುವ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಕುಶಲಗಾರಿಕೆಯನ್ನು ಹೊಂದುತ್ತಾ ಕಠಿಣ ಪರಿಶ್ರಮ, ಸತತ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಬಲ್ಲೆನೆಂಬ ದೃಢವಾದ ನಂಬಿಕೆಗಳೊಂದಿಗೆ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಪ್ರೊ. ಈರಣ್ಣ ಜಾಬಾ, ಡಾ. ಐ.ಎಸ್.ಶಿವಶರಣರ, ಪ್ರೊ. ಆರ್.ಐ. ಜೋಗೂರ, ಪ್ರೊ. ವಲ್ಲಭ ಕಬಾಡೆ ಮತ್ತು ಶಿಲ್ಪಾ ಉಕ್ಕಲಿ ಇನ್ನಿತರರು ಸಹ ಉಪಸ್ಥಿತರಿದ್ದರು. ಶ್ರೀಶೈಲ ಪಟ್ಟಣಶೆಟ್ಟಿ ಸ್ವಾಗತಿಸಿದರು. ಈರಣ್ಣ ಹಟ್ಟಿ ವಂದಿಸಿದರು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬಿ,ಕಾಂ ಮತ್ತು ಬಿ.ಬಿ.ಎ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 