ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶ Golden opportunity for the development of small food processing enterprises

ಹಾವೇರಿ 11: ಆತ್ಮ ನಿರ್ಭರ ಭಾರತ ಅಭಿಯಾನ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಕಒಈಒಇ) ಯೋಜನೆ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಸುವರ್ಣಾವಕಾಶವಾಗಿದೆ.  

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯು 2020-21 ರಲ್ಲಿ ಪ್ರಾರಂಭವಾಗಿ ಐದು ವರ್ಷಪೂರ್ಣಗೊಂಡಿದೆ. ಮುಂದುವರೆದು  ಮಾರ್ಚ-2026 ರವರೆಗೆ ಈ ಯೋಜನೆ ಅವಧಿ ವಿಸ್ತರಿಸಲಾಗಿದೆ.  

ಈ ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿ ಇರುವ ಉದ್ದಮೆಗಳನ್ನು ವಿಸ್ತರಿಸಲು ಅವಕಾಶ ಇರುತ್ತದೆ. ಈ ಯೋಜನೆಯಲ್ಲಿ ಹಾಲಿ ಇರುವ ಶೇ. 35ರ  ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಶೇ.15 ರಷ್ಟು ಸಹಾಯಧನ ರಾಜ್ಯ ಸರ್ಕಾರ ಭರಿಸುತ್ತದೆ. ಮಾರಿ​‍್ಡಸಲಾಗಿರುವ ಮಾರ್ಗಸೂಚಿಯನ್ವಯ ಓಆಓಕ ಬದಲಾಗಿ ಯಾವುದೇ ಕಿರು ಆಹಾರ ಸಂಸ್ಕರಣೆ ಮಾಡಬಹುದಾಗಿದೆ. ಒಟ್ಟಾರೆಯಾಗಿ ಈ ಯೋಜನೆಯಡಿಯಲ್ಲಿ ಶೇ. 50 ರಷ್ಟು ಅಥವಾ ಗರಿಷ್ಟ ರೂ. 15 ಲಕ್ಷ ಸಹಾಯಧನ (ಕೇಂದ್ರ ಸರ್ಕಾರದ ರೂ. 6 ಲಕ್ಷ ಹಾಗೂ ರಾಜ್ಯ ಸರ್ಕಾರದ ರೂ. 9 ಲಕ್ಷ ಸಹಾಯಧನ) ಸೌಲಭ್ಯವಿದೆ.  

ಯೋಜನೆಯ ಘಟಕಗಳು:  

ವೈಯಕ್ತಿಕ ಉದ್ದಿಮೆಗಳು ಮತ್ತು ಗುಂಪುಗಳು: ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಮತ್ತು  ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶವಿದೆ.   18 ವರ್ಷ ಮೇಲ್ಪಟ್ಟವರು ಮತ್ತು ಯಾವುದೇ ಕನಿಷ್ಠ ವಿದ್ಯಾರ್ಹತೆ ಇಲ್ಲದವರು ಸಹ ಈ ಯೋಜನೆ ಲಾಭ ಪಡೆದುಕೊಳ್ಳಬಹುದು. ಇತರೆ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಅರ್ಹರಾಗಿದ್ದಾರೆ. 

ವೈಯಕ್ತಿಕ ಉದ್ದಿಮೆಗಳಿಗೆ, ಮಾಲೀಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆಗಳಿಗೆ, ರೈತ ಉತ್ಪಾದಕರ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವ-ಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ. 35 ರಷ್ಟು ಸಹಾಯಧನ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ. 15 ಸಹಾಯಧನ, ಗರಿಷ್ಟ ರೂ. 15 ಲಕ್ಷಗಳು ಅಥವಾ ಶೇ. 50 ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ.  

ಪ್ರಾಥಮಿಕ ಬಂಡವಾಳ : ಆಹಾರ ಸಂಸ್ಕರಣಾ ಚಟುವಟಿಕೆಗಳಲ್ಲಿ ತೊಡಗಿರುವ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣಗಳ ಖರೀದಿಗಾಗಿ ಪ್ರತಿ ಸದಸ್ಯರಿಗೆ ಗರಿಷ್ಟ ರೂ. 40,000/- ಕಡಿಮೆ ಬಡ್ಡಿ ದರದ ಸಾಲದ ಸೌಲಭ್ಯವಿದೆ. ಪ್ರತಿ ಸ್ವ-ಸಹಾಯ ಸಂಘಕ್ಕೆ ಗರಿಷ್ಟ ರೂ. 4 ಲಕ್ಷ ಪಡೆಯಲು ಅವಕಾಶವಿದೆ.  

ಸಾಮಾನ್ಯ ಮೂಲ ಸೌಕರ್ಯ ಸ್ಥಾಪನೆ: ಸಾಮಾನ್ಯ ಮೂಲಭೂತ ಸೌಕರ್ಯ ಸೃಷ್ಟಿಗೆ ಶೇ. 35 ರಷ್ಟು ಸಾಲ ಸಂಪರ್ಕಿತ ಸಹಾಯ ಧನ, ಗರಿಷ್ಟ ಸಹಾಯಧನ ರೂ. 3 ಕೋಟಿ ನೀಡಲಾಗುತ್ತದೆ.  

ಅರ್ಹ ಸಂಸ್ಥೆಗಳು : ರೈತ ಉತ್ಪಾದಕರ ಸಂಸ್ಥೆಗಳು, ಕಂಪನಿಗಳು, ಸಹಕಾರಿಗಳು, ಸ್ವ- ಸಹಾಯ ಸಂಘಗಳು ಮತ್ತು ಅದರ ಒಕ್ಕೂಟಗಳು ಮತ್ತು ಸರ್ಕಾರಿ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.  ಅರ್ಜಿದಾರರ ಸಂಸ್ಥೆಯ ಕನಿಷ್ಠ ವಹಿವಾಟು ಮತ್ತು ಅನುಭವದ ಯಾವುದೇ ಪೂರ್ವ ಷರತ್ತುಗಳಿಲ್ಲ. ವಿಂಗಡಣೆ, ಶ್ರೇಣೀಕರಣ, ಸಂಗ್ರಹಣೆ, ಸಾಮಾನ್ಯ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪ್ರಯೋಗಾಲಯ ಇತ್ಯಾದಿ ಘಟಕಗಳನ್ನು ಸ್ಥಾಪಿಸಲು ಅವಕಾಶವಿದೆ.  

ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ಸಹಾಯ: ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಇತ್ಯಾದಿಗಳಿಗಾಗಿ ಶೇ. 50 ರಷ್ಟು ಸಹಾಯಧನ ಸೌಲಭ್ಯವಿದೆ.  

ಅರ್ಹ ಸಂಸ್ಥೆಗಳು: ರೈತ ಉತ್ಪಾದಕರ ಸಂಸ್ಥೆಗಳು, ಕಂಪನಿಗಳು, ಸಹಕಾರಿಗಳು, ಸ್ವ-ಸಹಾಯ ಸಂಘಗಳು, ಸಹಕಾರಿ ಸಂಸ್ಥೆಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ವಿಶೇಷ ಉದ್ದೇಶ ಸಂಸ್ಥೆ (ಎಸ್‌.ವಿ.ಪಿ.). 

ಯೋಜನೆಯ ವೈಶಿಷ್ಟ್ಯತೆಗಳು: ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮತ್ತು ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತವಾಗಿ ಯೋಜನಾ ಪ್ರಸ್ತಾವನೆ ಸಿದ್ಧತೆ ಮತ್ತು ಅರ್ಜಿ ಸಲ್ಲಿಕೆಗೆ ಸಹಾಯ,  

ಆಹಾರ ಸಂಸ್ಕರಣಾ ತಾಂತ್ರಿಕತೆಗಳ ಬಗ್ಗೆ CFTRI, IIHR ಮುಂತಾದ ಸಂಸ್ಥೆಗಳಿಂದ 

ಉಚಿತವಾಗಿ ತರಬೇತಿ ಸೌಲಭ್ಯ ಹಾಗೂ  ಯೋಜನೆಯಡಿ ಒದಗಿಸುವ ಸಾಲಕ್ಕೆ CGTHSE ಸಂಸ್ಥೆಯಿಂದ ಕ್ರೆಡಿಟ್ ಗ್ಯಾರಂಟಿ  ಸೌಲಭ್ಯವಿರುತ್ತದೆ.  

ಯೋಜನೆಯಡಿ ಸ್ಥಾಪಿಸಬಹುದಾದ ಆಹಾರ ಸಂಸ್ಕರಣಾ ಉದ್ದಿಮೆಗಳು: ಸಿರಿಧಾನ್ಯಗಳ ಮತ್ತು ಇತರೆ ಧಾನ್ಯಗಳ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್‌ ಪ್ರೆಸ್ಡ್‌ಆಯಿಲ್, ಮೆಣಸಿನ ಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಸಂಸ್ಕರಣಾ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು, ಸಾಗರ ಉತ್ಪನ್ನಗಳು ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳ ಇತ್ಯಾದಿ  ಉತ್ಪನ್ನಗಳ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಬಹುದು.  

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಸಲ್ಲಿಕೆಗಾಗಿ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ಕೆಪೆಕ್ ಸಂಸ್ಥೆಯ ಯೋಜನಾ ನಿರ್ವಹಣಾ ಘಟಕದ ಮೊ. ಸಂಖ್ಯೆ: 9964398062-9741008486-8867617858-9731201215 ಅಥವಾ ವೆಬ್‌ಸೈಟ್ ವಿಳಾಸ https://pmfme. mofpi.gov.in/ - https://kappec.karnataka.gov.in/ಸಂಪರ್ಕಿಸಬಹುದು.  

ಒಂದು ಜಿಲ್ಲೆ, ಒಂದು ಉತ್ಪನ್ನ: ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಓಆಓಕ ಉತ್ಪನ್ನಗಳಾದ  ಮಾವಿನಹಣ್ಣಿನ ಜ್ಯೂಸ್‌/ಮಾವಿನ ಪಲ್ಸ್‌ ಕ್ಯಾಂಡಿ, ಉಪ್ಪಿನಕಾಯಿ ತಯಾರಿಕೆ ಹಾಗೂ ಓಠ ಓಆಓಕ ಉತ್ಪನ್ನಗಳಾದ ಗಟ್ಟಿಬೆಲ್ಲ, ಕಾಕವಿ, ಪೌಡರ್ ಬೆಲ್ಲ ಪ್ಯಾಕ್ಸ್‌ ಕಬ್ಬಿನ ಹಾಲು ಬೆಲ್ಲದಿಂದ ತಯಾರಾಗುವಂತಹ ಸಿಹಿ ಪದಾರ್ಥಗಳು-ಶೇಂಗಾ ಚಿಕ್ಕಿ, ಕರದಂ' ಎ 'ಹೋಳಿಗೆ, ಲಾಡು ಬಾಲೂಷಾ, ಜಿಲೇಬಿ, ರೊಟ್ಟಿ ತಯಾರಿಕೆ, ಶಾವಿಗೆ ತಯಾರಿಕೆ, ಹಪ್ಪಳ ತಯಾರಿಕೆ ಬೇಕರಿ ಪದಾರ್ಥಗಳು, ಚಕ್ಕಲಿ ತಯಾರಿಕೆ, ಸವಣೂರು ಖಾರಾ ತಯಾರಿಕೆ, ಸಿರಿಧಾನ್ಯ ಸಂಸ್ಕರಣೆ, ಹಿಟ್ಟು/ರವಾ ತಯಾರಿಕೆ, ಶೇಂಗಾ ಪದಾರ್ಥಗಳು, ಅಡುಗೆ ಎಣ್ಣೆ ತಯಾರಿಕೆ, ಖಾರಪುಡಿ ತಯಾರಿಕೆ, ಮಸಾಲೆ ಖಾರ ತಯಾರಿಕೆ, ವಿವಿಧ ಚಟ್ಟಿ ಪುಡಿಗಳು, ಕುರುಕುಲು ತಿಂಡಿ ತಯಾರಿಕೆ, ಗುಲಾಮ್ ಹಣ್ಣು ತರಕಾರಿ ಸಂಸ್ಕರಣೆ, ಅರಿಶಿನ ಪೌಡರ್, ಚುರುಮುರಿ/ ಅವಲಕ್ಕಿ ತಯಾರಿಕೆ, ಬೆಳ್ಳುಳ್ಳಿ/ಈರುಳ್ಳಿ ಸಂಸ್ಕರಣೆ, ಹಾಲಿನ ಉತ್ಪನ್ನಗಳನ್ನು ತಯಾರಿಸಬಹುದು.  

ಅಗತ್ಯ ದಾಖಲೆ: ಆಧಾರ್ ಕಾರ್ಡ್‌, ಬ್ಯಾಂಕ್ ಪಾಸ್‌ಬುಕ್, ಪಾನ್ ಕಾರ್ಡ್‌, ಕರೆಂಟ್ ಬಿಲ್, ಉದ್ಯೋಗ ಸ್ಥಳದ ಉತಾರ, ಬಾಡಿಗೆ ಕರಾರು ಪತ್ರ, ಎಂ.ಎಸ್‌.ಎಂ.ಇ ಲೈಸನ್ಸ್‌ (ಉದ್ಯಮ), ಸೈಟಿನ ಬಳಿ ನಿಂತ ಅರ್ಜಿದಾರರ ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.  

ರೂ.32.28 ಕೋಟಿ ಸಾಲ: ಹಾವೇರಿ ಜಿಲ್ಲೆಯಲ್ಲಿ ಈವರೆಗೆ 468 ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ ರೂ. 32.38 ಕೋಟಿ ಸಾಲ ಮಂಜೂರ  ಮಾಡಲಾಗಿದ್ದು, ಫಲಾನುಭವಿಗಳು ಕಿರು ಆಹಾರ ಉದ್ಯಮಗಳನ್ನು ನಡೆಸುತ್ತಿದ್ದಾರೆ. 2024-25 ನೇಸಾಲಿನ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಗೆ ತೃತೀಯ ಸ್ಥಾನಲಭಿಸಿದೆ. ಪ್ರಸ್ತುತ 241  ಫಲಾನುಭವಿಗಳು ಕೇಂದ್ರ ಸರ್ಕಾರದ ಪಾಲು (ಶೇ.35)  ರೂ. 6 ಕೋಟಿ ಸಹಾಯಧನ ಹಾಗೂ  156 ಫಲಾನುಭವಿಗಳು ರಾಜ್ಯ ಸರ್ಕಾರದ ಪಾಲು (ಶೇ.15) ರೂ. 1.90 ಕೋಟಿ  ಸಹಾಯಧನ ಪಡೆದಿರುತ್ತಾರೆ 

ಜಿಲ್ಲೆಯಲ್ಲಿ 215 ರೊಟ್ಟಿ ಮಷಿನ್, 57 ಎಣ್ಣೆಗಾಣ, 22 ಹಿಟ್ಟಿನಗಿರಣಿ, 37 ಬೇಕರಿ, 27 ಪಶುಆಹಾರ, 36  ಖಾರದಪುಡಿ ಘಟಕ, 7 ಅಡಿಕೆಸಂಸ್ಕರಣೆ, 12 ಬೆಲ್ಲದಗಾಣ ಹಾಗೂ   55 ಇತರೆ (ಜಿರೇನಿಯಂಎಣ್ಣೆಘಟಕ, ಅವಲಕ್ಕಿಘಟಕ, ಮಾಂಸ ಸಂಸ್ಕರಣೆಇತ್ಯಾದಿ) ಕಿರು ಉದ್ಯಮಗಳನ್ನು ಸ್ಥಾಪಿಸಿದ್ದಾರೆ.  

ಈ ಯೋಜನೆಯಡಿ  ಶಿಗ್ಗಾಂವಿಯ ಜವಾರಿ ಫುಡ್ ಪ್ರಾಡಕ್ಟ್‌ ಪ್ರೈವೇಟ್ ಲಿಮಿಟೆಡ್‌ನವರು ರೂ. 15 ಲಕ್ಷ ಸಹಾಯಧನ ಪಡೆದು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಜೋಳದ ರೊಟ್ಟಿ, ಬಾಜ್ರಾ ರೊಟ್ಟಿ, ಕುಟ್ಟಿ ಮಾಡಿದ ಚಟ್ನಿ ಪುಡಿಗಳು, ಅಡುಗೆ ಮಾಡಲು ಸಿದ್ಧವಾದ ಉತ್ಪನ್ನಗಳು, ಬೆಲ್ಲದ ಸಿಹಿತಿಂಡಿಗಳು ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತಯಾರಿಸಿ ಯುಕೆ, ಯುಎಇ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಜಪಾನ್‌ನಂತಹ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.  

ಹಾವೇರಿ ಜಿಲ್ಲೆ ಕೃಷಿಪ್ರಧಾನ ಜಿಲ್ಲೆಯಾಗಿದ್ದು, ಇಲ್ಲಿ  ಕಿರು ಉದ್ಯಿಮೆ ಆರಂಭಿಸಲು ವಿಫುಲ ಅವಕಾಶಗಳಿದ್ದು,  ಜಿಲ್ಲೆಯ ಜನತೆ ಈ ಯೋಜನೆ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕಿರು ಉದ್ದಿಮಗಳನ್ನು ಆರಂಭಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು ಹಾಗೂ ಇತರರಿಗೂ ಉದ್ಯೋಗ ನೀಡಬಹುದು. 

ವಿಶೇಷ ವರದಿ- 

ಸಹಾಯಕ ನಿರ್ದೇಶಕರು, 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾವೇರಿ.