ಬಡ ವಿದ್ಯಾರ್ಥಿ ಲಕ್ಷ್ಮೀಗೆ ಚಿನ್ನದ ಪದಕ
Gold medal for poor student Lakshmi
ಶಿಗ್ಗಾ?? 12 : ಪಟ್ಟಣದ ಮಾರುತಿ ನಗರದ ದುರಮುರಗೇರ ಬಡ ಕುಟುಂಬದ ಬಾಲಕಿ ಕು. ಲಕ್ಷ್ಮೀಭಾಗಪ್ಪ ಗುಜಲೂರ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದು ಶಿಗ್ಗಾವಿಯ ಕೀರ್ತಿ ಹೆಚ್ಚಿಸಿದ್ದಾಳೆ.
ಬಡತನದಲ್ಲಿ ಹುಟ್ಟಿದ ಲಕ್ಷ್ಮಿ ಗುಜಲೂರಳ ತಂದೆ ನಾಗಪ್ಪ ಗುಜಲೂರ ಬೊಂಬಾಯಿ ಮಿಠಾಯಿ ಮಾರುತ್ತಾರೆ. ತಾಯಿ ಸಹ ಅದೆ ವೃತ್ತಿಯಲ್ಲಿ ಪತಿಗೆ ಸಹಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದರಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಹರಸಾಹಸ ಪಟ್ಟು ಕೂಲಿ-ನಾಲಿ ಮಾಡಿ ಪದವಿವರೆಗೂ ಓದಿಸುತ್ತಿದ್ದಾರೆ. ಬಾಲಕಿಯು ವಿದ್ಯಾಭ್ಯಾಸಕ್ಕೆ ಸಮಾಜ ಸೇವಕ ವರುಣ್ ಗೌಡ ಪಾಟೀಲ ಅವರು ಬಟ್ಟೆ ಮತ್ತು ಪುಸ್ತಕ ಸೇರಿದಂತೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಜನಿಸಿದ ತಂದೆ ಬೊಂಬಾಯಿ ಮಿಠಾಯಿ ಮಾರಿ ಮಗಳನ್ನು ಚಿನ್ನದ ಪದಕ ಗೆಲ್ಲುವತನಕ ಶ್ರಮ ವಹಿಸಿದ ಕುಟುಂಬಕ್ಕೆ ಈಗ ಸಂತೋಷ ಎಲ್ಲೆ ಮೀರಿದ್ದು ಈ ಡುರುಮುರಗೇರೆ ಕುಟುಂಬದಲ್ಲಿ ಯಾರೂ ಸಹಿತ ಹೆಚ್ಚು ಓದು-ಬರಹ ಕಲಿತವರಿಲ್ಲ. ಅಲೆಮಾರಿ ಕುಟುಂಬದ ಈ ಕುಟುಂಬಗಳಿಗೆ ದುಡಿಮೆ ಬಿಟ್ಟರೆ ಬೇರೆನೋ ಗೊತ್ತಿಲ್ಲದ ಕುಟುಂಬಸ್ಥರು ಈಕೆಯ ಶಿಕ್ಷಣಕ್ಕೆ ಅಡ್ಡಿ ಮಾಡಿಲ್ಲ. ಮಗಳನ್ನು ಚೆನ್ನಾಗಿ ಓದಿಸಿದ್ದಾರೆ. ಜೊತೆಗೆ ಬಾಲಕಿಗೆ ಕೃಷಿ ಇಲಾಖೆಯ ಮಹೋನ್ನತ ಹುದ್ದೆ ಅಲಂಕರಿಸುವ ಆಸೆ ಇದೆ ಎಂದು ತಿಳಿದು ಬಂದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 