ಬಳ್ಳಾರಿಯಲ್ಲಿ ಗೋಕುಳಾಷ್ಠಮಿ: ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆಗಳನ್ನು ಬೋಧಿಸಬೇಕು: ಶಾಸಕ ನಾರಾ ಭರತ್‌ರೆಡ್ಡಿ

ಬಳ್ಳಾರಿಯಲ್ಲಿ ಗೋಕುಳಾಷ್ಠಮಿ: ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆಗಳನ್ನು ಬೋಧಿಸಬೇಕು: ಶಾಸಕ ನಾರಾ ಭರತ್‌ರೆಡ್ಡಿ Gokulashtami in Bellary: Children should be taught the principles of Lord Krishna: MLA Nara Bharat R

ಬಳ್ಳಾರಿ 16: ಈಗಿನ ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಭಗವದ್ಗೀತೆಯ ಶ್ರೀಕೃಷ್ಣನ ವಿಚಾರಧಾರೆಗಳನ್ನು ಬೋಧಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದಡಾ.ರಾಜ್‌ಕುಮಾರ್‌ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಶ್ರೀಕೃಷ್ಣ ಮಹಾಪುರುಷ. ಲೋಕ ಕಲ್ಯಾಣಕ್ಕಾಗಿ ಹಾಗೂ ಮಾನವೀಯಧರ್ಮದ ಉಳಿವಿಗಾಗಿ ಹಲವಾರು ಸಂದೇಶಗಳನ್ನು ನೀಡಿದ್ದಾನೆ. ಪೋಷಕರು ಶಾಲೆಯ ಬಿಡುವಿನ ನಂತರದಲ್ಲಿ ಭಗವದ್ಗೀತೆ ಮತ್ತು ಮಹಾಭಾರತದಲ್ಲಿನ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಿದಾಗ ಜಯಂತಿಆಚರಣೆಗೆ ಸಾರ್ಥಕರೂಪು ಪಡೆಯುವುದಲ್ಲದೇ, ಮುಂದಿನ ಪೀಳಿಗೆಗೆ ಸನ್ಮಾರ್ಗವಾಗುತ್ತದೆಎಂದರು. 

ನಮ್ಮರಾಜ್ಯ ಸರ್ಕಾರವು ಪ್ರತಿ ಸಮುದಾಯವನ್ನು ಗುರುತಿಸಿ, ಅವರ ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನೆಲೆಗೆತರುವ ಕೆಲಸ ಮಾಡುತ್ತಿದೆ.ಬಳ್ಳಾರಿ ನಗರದಲ್ಲಿಗೊಲ್ಲರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ 25 ಲಕ್ಷರೂ.ನೀಡಲಾಗುವುದುಎಂದು ಹೇಳಿದರು. 

ಡಾ.ಬಾಬು ಜಗಜೀವನ್‌ರಾಮ್‌ಚರ್ಮಕೈಗಾರಿಕಾಅಭಿವೃದ್ಧಿ ನಿಗಮ ನಿಯಮಿತದಅಧ್ಯಕ್ಷ ಮುಂಡರಗಿ ನಾಗರಾಜಅವರು ಮಾತನಾಡಿ, ಶ್ರೀಕೃಷ್ಣನು ಆದರ್ಶ ಪುರುಷ, ವಿಷ್ಣುವಿನ ಅವತಾರ ಪಡೆದಿದ್ದನು.ಶ್ರೀಕೃಷ್ಣನ ಜನ್ಮಾಷ್ಟಮಿ ದಿನವನ್ನುದೇಶದೆಲ್ಲೆಡೆಯು ವಿಜೃಂಭಣೆಯಿಂದಆಚರಿಸುತ್ತಾರೆ.ಇದನ್ನು ಮನಗಂಡ ನಮ್ಮರಾಜ್ಯ ಸರ್ಕಾರವು ಸಹ ಆಚರಿಸಲು ಅನುವು ಮಾಡಿಕೊಟ್ಟಿತುಎಂದರು. 

ದೇಶದಲ್ಲಿಕ್ರೈಸ್ತರಿಗೆ ಬೈಬಲ್, ಮುಸ್ಮಿಂ ರಿಗೆಖುರಾನ್ ನಂತೆ ಹಿಂದೂಗಳಿಗೆ ಭಗವದ್ಗೀತೆಯುಒಂದು.ಭೂಮಿಯ ಮೇಲೆ ಅಧರ್ಮ ನೆಲೆಸಿದಾಗ ಶ್ರೀಕೃಷ್ಣನು ಮತ್ತೆ ಹುಟ್ಟಿ ಬರುತ್ತಾನೆ ಎಂಬ ಸಂದೇಶವಿದೆಎಂದು ತಿಳಿಸಿದರು. 

ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್‌ಅವರು ಮಾತನಾಡಿ, ಶ್ರೀಕೃಷ್ಣನ ಜಯಂತಿಯನ್ನುದೇಶದಲ್ಲಿಜಾತಿ ಮೀರಿಆಚರಿಸುತ್ತಾರೆ.ಆ ದಿನ ಮಕ್ಕಳ ಕೃಷ್ಣ-ರಾಧೆಯ ವೇಶ ನೋಡುವುದೇಒಂದುಅದ್ಭುತಎಂದು ಸಂತಸ ವ್ಯಕ್ತಪಡಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವಅಧ್ಯಕ್ಷ ಸಿದ್ಧರಾಮ ಕಲ್ಮಠಅವರು ವಿಶೇಷಉಪನ್ಯಾಸದಲ್ಲಿ ಮಾತನಾಡಿ, ಶ್ರೀಕೃಷ್ಣನು ಧರ್ಮ ಪಾಲನೆಯ ಬಗ್ಗೆ ತಿಳಿಸಿದ ಮಹಾನ್‌ದಾರ್ಶನಿಕ  ವ್ಯಕ್ತಿ. ಭಗವದ್ಗೀತೆಯ ಮೂಲಕ ಧರ್ಮ ಮಾರ್ಗದ ಮೂಲಕ  ಹೇಗೆ ಬದುಕಬೇಕುಎಂಬುದನ್ನು ತಿಳಿಸಿದವರು. ಶ್ರೀಕೃಷ್ಣನ ತತ್ವಗಳು ಇಂದಿಗೂ ಪ್ರಸ್ತುತಎಂದು ತಿಳಿಸಿದರು. 

ಈ ಸಂದರ್ಭದಲ್ಲಿಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಅಧ್ಯಕ್ಷಕೆ.ಇ.ಚಿದಾನಂದಪ್ಪ, ಮಹಾನಗರ ಪಾಲಿಕೆಯ ಸಭಾ ನಾಯಕರು ಹಾಗೂ ಜಿಲ್ಲಾಗೊಲ್ಲರ ಸಂಘ ಅಧ್ಯಕ್ಷ ಪಿ.ಗಾದೆಪ್ಪ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಪಾಲಿಕೆ ಸದಸ್ಯರಾದ ಹೊನ್ನುರ​‍್ಪ, ಝಬ್ಬರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ವೈ.ಬಸವರಾಜತಂಡದಿಂದ ಸಮೂಹ ನೃತ್ಯ ಪ್ರದರ್ಶಿಸಿದರು.