ಜನಪದ ಕಣಜ ಗೋಕಾವಿ ನಾಡು: ಡಾ ರಾಜು ಕಂಬಾರ

ಜನಪದ ಕಣಜ ಗೋಕಾವಿ ನಾಡು: ಡಾ ರಾಜು ಕಂಬಾರ Gokavi Nadu, the granary of folklore: Dr. Raju Kambara

ಗೋಕಾಕ 05: ಜನಪದ ಕಲೆ-ಸಾಹಿತ್ಯ ಸಮೃದ್ಧವಾಗಿದ್ದು, ಮೌಖಿಕ ಪರಂಪರೆಯ ಮೂಲಕ ಅಜ್ಞಾತ ಕವಿಗಳಿಂದ ಬೆಳೆದು ಬಂದ ಜನಪರವಾದ ಸಾಹಿತ್ಯವಾಗಿದೆ ಜಾನಪದ ಚಿಂತಕ ಡಾ.ರಾಜು ಕಂಬಾರ ಅಭಿಪ್ರಾಯಸಿದರು. 

ಗೋಕಾಕ್ ತಾಲೂಕಿನ ಹಳಗಿನಾಳ ಗ್ರಾಮದಲ್ಲಿ ಭಾನುವಾರ ಜರುಗಿದ ಗೋಕಾಕ ತಾಲೂಕಿನ ​‍್ರ​‍್ರಥಮ ಕನ್ನಡ ಜಾನಪದ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ, ಗೋಕಾವಿ ನಾಡಿನ ಜನಪದ ಕಾವ್ಯಗಳು ಕುರಿತು ಮಾತನಾಡಿ, ಪಾರಿಜಾತ ಕರ್ತೃ ಕುಲಗೋಡ ತಮ್ಮಣ್ಣ, ಸಾತು-ಕ್ಯಾಮಣ್ಣ, ಗೋಕಾವಿ ಸಿದ್ದ ಸೇವಕ, ಗೋಕಾಕ ಅನಂತ ಆಚಾರ್ಯರು, ಕವಿ ಬಾಳ ಗೋಪಾಳ ಜನಪದ ಕವಿಗಳು ಜನಪದ ಕಾವ್ಯಗಳನ್ನು ಸೃಷ್ಟಿಸುವ ಮೂಲಕ ಗೋಕಾವಿ ನಾಡನ್ನು ಜನಪದ ಕಣಜವನ್ನಾಗಿರಿಸಿದ್ದಾರೆ. ಗರತಿ ಹಾಡುಗಳು, ಡೊಳ್ಳಿನ ಹಾಡುಗಳು, ಲಾವಣಿ, ಸೋಬಾನೆ,ಚೌಡಕಿ ಮುಂತಾದ ಜನಮನದ ಪದಗಳ ಮೂಲಕ ಗೋಕಾವಿ ಜನಪದ ಸಂಪತ್ಬರಿತ ನಾಡಾಗಿದೆ ಎಂದರು. 

ಗೋಕಾವಿ ನಾಡಿನ ಜನಪದ ಕಲೆಗಳ ಕುರಿತು ವಿಷಯ ಮಂಡಿಸಿದ ಜಾನಪದ ಸಂಶೋಧಕ ಡಾ. ಸುರೇಶ ಹನಗಂಡಿ ಮಾತನಾಡಿ, ಗೋಕಾವಿ ನಾಡು ಜನಪದ ಕಲೆಗಳ ತವರೂರಾಗಿದೆ, ಶ್ರೀ ಕೃಷ್ಣ ಪಾರಿಜಾತ, ದಟ್ಟಿ ಕುಣಿತ, ಪುರುವಂತಿಕೆ, ಡೊಳ್ಳಿನ ಕೈಪಟ್ಟು, ಜಾತಗಾರಿಕೆ ಕಲೆ, ಗೊಂದಲಿಗರ ಕಲೆ ಮುಂತಾದ ಜನಪದ ಕಲೆಗಳ ಮೂಲಕ ಗೋಕಾಕ ನಾಡು ಜನಪದ ಕಲೆಗಳ ಆಗರವಾಗಿದೆ ಎಂದ ಅವರು, ಜನಪದ ಕಲೆಗಳ ಉಳಿವಿಗೆ ಸರಕಾರ ಅಕಾಡೆಮಿಗಳು ಹೆಚ್ಚಿನ ಅನುದಾನಗಳನ್ನು ನೀಡಬೇಕೆಂದರು. 

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ವಹಿಸಿದ್ದರು, ಕಳ್ಳಿಗುದ್ದಿ- ಕಪರಟ್ಟಿ ಆಶ್ರಮದ ಬಸವರಾಜ ಮಹಾಸ್ವಾಮೀಜಿ, ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಸಾನಿಧ್ಯ ವಹಿಸಿದ್ದರು 

ವೇದಿಕೆ ಮೇಲೆ ಬಿವಿ ಹಿರೇಮಠ, ಪ್ರಕಾಶ ಲಕ್ಷಟ್ಟಿ, ಚಿದಾನಂದ ಹೂಗಾರ, ಡಾ. ಮಹದೇವ ಪೋತರಾಜ, ಲಕ್ಷ್ಮೀ ಆರಿಬೆಂಚಿ, ರಾಮಚಂದ್ರ ಪತ್ತಾರ ಸೇರಿದಂತೆ ಹಡಗಿನಾಳ ಗ್ರಾಮದ ಜನಪದ ಚಿಂತಕರು ಉಪಸ್ಥಿತರಿದ್ದರು. 

ಪತ್ರಕರ್ತ ಸಾಧಿಕ ಹಲ್ಯಾಳ ವಿಚಾರಗೋಷ್ಠಿಯ ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಗೋಕಾಕ್ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರಜಯಾನಂದ ಮಾದರ ಅವರ ಮಣ್ಣಿನ ದೀಪಗಳು ಕೃತಿಯ ಕುರಿತು ವಿದ್ಯಾ ರೆಡ್ಡಿ ಪರಿಚಯಿಸಿದರು. ಶಿಕ್ಷಕ ಎಸ್‌.ಕೆ. ಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.