ನಿಸ್ವಾರ್ಥ ಭಕ್ತಿಯಿಂದ ದೇವರನ್ನು ಕಾಣಬಹುದು: ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

  ನಿಸ್ವಾರ್ಥ ಭಕ್ತಿಯಿಂದ ದೇವರನ್ನು ಕಾಣಬಹುದು: ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ  God can be seen through selfless devotion: Hosalli Abhinava Budheeshwara Swamiji

ಲೋಕದರ್ಶನ ವರದಿ 

ವರದಿ: ಅಡಿವೇಶ ಮುಧೋಳ

ಬೆಟಗೇರಿ 28: ನಿಮ್ಮ ಧೃಢ ಮನಸ್ಸಿನ ಭಕ್ತಿ ದೇವರದಡೆ ಕರೆದುಕೊಂಡು ಹೋಗುತ್ತದೆ. ಮುಗ್ಧ ಮನಸ್ಸಿನ ಬಲ್ಲಾಳ ನಂಬಿಕೆಯ ಭಕ್ತಿ ಮೂಲಕ ಕುರಿ ಹಿಕ್ಕಿಯಲ್ಲಿ ಲಿಂಗದ ರೂಪದಲ್ಲಿ ಪರಮಾತ್ಮನನ್ನು ಕಾಣುತ್ತಾನೆ. ಇಂದು ಪ್ರಸಿದ್ಧ ಬಲ್ಲಾಳೇಶ್ವರ ಸುಕ್ಷೇತ್ರವಾಗಿ ಉಳಿದಿದೆ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರೆ​‍್ಣ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ​‍್ರ​‍್ರಥಮವಾಗಿ ಇದೇ ಏ.26ರಿಂದ ಏ.30ರವರೆಗೆ ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಏ.27ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ನಡೆದ ಪ್ರವಚನದಲ್ಲಿ ಮಾತನಾಡಿದ ಅವರು, ನಿಮ್ಮ ನಿಸ್ವಾರ್ಥ ಭಕ್ತಿಯಿಂದ ದೇವರನ್ನು ಕಾಣಬಹುದು ಎಂದರು. 

ಭಕ್ತಿಯಿಂದ ಭಗವಂತನ ದರ್ಶನವಾಗುತ್ತದೆ. ಆಸ್ತಿ ಮತ್ತು ಅಂತಸ್ತಗಳಿಗೆ, ಶಾಲು ಮತ್ತು ಮಾಲೆಗಳಿಗೆ ದೇವರು ಒಲಿಯುವುದಿಲ್ಲಾ, ನಿನ್ನ ಮಗ್ಧ ಮನಸ್ಸಿನ ಪ್ರೀತಿಯ ಭಕ್ತಿಯಿಂದ ದೇವರು ಒಲಿಯುತ್ತಾನೆ. ದೇವರ ಮೇಲೆ ಧೃಡವಾದ ನಂಬಿಕೆ ಇರಬೇಕು. ದೇವರ ಒಲುಮೆಯಾಗಬೇಕಾದರೆ ನಿಸ್ಕಾಮ ಮತ್ತು ಪ್ರೀತಿಯ ಭಕ್ತಿ ಇರಬೇಕು ಅಂತಾ ಹಲವಾರು ದೃಷ್ಟಾಂತಗಳನ್ನು ಹೇಳುವುದರ ಮೂಲಕ ಭಕ್ತಿ ಎಂಬ ವಿಷಯದ ಮೇಲೆ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಪ್ರವಚನ ಹೇಳಿದರು.  ಸ್ಥಳೀಯ ಪ್ರವಚನ ಕಾರ್ಯಕ್ರಮಕ್ಕೆ ತನು, ಮನ, ಧನ ಸಹಾಯ, ಸಹಕಾರ ನೀಡಿದ ದಾನಿಗಳನ್ನು, ಗಣ್ಯರನ್ನು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಅವರು ಸತ್ಕರಿಸಿದರು. ಮಲ್ಲಿಕಾರ್ಜುನ ಕೊಡಗನೂರ ಅವರಿಂದ ತಬಲಾ ಸಾಥದೊಂದಿಗೆ ಕಲ್ಲೂರದ ಶಂಕರಯ್ಯ ಗುರುಮಠ ಅವರಿಂದ ಸಂಗೀತ ಸೇವೆ ನಡೆಯಿತು.