ಪಡೆದ ಶಿಕ್ಷಣ ಸಾರ್ಥಕಪಡಿಸಿಕೊಳ್ಳಲು ಮುಂದಾಗಿ: ಶಾಸಕ ಲಮಾಣಿ

ಪಡೆದ ಶಿಕ್ಷಣ ಸಾರ್ಥಕಪಡಿಸಿಕೊಳ್ಳಲು ಮುಂದಾಗಿ: ಶಾಸಕ ಲಮಾಣಿ Go ahead to make the education you have received worthwhile: MLA Lamani

ಶಿರಹಟ್ಟಿ 8: ಪ್ರತಿಯೊಬ್ಬರೂ ಪಡೆದುಕೊಂಡ ಶಿಕ್ಷಣ ಮುಂದಿನ ಜೀವನಕ್ಕೆ ಮಾರ್ಗಸೂಚಿಯಾಗಲಿ ಪಡೆದುಕೊಂಡ ಶಿಕ್ಷಣ ಶಿಕ್ಷಣ ಮುಂದಿನ ಜೀವನಕ್ಕೆ ದಾರೀದೀಪವಾಗಲಿ, ಅದಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣವನ್ನು ಸಾರ್ಥಕ ಪಡಿಸಿಕೊಳ್ಳಲು ಮುಂದಾಗಬೇಕೆಂದು ಶಾಸಕ ಚಂದ್ರು ಲಮಾಣಿ ಹೇಳಿದರು. ಅವರ ಪಟ್ಟಣದ ಎಫ.ಬಿಪೂಜಾರ ಸರಕಾರಿ ದಪವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥು ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು 2005-26ನೇ ಸಾಲಿನ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿಮಾತನಾಡಿದರು.  

ಅವರು ಮಾತನಾಡುತ್ತ ಮಹಾವಿದ್ಯಾಲಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಲು ನಾನು ಸದಾಸಿದ್ದವಾಗಿದ್ದು, ಆದರೆ ಅನುದಾನದ ಕೊರತೆಯಿಂದಾಗಿ ಅಭಿವೃದ್ದಿ ಮರೀಚಕೆಯಾಗುತ್ತಿದೆ. ನನ್ನ ಕ್ಷೇತ್ರ ಲಭ್ಯವಾಗಿರುವ ಅನುದಾನವನು ಒದಗಿಸುವಲ್ಲಿ ತಾರತಮ್ಯವಗುತ್ತಿದ್ದು, ಇದಕ್ಕಾಗಿ ನಾನು ಹೋರಾಟವನ್ನು ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ದಿ ನನ್ನ ಗುರಿಯಾಗಿದ್ದು,ಯಾವುದೇ ಕಾರಣಕ್ಕೂ ಹಿಂಜರೆಯುವುದಿಲ್ಲ. ಸದ್ಯ ಜಿಲ್ಲಾಧಿಕಾರಿಗಳು ನನ್ನ ಕ್ಷೇತ್ರ ಸಂದಾಯವಾಗಿರುವ ಅನುದಾವನ್ನು ಬಿಡುಗಡೆ ಮಾಡಬೇಕು. 

ಎಫ್‌ಡಿಪಿ ಹಣವನ್ನು ನನ್ನ ಕ್ಷೇತ್ರದ ಅನುದಾನವನು ನನಗೆ ಒದಗಿಸಬೇಕು. ನಾನು ಕಾಲೇಜಿನ ಅಬಿವೃದ್ದಿಗಾಗಿ ಹಣವನ್ನು ನೀಡವಂತೆ ಕೋರಿದ್ದರೂ ಜಿಲ್ಲಾಧಿಕಾರಿಗಳು ಹಿಂದೇಟತೆಯನ್ನು ಮಾಡುತ್ತಿರುವುದು ನಮ್ಮನ್ನು ಕೆಣಕುವಂತೆ ಕಾಣುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪದನೋನ್ನತಿ ಹೊಂದ ವರ್ಗಾವಣೆ ಗೊಂಡ ಎಸ್‌.ವಾಯ್ ಮುಜಾವರ ರವರಿಗೆ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿಹಾಗೂ ಮುಖ್ಯ ಅತಿಥಿ ಆರ್‌ಏಫ್‌ಓ ರಾಮಪ್ಪ ಮಾತನಾಡಿ, ಕಾಲೇಜಿನಲ್ಲಿ ಪಡೆದ ಶಿಕ್ಷಣ ಅಥವಾ ಜ್ಞಾನವನ್ನು ಮುಂದಿನ ಜೀನವನದಲ್ಲಿ ಅಳವಡಿಕೊಂಡು ಬದಲಾಗಬೇಕು.  

ಒಂದು ವ್ಯೆವಸ್ಥೆಯಲ್ಲಿ ಕಲಿತ ಜ್ಞಾನವನ್ನು ಮುಂದಿನ ಜೀವನದಲ್ಲಿ ವೃದ್ದಿಪಡಿಸಿಕೊಂಡು ಅಭಿವೃದ್ದಿಯಾಗುವುದೇ ನಿಜವಾದ ಶಿಕ್ಷಣ ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣದಿಂದ ಪಡೆದ ಜ್ಞಾವನ್ನು ಸದ್ಬಳಕೆಮಾಡಿಕೊಂಡು ಅಭಿವೃದ್ದಿಹೊಂದಬೆಕೆಂದು ಹೇಳಿದರು. ನಂತರ 2024-25ನೇ ಸಾಲಿನಲ್ಲಿ ಕಾಲೇಜಿಗೆ ಹಾಗೂ ತಾಲೂಕ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು ಕಾರ್ಯಕ್ರಮದಲ್ಲಿ ಕೆ.ಎ.ಬಳಿಗೇರ, ಪರಸಪ್ಪ ಪೂಜಾರ, ಗೌತಮ ಕಪ್ಪತ್ತನವರ, ರಾಮಣ್ಣ ಕಂಬಳಿ ನಟರಾಜ ರಾನಡೆ, ಪ್ರಾಚಾರ್ಯ ಬಿ.ಜಿ ಗಿರಿತಿಮ್ಮಣ್ಣವರ, ಶ್ರೀನಿವಾಸ ಕಪಟಕರ, ಉಪನ್ಯಾಸಕಿ ರಾಜೇಶ್ವರಿ ಸಂಶಿ,, ಪರಿಮಳ ಆರ್‌. ಲಿಂಗರಾಜ ಯತ್ನಳ್ಳಿ,ಚಿನ್ಮಯಿ ಕಪ್ಪತ್ತನವರ, ಗೀರೀಶ ರೆಡ್ಡೇರ,ಸುಜೀತ ಕೋಳಿ, ,ಚಂದನಾ, ಶಾಹೀನ್, ಶಿರಹಟ್ಟಿ ಎಫ್‌.ಬಿ.ಪೂಜಾರ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮವರ್ಷದ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು 2025-26ನೇ ಸಾಲಿನ ಸಂಸ್ಕೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಚಂಧ್ರ ಲಮಾಣಿ ಮಾತನಾಡಿದರು.