ಜಾಗತಿಕವಾಗಿ ಭಾರತ ಮತ್ತಷ್ಟು ಸದೃಢವಾಗುತ್ತಿದೆ!

ಹಿಂದೊಂದು ಕಾಲವಿತ್ತು, ಆ ಕಾಲದಲ್ಲಿ ಅಮೇರಿಕಾ ಹಾಗೂ ಪಶ್ಚಿಮ ರಾಷ್ಟ್ರಗಳ ರಾಜತಾಂತ್ರಿಕರಿಗೆ, ವಿಶ್ವದ ವೇದಿಕೆಯ ಮೇಲೆ ಅವಕಾಶ ಸಿಕ್ಕಾಗಲೆಲ್ಲ ಭಾರತದ ಬಗ್ಗೆ ಅತ್ಯಂತ ತುಚ್ಚವಾಗಿ ಮಾತನಾಡುತ್ತಿದ್ದರು, ’ಭಾರತಕ್ಕೊಂದು ನಿರ್ದಿಷ್ಟವಾದ ವಿದೇಶಾಂಗ ನೀತಿ ನಿಲುವುಗಳಿಲ್ಲ, ಭಾರತ ಯಾವುದೇ ವಿಷಯದಲ್ಲಿ ಒಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುಲು ಸಾಧ್ಯ ಆಗೊದಿಲ್ಲ. ಅವರ ನಿಲುವುಗಳು ಯಾವಾಗಲೂ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಇರುತ್ತವೆ.  ಭಾರತ ಯಾರ ಪರ ಯಾರ ವಿರುದ್ದ ಯಾವತ್ತೂ ಮಾತನಾಡುವುದಿಲ್ಲ. ಅವರು ಸಂಪೂರ್ಣವಾಗಿ ಯಾರನ್ನೂ ಬೆಂಬಲಿಸುವುದಿಲ್ಲ ಹಾಗೂ ಯಾವುದೇ ರಾಷ್ಟ್ರದ ಗುಂಪಿನೊಂದಿಗೂ ಗುರುತಿಸಿಕೊಳ್ಳುವುದಿಲ್ಲ ಹಾಗಾಗಿ ಭಾರತದ್ದು ಬೆನ್ನೆಲುಬಿಲ್ಲದ ವಿದೇಶಾಂಗ ನೀತಿ ಅಂತ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಹರಿ ಬಿಡುತ್ತಲೇ ಇರುತ್ತಿದ್ದರು. ಅವರೆಲ್ಲ ಮನಸ್ಸಿಗೆ ಬಂದತೆ ಮಾತನಾಡಿದ್ದರೂ ಕೂಡಾ ಇದೇ ಕಾರಣದಿಂದ ಭಾರತಕ್ಕೆ ಒಂದಿಷ್ಟು ಲಾಭಗಳು ಆಗಿವೆ ಮತ್ತು ನಷ್ಟ ಕೂಡಾ ಆಗಿದೆ.   

ಪ್ರಸ್ತುತ ಭಾರತದ ರಾಜತಾಂತ್ರಿಕತೆ, ವಿದೇಶಾಂಗ ನೀತಿ-ನಿಲುವುಗಳು ವಿಶ್ವದ ಪ್ರಶಂಸೆಗೆ ಸಾಕ್ಷಿ ಆಗಿವೆ. ಈ ಸಂದರ್ಭದಲ್ಲಿ ಭಾರತ ಜಾಗತಿಕವಾಗಿ ತೆಗೆದುಕೊಳ್ಳುವ ಒಂದೊಂದು ನಿರ್ಧಾರಗಳು ಕೂಡಾ ಜಗತ್ತಿನ ಗಮನ ಸೆಳೆಯುತ್ತಿವೆ. ಹಾಗಾಗಿ ವಿಶ್ವದ ಅನೇಕ ರಾಷ್ಟ್ರಗಳು ಭಾರತದ ಮಾದರಿಯ ವಿದೇಶಾಂಗ ನೀತಿಯನ್ನ ಅನುಸರಿಸಲು ಬಹಳ ಉತ್ಸುಕತೆಯಲ್ಲಿವೆ.  

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಆ ಸಂದರ್ಭದಲ್ಲಿ, ಜಗತ್ತಿನಲ್ಲಿ ಬ್ರಿಟನ್ ಮತ್ತು ಪ್ರಾನ್ಸ್‌ ರಾಷ್ಟ್ರಗಳು ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದರಿಂದ ಅಮೆರಿಕಾ ಹಾಗೂ ಸೋವಿಯತ್ ಯೂನಿಯನ್‌ಗಳು ಬಹು ದೊಡ್ಡ ಶಕ್ತಿಗಳಾಗಿ ಬೆಳೆಯಲಾರಂಭಿಸಿದ್ದವು. ಅವತ್ತು ವಿಶ್ವದ ಅಧಿಪತ್ಯಕ್ಕಾಗಿ ಇಂಗ್ಲೆಂಡ್ ಹಾಗೂ ಫ್ರಾನ್ಸ್‌ ರಾಷ್ಟ್ರಗಳು ಹೇಗೆ ಕಿತ್ತಾಡುತ್ತಿದ್ದವೋ, ಅದೇ ರೀತಿ ಇಂದು ಅಮೆರಿಕಾ ಮತ್ತು ರಶಿಯಾಗಳ ನಡುವೆ ಘರ್ಷಣೆ ಉಂಟಾಗುತ್ತಿದೆ. ಈ ಎರಡೂ ರಾಷ್ಟ್ರಗಳು ಬಹಳಷ್ಟು ಶಕ್ತಿಶಾಲಿ ಹಾಗೂ ಚಾಣಾಕ್ಷತೆಯನ್ನ ಹೊಂದಿವೆ. ಹಾಗಾಗಿ ಇವು ನೇರವಾಗಿ ಯುದ್ದಕ್ಕೆ ಇಳಿದಿಲ್ಲ, ಅಣ್ವಸ್ತ್ರ ಶಕ್ತಿಯನ್ನು ಹೊಂದಿದ ಈ ರಾಷ್ಟ್ರಗಳು ಯುದ್ದ ಮಾಡಿ ಬಿಟ್ಟರೆ ಅದರ ಪರಿಣಾಮ ಎರಡೂ ರಾಷ್ಟಗಳಿಗೂ ಗೊತ್ತಿತ್ತು. ಆದ್ದರಿಂದ ಬೇರೆ ಬೇರೆ ದೇಶಗಳ ನಡುವಿನ ಯುದ್ದಗಳು, ಅಂತರ್ ಕಲಹಗಳಲ್ಲಿ ಅಮೆರಿಕಾ ಮತ್ತು ರಶಿಯಾಗಳು ಭಾಗಿ ಆಗುತ್ತಲಿವೆ. ರಶಿಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ಅಮೆರಿಕಾ ಉಕ್ರೇನಿನ ಪರ ನಿಂತಿತ್ತು. ಆ ಮೂಲಕ ವಿಶ್ವದಲ್ಲೀಗ ರಶಿಯಾ ಬೆಂಬಲಿತ ರಾಷ್ಟ್ರಗಳು, ಅಮೇರಿಕಾ ಕೂಟದ ದೇಶಗಳು ಅಂತ ಎರಡು ಬ್ಲಾಕ್‌ಗಳು ಹುಟ್ಟಿಕೊಂಡಿವೆ. ಇದನ್ನೇ ಶೀತಲ ಸಮರ ಅಂತ ಕರೆಯುತ್ತಾರೆ. ಹಾಗಾಗಿ ಜಗತ್ತಿನ ರಾಷ್ಟ್ರಗಳಿಗೆ ಇದೀಗ ರಶಿಯಾವನ್ನು ಬೆಂಬಲಿಸಬೇಕೊ? ಅಥವಾ ಅಮೇರಿಕಾವನ್ನು ಬೆಂಬಲಿಸಬೇಕೊ? ಎಂಬ ಗೊಂದಲದ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಪಾಕಿಸ್ತಾನ ಮಾತ್ರ ಸಡನ್ ಆಗಿ ಅಮೇರಿಕಾ ಕೂಟವನ್ನ ಸೇರಿಕೊಂಡಿತು. ಆದರೆ ಭಾರತ ಮಾತ್ರ ಯಾವುದೇ ಕೂಟ, ಗುಂಪನ್ನು ಸೇರಿಕೊಳ್ಳದೆ ಚಾಣಾಕ್ಷತನದಿಂದ ತಟಸ್ಥ ನಿಲುವನ್ನು ಅನುಸರಿಸಿತು. ಯುದ್ದ ಕಲಹಗಳಿಂದ ದೂರ ಉಳಿಯಲು ನಿರ್ಧರಿಸುವ ಮೂಲಕ ಅಲಿಪ್ತ ನೀತಿಯನ್ನು  ಅನುಸರಿಸಿತು. ಇದರ ಪರಿಣಾಮ, ಜಗತ್ತಿನ ಹಲವಾರು ರಾಷ್ಟ್ರಗಳಿಂದು ಭಾರತವನ್ನು ಅನುಸರಿಸುವ ಹಾಗಾಗಿದೆ.  

ನಮಗೆ ಸ್ವಾತಂತ್ರ್ಯ ಬರುವ ಮುನ್ನ, ಭಾರತ ಜಾಗತಿಕ ಯುದ್ದಗಳಲ್ಲಿ ಯಾರ ಪರವು ನಿಲ್ಲಬಾರದೆಂಬ ನಿರ್ಧಾರಗಳನ್ನು ಅಂದು ಸರ್ದಾರ್ ಪಟೇಲ್ ಹಾಗೂ ನೆಹರೂರವರು ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡಿದ್ದರು. ಆದರೆ ಅದಕ್ಕೊಂದು ಹೆಚ್ಚಿನ ಪ್ರಾಧಾನ್ಯತೆ ಸಿಕ್ಕಿರಲಿಲ್ಲ. ಅಂದು ಭಾರತ ಎರಡು ವಿಶ್ವ ಯುದ್ದಗಳಲ್ಲಿ ತನ್ನ ಅಸಂಖ್ಯಾತ ಸೈನಿಕರನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಅದರಿಂದ ಭಾರತೀಯ ಸೇನೆಗೆ ಯುದ್ಧದ ಅನುಭವ ಕೂಡಾ ಬಹಳ ಚನ್ನಾಗಿ ಆಗಿದ್ದವು. ನಮ್ಮ ದುರ್ದೈವಕ್ಕೆ ಆ ಎರಡೂ ಯುದ್ದಗಳಲ್ಲಿ ಭಾರತ ಬ್ರಿಟಿಷರ ಪರವಾಗಿ ನಿಂತು ಕಾದಾಡುವ ಅನಿವಾರ್ಯತೆ ಎದುರಾಗಿತ್ತು. ಭಾರತ ಸ್ವಾತಂತ್ರ್ಯಾ ನಂತರ ನಡೆದ ಪ್ರಜಾ ಪ್ರತಿನಿಧಿ ಸಭೆಯೊಂದರಲ್ಲಿ ನೆಹರೂ ಅವರು   

’ನಾವು ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಬಯಸುತ್ತೇವೆ’ ಅಂತ ಹೇಳುವ ಜೊತೆಗೆ ಭಾರತದ ಮುಂದಿನ ವಿದೇಶಾಂಗ ನೀತಿ ಹೇಗಿರುತ್ತದೆ ಎಂಬುದರ ಸುಳಿವು ಕೊಟ್ಟಿದ್ದರು. 1954ರಲ್ಲಿ ನೆಹರು ಅವರು  ಶ್ರೀಲಂಕಾದ ಭಾಷಣವೊಂದರಲ್ಲಿ ’ಅಲಿಪ್ತ ಚಳುವಳಿ’ ಎಂಬ ಹೆಸರನ್ನು ಹುಟ್ಟಿಹಾಕಿ ಅದನ್ನು 1955ರ ಇಂಡೋನೇಷ್ಯಾದ ಸಮ್ಮೇಳನದಲ್ಲಿ ಈ ಅಲಿಪ್ತ ನೀತಿಯನ್ನು ಸ್ವೀಕರಿಸುವ ಮೂಲಕ ಅಲಿಪ್ತ ರಾಷ್ಟ್ರಗಳ ಹುಟ್ಟಿಗೆ ಕಾರಣವಾಯಿತು. 1961ರಲ್ಲಿ ಯುಗೊಸ್ಲಾವಿಯದ, ಬೆಲ್ ಗ್ರೇಡ್‌ನಲ್ಲಿ, ಅಲ್ಲಿನ ಅಧ್ಯಕ್ಷ ಜೋಶಪ್ ಬ್ರೂಸ್ಟಿಟೊ ಹಾಗೂ ನೆಹರೂ ಪ್ರಯತ್ನದಿಂದ non aligned movement ನ್ನು ಸ್ಥಾಪನೆ ಮಾಡುವ ಮೂಲಕ ಅಲ್ಲಿ ಅಣ್ವಸ್ತ್ರ ನಿಶಸ್ತ್ರಿಕರಣಕ್ಕೆ ಆದ್ಯತೆಯನ್ನು ಕೊಟ್ಟರು. ಹೀಗೆ ಈ ರೀತಿಯ ಹತ್ತಾರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಈ ನಿರ್ಣಯಗಳು ಮುಂದೆ ಸದಸ್ಯ ರಾಷ್ಟ್ರಗಳ ವಿದೇಶಾಂಗ ನೀತಿಯ ಭಾಗಗಳಾದವು. ಹೀಗೆ ಅಂದು ಅಲಿಪ್ತ ನೀತಿಯನ್ನು ಮೊದಲು ಒಪ್ಪಿಕೊಳ್ಳುವುದರೊಂದಿಗೆ ಅದನ್ನು ಭಾರತವೇ ವಿಶ್ವಕ್ಕೆ ಕೊಟ್ಟಿತು.  

ತದನಂತರ ವಿಶ್ವದಲ್ಲಿ ನಡೆದ ಜಾಗತೀಕ ಸಂಘರ್ಷಗಳು, ಶೀತಲ ಸಮರಗಳಲ್ಲಿ, ಭಾರತ ತನ್ನ ತಟಸ್ಥ ನಿಲುವುಗಳನ್ನು ಪ್ರದರ್ಶಿಸುವ ಮೂಲಕ ಬಹಳ ಜಾಣ್ಮೆಯಿಂದ ಹೆಜ್ಜೆಗಳನ್ನಿಟ್ಟಿತ್ತು. ಆದರೆ ಭಾರತ ಅದೆಷ್ಟೇ ಶಾಂತಿಯಿಂದ ಇರಲು ಬಯಸುತ್ತಿತ್ತಾದರೂ ಅಕ್ಕಪಕ್ಕದ ರಾಷ್ಟ್ರಗಳು ಮಾತ್ರ ಭಾರತವನ್ನು ಶಾಂತಿಯಿಂದ ಇರಲಿಕ್ಕೆ ಬಿಡದೆ ಸುಖಾಸುಮ್ಮನೆ ಕೆನಕುತ್ತಲೇ ಇರುತ್ತವೆ. ಪಾಕಿಸ್ತಾನ ಹಾಗೂ ಚೀನಾದೊಂದಿಗೆ ಭಾರತ ಪದೆ ಪದೆ ಸಂಘರ್ಷಕ್ಕೆ ಇಳಿಯುತ್ತಲೇ ಇದೆ. ಇನ್ನು ಅಮೇರಿಕಾ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವು ಹಾಗೂ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನೋಡಿದ ಮೇಲೆ, ಭಾರತಕ್ಕೆ ತನ್ನನ್ನು ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರಗಳು ಬೇಕು ಎಂಬ ಸಂಗತಿ ತಿಳಿಯಿತು. ಹಾಗಾಗಿ ಭಾರತ ರಶಿಯಾದೊಂದಿಗೆ ತನ್ನ ಸ್ನೇಹ ಸಂಭಂದಗಳನ್ನು ಮತ್ತಷ್ಟು ವೃದ್ದಿಸಿಕೊಳ್ಳುವ ಮೂಲಕ ರಶಿಯಾದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿತ್ತು. ತದನಂತರ ರಶಿಯಾದ ಸಾಕಷ್ಟು ಆಯುಧಗಳು ಭಾರತಕ್ಕೆ ಬಂದವು. ಭಾರತ ಅಣ್ವಸ್ತ್ರ ನಿಶಸ್ತ್ರೀಕರಣವನ್ನು ಒಪ್ಪಿಕೊಂಡಿದ್ದರೂ ಕೂಡಾ ಅನಿವಾರ್ಯವಾಗಿ ಅಣು ಪರೀಕ್ಷೆಯನ್ನು ಮಾಡಿ ಜಗತ್ತಿನೆದುರು ಅಣ್ವಸ್ತ್ರ ಶಕ್ತ ರಾಷ್ಟ್ರವಾಯಿತು. ಆಯುಧಗಳ ವಿಷಯದಲ್ಲಂತೂ ಭಾರತ ಹೆಚ್ಚಾಗಿ ರಶಿಯಾವನ್ನು ಅವಲಂಬಿಸುತ್ತ ಬಂದಿದೆ. ರಶಿಯಾದೊಟ್ಟಿಗೆ ಇಸ್ರೇಲ್ ಹಾಗೂ ಫ್ಲಡ್ ರಿಮ್ ರಾಷ್ಟ್ರಗಳ ಜೊತೆಗೆ ಒಂದೆ ತರಹದ ಸಂಭಂದಗಳನ್ನು ಇಟ್ಟುಕೊಂಡಿದೆ.  

ಅಲಿಪ್ತ ನೀತಿಯ ಕಾರಣಕ್ಕೆ ಅಮೇರಿಕಾ ಭಾರತದಿಂದ ದೂರ ಉಳಿಯಿತು. ಮತ್ತು ಬಹುತೇಕ ಪಶ್ಚಿಮದ ರಾಷ್ಟ್ರಗಳು ಭಾರತವನ್ನು ತಮ್ಮ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ ಹಾಗಾಗಿ ಭಾರತಕ್ಕೆ ವಿದೇಶಿ ಬಂಡವಾಳ ಹರಿದು ಬರಲಿಕ್ಕೆ ಬಹಳಷ್ಟು ಸಮಯ ಬೇಕಾಯಿತು. ಆದರೆ ಭಾರತ ಮಾತ್ರ ತನ್ನ ನಿಲುವನ್ನು ಯಾವತ್ತೂ ಬದಲಿಸಿಕೊಳ್ಳಲಿಲ್ಲ. ಇತ್ತೀಚೆಗೆ ರಶಿಯಾ ಉಕ್ರೇನ್ ಯುದ್ದ ಶುರುವಾಗಿದ್ದ ಬೆನ್ನಲ್ಲಿ, ಭಾರತ ತಟಸ್ಥ ನೀತಿಯನ್ನು ಅನುಸರಿಸಿತ್ತು. ಉಕ್ರೇನ್ ಪರ, ರಶಿಯಾ ವಿರುದ್ದ ಮಾತನಾಡದೆ ಸುಮ್ಮನಿದ್ದ ಇದ್ದ ವಿಷಯವನ್ನು, ಅದೇ ಒಂದು ದೊಡ್ಡ ಅಪರಾಧ, ರಶಿಯಾವನ್ನು ಖಂಡಿಸಿದರೆ ಮಾತ್ರ ಮಾನವೀಯತೆಯ ವರ್ತಕರಾಗೊದಕ್ಕೆ ಸಾಧ್ಯ ಅನ್ನೊ ರೀತಿಯ ವಾತಾವರಣವನ್ನು  ಅಮೇರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳು ಸೃಷ್ಟಿ ಮಾಡಿಬಿಟ್ಟಿದ್ದವು.   ಜೊತೆಗೆ ರಶಿಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಿಕೊಂಡು ಉಕ್ರೇನಿಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ಸಹಾಯ ಮಾಡುವ ಮೂಲಕ ಉಕ್ರೇನಿನ ಮೇಲೆ ತಮ್ಮ ಸಿಂಪತಿಯನ್ನು ವ್ಯಕ್ತಪಡಿಸಿದ್ದವು. ’ಈ ಬಾರಿ ಭಾರತಕ್ಕೆ ಅಲಿಪ್ತ ನೀತಿಯನ್ನು ಅಳವಡಿಸಿಕೊಳ್ಳೊದಕ್ಕೆ ಸಾಧ್ಯ ಆಗಲ್ಲ, ಬದಲಿಗೆ ರಶಿಯಾ ಅಥವಾ ಅಮೇರಿಕಾ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಅಂತ ಇವರು ಅಂದುಕೊಂಡಿದ್ದರು. ಹಾಗೆ ಅಂದುಕೊಂಡಿದ್ದ ಬೆನ್ನಲ್ಲಿ ಭಾರತ ತನ್ನ ಚಾಣಾಕ್ಷತನದಿಂದ ಮತ್ತೆ ತಟಸ್ಥವಾಗಿ ಉಳಿಯಿತು. ರಶಿಯಾದೊಂದಿಗೆ ತನ್ನ ವ್ಯಾಪಾರ ವಹಿವಾಟುಗಳನ್ನು ಮುಂದು ವರೆಸಿತು. ಹಾಗೂ ಅಮೇರಿಕಾದ ಜೊತೆಗಿನ ‘ಕ್ವಾಡ್ ಕೂಟದ’ ಭಾಗವಾಗಿಯೂ ಉಳಿಯಿತು. ಹೀಗಿರುವಾಗ ಭಾರತದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಶುರುವಾಗುತ್ತವೆ. ’ನಿಮ್ಮ ಮೇಲೆ ಉಕ್ರೇನಿನ ಪಾಪ ಅಂಟಿಕೊಳ್ಳುತ್ತದೆ’ ಹಾಗಾಗಿ ರಶಿಯಾದೊಂದಿಗೆ ವ್ಯಾಪಾರ ಮಾಡಬೇಡಿ ಅಂತ ಮೇಲಿಂದ ಮೇಲೆ ಒತ್ತಡವನ್ನು ಹಾಕುತ್ತಿದ್ದರು. ಭಾರತ ಇದ್ಯಾವುದಕ್ಕೂ ತೆಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ.   

ಭಾರತ ಇದೀಗ ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರಗಳಲ್ಲೊಂದು. ಮೊದಲಿನಂತೆ ಹೇಳಿದ್ದೆಲ್ಲವನ್ನು ಕೇಳಿಕೊಂಡು ಸುಮ್ಮನೆ ಇರುವ ಜಾಯಮಾನ ಭಾರತದ್ದಲ್ಲ. ತನ್ನ ವಿರುದ್ದ ಮಾತನಾಡಿದವರಿಗೆ ಅವರದ್ದೇ ದಾಟಿಯಲ್ಲಿ ಉತ್ತರ ಕೊಡುತ್ತದೆ. ಭಾರತ ಯಾರ ಪರ, ಯಾರ ವಿರುದ್ದ ನಿಲ್ಲಲ್ಲ ಅಂದ್ರೆ, ಅದಕ್ಕೆ ನಿಲುವುಗಳು ಇಲ್ಲ ಅಂತ ಅಲ್ಲ. ಈ ಸಂದರ್ಭದಲ್ಲಿ ತಟಸ್ಥವಾಗಿರುವುದೇ ಭಾರತದ ಮುಖ್ಯವಾದ ನಿಲುವು. ಹಾಗೆ ಗಟ್ಟಿ ದನಿಯಲ್ಲಿ ಗುಡುಗಿದ್ದ ವಿದೇಶಾಂಗ ಸಚಿವ ಜೈಶಂಕರ್ ರವರನ್ನ ಮೆಚ್ಚಲೆಬೇಕು. ‘ನಾವು ಯಾವಾಗಲೂ ನಮ್ಮ ಪರವಾಗಿ ಮಾತ್ರ ಇರುತ್ತೇವೆ. ಯಾರ ಜೊತೆಗಿನ ವ್ಯಾಪಾರ ನಮಗೆ ಲಾಭ ಅನಿಸುತ್ತದೆಯೋ ಅವರೊಂದಿಗೆ ನಾವು ವ್ಯವಹರಿಸುತ್ತೇವೆ, ಅದರಲ್ಲೂ ನಮ್ಮದು 140 ಕೋಟಿ ಜನಸಂಖ್ಯೆ ಇರುವ ದೊಡ್ಡ ರಾಷ್ಟ್ರ. ಬೆಲೆ ಏರಿಕೆ, ಹಾಗೂ ಯುದ್ದಗಳ ಬಿಸಿಗೆ ನಮ್ಮ ಜನರನ್ನು ತಳ್ಳಲು ನಾವು ಸಿದ್ದರಿಲ್ಲ ಅಂತ ಹೇಳುವ ಮೂಲಕ ವಿಶ್ವವನ್ನು ಎಚ್ಚರಿಸಲಾಗಿತ್ತು. ಭಾರತದ ಈ ನಿಲುವುಗಳನ್ನು  ಬಹಳ ಸೂಕ್ಷ್ಮವಾಗಿ ಗಮನಿಸಿದ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಭಾರತದ ನಿರ್ಧಾರಗಳು ಸತ್ಯ ಅನಿಸಿದ್ದವು. ಇದರ ಪರಿಣಾಮ, ಮುಂದೆ ರಶಿಯಾ ಮತ್ತು ಅಮೇರಿಕಾ ಎರಡರ ಪೈಕಿ ಯಾರ ಪರ ವಾಲಬೇಕು? ಯಾರನ್ನು ವಿರುದ್ದ ಕಟ್ಟಿಕೊಳ್ಳಬೇಕೆಂಬ ಗೊಂದಲದಲ್ಲಿದ್ದ ಸುಮಾರು ನಲವತ್ತಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ಪರ ವಾಲೊದಕ್ಕೆ ಆರಂಭಿಸಿದವು. ಅದರ ಫಲ ಶೃತಿಯೇ ಮೊನ್ನೆ ‘united urab Emirates’s’ ನ ವಿದೇಶಾಂಗ ಸಚಿವರಾದ  ‘ಓಮರ್ ಸುಲ್ತಾನ್ ಅಲ್ ಒಲಾಮಾ’ ಅವರು ಬಹಿರಂಗವಾಗಿ ’ನಾನು ಭಾರತದ ವಿದೇಶಾಂಗ ನೀತಿ ಮತ್ತು ವಿದೇಶಾಂಗ ಸಚಿವರ ಪ್ಯಾನ್ ಅಂತ ಹೇಳಿಕೊಂಡಿದ್ದರು.  

ಭಾರತದ ಚಾಣಾಕ್ಷ ನೀತಿಯಿಂದ ಆಗುತ್ತಿರು ಲಾಭಗಳನ್ನು ಗಮನಿಸಿದ ಅನೇಕ ದೇಶಗಳು ಈ ಪಶ್ಚಿಮ ರಾಷ್ಟ್ರಗಳ ಹಿಪಾಕ್ರಾಸಿಯನ್ನು ಅರ್ಥ ಮಾಡಿಕೊಳ್ಳುತ್ತಿವೆ. ಸೌದಿ ಮತ್ತು ಅರಬ್ ಎಮಿರೇಟ್ಸ್‌ ಗಳಂತೂ ಅಮೇರಿಕಾ ಮೇಲಿನ ಡಿಫೆಂಡೆನ್ಸಿಯಿಂದ ಹೊರ ಬರುವ ಪ್ರಯತ್ನ ಮಾಡುತ್ತಿವೆ. ಅಮೇರಿಕಾ ಅದೆಷ್ಟೇ ಹೇಳಿದರೂ, ಅವು ತನ್ನ ಲಾಭವನ್ನು ಗಮನದಲ್ಲಿಟ್ಟುಕೊಂಡು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಕೈಗೊಂಡಿವೆ. ಅಮೇರಿಕಾ ಆಯುಧಗಳನ್ನು ಕೊಡುವುದಿಲ್ಲ ಅಂತ ಬೆದರಿಕೆಗಳನ್ನು ಹಾಕಿದರೆ, ನಾವು ರಶಿಯಾದೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳುತ್ತೇವೆ ಅಂತ ಹೇಳುವ ಮೂಲಕ ಭಾರತ ಅಮೇರಿಕಾಗೆ ಬಹಳ ದೊಡ್ಡ ಶಾಕ್ ಕೊಟ್ಟಿದೆ. ಮತ್ತೊಂದು ಕಡೆ ರಶಿಯಾ ತೈಲದ ಮೇಲೆ ಪ್ರೈಸ್ ಕ್ಯಾಪ್ ಹಾಕುವ ಮೂಲಕ ಭಾರತ ರಶಿಯಾದಿಂದ ಖರೀದಿ ಮಾಡುವ ತೈಲವನ್ನು ನಿಲ್ಲಿಸುವ ಹಾಗೆ ಮಾಡಿ ರಶಿಯಾಗೆ ವ್ಯಾಪಾರ ಆಗದ ರೀತಿ ಮಾಡಬೇಕು ಅಂತ ನಿರ್ಧರಿಸಿದ ಅಮೇರಿಕಾ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಭಾರತ ದೊಡ್ಡ ಶಾಕ್ ಕೊಟ್ಟಿತ್ತು. ಈ ಪ್ರೈಸ್ ಕ್ಯಾಪ್ ಆಟದಲ್ಲಿ ನಾವಿಲ್ಲ, ನಾವು ರಶಿಯಾ ಜೊತೆಗಿನ ವ್ಯಾಪಾರವನ್ನು ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಅಂತ ಭಾರತ ಕಡಲ್ ಆಗಿ  ಹೇಳಿತ್ತು. ಇದೀಗ ಪ್ರೈಸ್ ಕ್ಯಾಪ್ ಬಗ್ಗೆ ಕೂಡಾ ಉ7 ರಾಷ್ಟ್ರಗಳು ಮರುಚಿಂತನೆ ಮಾಡಬೇಕಾದ ಹಂತಗಳನ್ನು ತಲುಪಿದೆ. ಮತ್ತೊಂದೆಡೆ ಮೋದಿ ದೊಡ್ಡ ದೇಶ ಭಕ್ತ. ಅವರಿಗೆ ಭಾರತದ ಹಿತಾಸಕ್ತಿಗಳನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶಗಳಿಲ್ಲ, ನಾವು ಭಾರತದ ಜತೆಗಿನ ಸಂಬಂಧಗಳನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ಅವರ ಆತ್ಮ ನಿರ್ಭರವನ್ನು ಸಮರ್ಥಿಸುತ್ತೇವೆ, ಅದಕ್ಕೆ ಬೇಕಾದ ಸಹಾಯವನ್ನು ಭಾರತಕ್ಕೆ ನಾವು ಮಾಡುತ್ತೇವೆ ಅಂತ ರಶಿಯಾ ಅಧ್ಯಕ್ಷ ಪುಟಿನ್ ಹೇಳಿದ್ದರು. ಇದೆಲ್ಲ ಸಾಧ್ಯ ಆಗಿದ್ದು. ಭಾರತದ ಈ ತಟಸ್ಥ ನೀತಿಯಿಂದ. ಇಲ್ಲಿ ಮುಖ್ಯವಾದ ಪ್ರಶ್ನೆ ಏನೆಂದರೆ, ಭಾರತ ಈ ತಟಸ್ಥ ನೀತಿಯನ್ನು ಸ್ವಾತಂತ್ರ್ಯ ದಿನದಿಂದಲೂ ಅನುಸರಿಸುತ್ತ ಬಂದಿದೆ. ಆದರೆ ಇದರಿಂದ ಹಿಂದೆಂದೂ ಆಗದೇ ಇದ್ದಂತಹ ಲಾಭಗಳು ಇದೀಗ ಆಗಲು ಹೇಗೆ  ಸಾಧ್ಯ? ಇವತ್ತಿನ ನೀತಿಗಳಲ್ಲಿ ಏನು ಬದಲಾವಣೆಗಳಾಗಿವೆ? ಜಗತ್ತೇನಾದರೂ ಬದಲಾಗಿದೆಯಾ? ಅಥವಾ ಭಾರತವೇ ಬದಲಾಗಿದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯನಲ್ಲಿ ಉದ್ಭವಿಸುತ್ತಿವೆ. ಇದೇ ಅಲಿಪ್ತ ನೀತಿ ಅಂದೂ ಇತ್ತು, ಇವತ್ತೂ ಇದೆ. ಜಗತ್ತು ಕೂಡಾ ಹಾಗೆ ಇದೆ. ಆದರೆ ವಾಸ್ತವ ಎನೆಂದರೆ, ನಮಗೆ ಶಕ್ತಿ ಇಲ್ಲದ ದಿನಗಳಲ್ಲಿ ನಾನು ಯಾರ ತಂಟೆಗೂ ಬರೊದಿಲ್ಲ, ನಾನು ಶಾಂತಿ ಪ್ರೀಯ, ನನಗೆ ಶಾಂತಿ ಬೇಕು ಅಂತ ಹೇಳಲು ಪ್ರಯತ್ನಿಸಿದರೆ ಅದು ಹೇಡಿತನದ ಲಕ್ಷಣವಾಗುತ್ತದೆ. ಅದೆ ಒಂದು ಬಲಿಷ್ಠ ರಾಷ್ಟ್ರ, ನಾನು ಯಾರ ಪರವೂ ಇಲ್ಲ, ಯಾರ ವಿರುದ್ದವೂ ಇಲ್ಲ, ನಾನು ನನ್ನ ಪರವಾಗಿ ಮಾತ್ರ ಇರುತ್ತೇನೆ, ನಾನು ಶಾಂತಿಪ್ರೀಯ ಅಂತ ಗಟ್ಟಿ ದನಿಯಲ್ಲಿ ಗುಡುಗಿದೆರೆ ಅದಕ್ಕೆ ಒಂದು ಶಕ್ತಿ ಹಾಗೂ ಗೌರವ ಇರುತ್ತದೆ. ಹಾಗಾಗಿ ಇಂದು ಭಾರತದ ವಿಷಯದಲ್ಲಿ ಅದೆ ಆಗುತ್ತಿದೆ.  

ಭಾರತ ಇದೀಗ ಬದಲಾಗಿದೆ, ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರ, ಆತ್ಮ ನಿರ್ಭರವಾಗುತ್ತಿದೆ. ಭಾರತೀಯರಿಗೆ ಕೊಳ್ಳುವ ಶಕ್ತಿ ಹೆಚ್ಚಾಗಿದ್ದರಿಂದ ಭಾರತ ಎನ್ನುವುದು ಜಗತ್ತಿನಲ್ಲಿ ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ಭಾರತೀಯರು ಬೆಳೆದು ನಿಂತಿದ್ದಾರೆ. ಬಹುತೇಕ ರಾಷ್ಟ್ರಗಳಲ್ಲಿ ನಡೆಯುವ ಚುನಾವಣೆಯಲ್ಲಿ ಯಾರು ಆಯ್ಕೆ ಆಗಬೇಕು ಎಂದು ನಿರ್ಧರಿಸುವ ಶಕ್ತಿಯನ್ನು ಅಲ್ಲಿನ ಭಾರತೀಯರು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಇದೀಗ ಭಾರತ ತನ್ನ ವಿದೇಶಾಂಗ ನೀತಿಯನ್ನು ಬದಲಾಯಿಸಿಕೊಳ್ಳದಿದ್ದರೂ ಕೂಡಾ ಜಗತ್ತು ಮಾತ್ರ ಭಾರತವನ್ನು ಅನುಸರಿಸುವ ಸ್ಥಿತಿಗೆ ತಲುಪಿದೆ. ಅಂದು ಈ ನೀತಿ ನಿರೂಪಣೆಗಳನ್ನ ಮಾಡಿದವರನ್ನು ನೆನೆಸಲೆ ಬೇಕು. ಪ್ರಮುಖವಾಗಿ ಇಂದು ಅದನ್ನು ನಿಭಾಯಿಸುತ್ತ ಈ ದೇಶದ ಗೌರವವನ್ನು ಉತ್ತುಂಗಕ್ಕೆ ಕೊಂಡೊಯ್ದ ವ್ಯಕ್ತಿಗಳಿಗಂತೂ ಹ್ಯಾಟ್ಸಾಪ್!  

ಭಾರತ ಹಾಗೂ ರಶಿಯಾದ ನಡುವಿನ ವಾರ್ಷಿಕ ಸಮ್ಮೇಳನ ಈ ಬಾರಿ ರಶಿಯಾದಲ್ಲಿ ನಡೆಯಲಿದೆ. ಅದರಲ್ಲಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಆದ್ದರಿಂದ ಆ ಸಮ್ಮೇಳನದಲ್ಲಿ ಚರ್ಚೆಗೆ ಬರುವ ಅಂಶಗಳ ಬಗ್ಗೆ ಮಾತುಕತೆ ನಡೆಸುವುದಕ್ಕೆ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು ಇದೀಗ ರಶಿಯಾಗೆ ಭೆಟ್ಟಿ ಕೊಟ್ಟಿದ್ದಾರೆ. ಅದೆ ಸಂದರ್ಭದಲ್ಲಿ ಉಕ್ರೇನ್ ರಶಿಯಾ ನಡುವಿನ ಯುದ್ದಕ್ಕೆ ತಾರ್ಕಿಕ ಅಂತ್ಯ ಹಾಡುವ ಬಗ್ಗೆ ನಡೆಯುವ ಚರ್ಚೆಯಲ್ಲಿ ಭಾರತ ಬಹು ಮಹತ್ವದ ಪಾ ತ್ರ ವಹಿಸಲಿದೆ. ಉ20 ಸಮ್ಮೇಳನಕ್ಕೂ ಮೊದಲು ರಶಿಯಾ ಉಕ್ರೇನ್ ಯುದ್ದಕ್ಕೊಂದು ತೆರೆ ಬೀಳಲಿ ಅಂತ ಇದೀಗ ಇಡೀ ಜಗತ್ತು ಬಯಸುತ್ತಿದೆ. ಅಮೇರಿಕಾದಲ್ಲೂ ಕೂಡಾ ಕೆಲವೇ ತಿಂಗಳಲ್ಲಿ ಮಧ್ಯಂತರ ಚುನಾವಣೆಗಳು ನಡೆಯಲಿವೆ. ಅಷ್ಟರಲ್ಲಿ, ತನ್ನ ಮೀಸೆ ಮಣ್ಣಾಗದೆ ಯುದ್ದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕು ಎನ್ನುವ ವಿಚಾದಲ್ಲಿದೆ ಅಮೇರಿಕಾ. ರಶಿಯಾ ಉಕ್ರೇನ್ ಯುದ್ದದಲ್ಲಿ, ಅಮೇರಿಕಾ ಹಾಗೂ ರಶಿಯಾ ನಡುವಿನ ಸಂದಾನಕ್ಕೆ ಭಾರತ ಪೌರೋಹಿತ್ಯ ವಹಿಸಿದರೆ ಅಚ್ಚರಿ ಇಲ್ಲ! ಯಾಕೆಂದರೆ ಚೀನಾದೊಂದಿಗೆ ಎರಡು ಯುದ್ದ, ಪಾಕಿಸ್ತಾನದೊಂದಿಗೆ ಸಾಲು ಸಾಲು ಯುದ್ಧಗಳನ್ನ ಮಾಡಿದ ಭಾರತಕ್ಕೆ ಯುದ್ದ ನಿಲ್ಲಿಸಿ ಅಂತ ಹೇಳುವ ಹಕ್ಕೂ ಇದೆ.  

- * * * -