ಚಿತ್ರಕಲಾ ಶಿಕ್ಷಕರಿಂದ ಸ್ವಂತ ಖಚರ್ಿನಲ್ಲಿ ಗೋಡೆಗಳಿಗೆ ಮೆರಗು
ಯಲ್ಲಾಪುರ 30 : ತಾಲೂಕಿನ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರು ಗುರುವಾರ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿಗಳ(ಬಿಆರ್ಸಿ) ಕಛೇರಿಯ ಕಂಪೌಂಡ ಗೋಡೆಗಳಿಗೆ ಹಸೆ ಚಿತ್ರ(ವಲರ್ಿ ಆಟರ್್)ಬಿಡಿಸುವ ಮೂಲಕ ಕಳೆಗುಂದಿದ್ದ ಗೋಡೆಗಳಿಗೆ ಕಲೆಯ ಮೆರಗು ನೀಡಿದ್ದಾರೆ. ಇಂದಿನ ದಿನಗಳಲ್ಲಿ ಅನುದಾನವಿದ್ದರೂ ಸರಿಯಾಗಿ ಬಳಸಿಕೊಳ್ಳದೇ ಇರುವದನ್ನು ಕಾಣುಬಹುದಾಗಿದೆ ಆದರೆ ಬಿ ಆರ್ಸಿ ಕಛೇರಿಯ ಸಿಬ್ಬಂದಿಗಳು ಸರಕಾರದ ಯಾವದೇ ಅನುದಾನವಿಲ್ಲದೇ ಸ್ವಂತ ಖಚರ್ಿನಲ್ಲಿ ಗೋಡೆಗಳಿಗೆ ಬಣ್ಣ ಬಳಿದು ಕಲೆಯ ಅರಳುವಿಕೆಗೆ ಕೈಜೋಡಿಸಿದ್ದಾರೆ. ಉತ್ತಮ ಕಾರ್ಯದಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಸನ್ ಯಲ್ಲಾಪುರ ವಾಟ್ಸ್ಪ್ ಕುಟುಂಬದಿಂದ ಆಯ್ ಬಿ ಉದ್ಯಾನವನ ವಲರ್ಿ ಚಿತ್ರದಿಂದ ಸುಂದರಗೊಳಿಸಿ ಅತ್ಯುತ್ತಮ ಕಾರ್ಯಕ್ರಮವನ್ನು ನೀಡಿದ್ದು ಪ್ರೇರಣೆಯಾಗಿ ಬಿ ಆರ್ ಸಿ ಕಚೇರಿಯನ್ನು ಸುಂದರಗೊಳಿಸಲು ಪಣತೊಟ್ಟು ಕಾರ್ಯನಿರತರಾಗಿದ್ದಾರೆ.ಯಾವದೇ ಉತ್ತಮ ಸಾರ್ಥಕ ಕಾರ್ಯಕ್ಕೆ ಎಲ್ಲರಿಂದಲೂ ಸ್ಪಂದನೆ ದೊರೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಿಸಗೋಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕಲಾವಿದ ಸತೀಶ ಯಲ್ಲಾಪುರ ಮಾರ್ಗದರ್ಶನದಲ್ಲಿ ತಾಲೂಕಿನ ಚಿತ್ರಕಲಾ ಶಿಕ್ಷಕರು ಹಸೆ ಚಿತ್ರವನ್ನು ಬಿಡಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 