ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ವಿಶ್ವಾಸ ಮೂಡಲಿದೆ

ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ವಿಶ್ವಾಸ ಮೂಡಲಿದೆ Giving H. K. Patil a ministerial berth will instill enthusiasm and confidence among the workers

ಶಿರಹಟ್ಟಿ 18 : ಉತ್ತರ ಕರ್ನಾಟಕ ಭಾಗದ ಹಿರಿಯ ಕಾಂಗ್ರೆಸ್ ನಾಯಕರು, ಶಾಸಕರು ಹಾಗೂ ಜನಸ್ಪಂಧನೆಯ ನಾಯಕರಾದ ಎಚ್ . ಕೆ . ಪಾಟೀಲ್ ಅವರಿಗೆ ಸನ್ಮಾನ ಡಿ ಕೆ ಶಿವಕುಮಾರ ರವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಪೋತರಾಜ್ ಹೇಳಿದರು.ಎಚ್‌. ಕೆ. ಪಾಟೀಲರು ಅವರು ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ಸಂಕಷ್ಟದ ಸಂದರ್ಭಗಳಲ್ಲಿಯೂ ನಿಷ್ಠೆಯಿಂದ ಪಕ್ಷದ ಪರವಾಗಿ ನಿಂತು ಸಂಘಟನೆಯನ್ನು ಬಲಪಡಿಸಿದ್ದಾರೆ ಎಂದರು. ಅಲ್ಲದೆ ಅವರ ರಾಜಕೀಯ ಅನುಭವ, ಆಡಳಿತಾತ್ಮಕ ಜ್ಞಾನ, ಪ್ರಾಮಾಣಿಕತೆ ಹಾಗೂ ಜನಸೇವೆಯ ಬದ್ಧತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆಂದರು. ನಂತರ ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕದ ಜನರ ಆಶಯಗಳಿಗೆ ಗೌರವ ದೊರೆಯುವುದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನವ ಚೈತನ್ಯ ಉತ್ಸಾಹ ಮತ್ತು ವಿಶ್ವಾಸ ಮೂಡಲಿದೆ ಎಂದರು.