ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಿ: ಕರಗುದರಿ
Give opportunity to children with special abilities instead of pity: Karagudari
ಧಾರವಾಡ 11: ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ಅನುಕಂಪ ತೋರಿಸುವ ಬದಲು ಹೆಚ್ಚು ಅವಕಾಶಗಳನ್ನು ನೀಡಬೇಕು. ಆ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ಲಯನ್ಸ್ ವಲಯ ಅಧ್ಯಕ್ಷೆ ಶೈಲಾ ಕರಗುದರಿ ಹೇಳಿದರು.
ಇಲ್ಲಿಯ ಶ್ರೀನಗರದ ಸಮೀಪ ಚನ್ನಬಸವೇಶ್ವರ ನಗರದ ಉಡಾನ ಫೌಂಡೇಶನ್‌ನ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಶಾಲೆಯಲ್ಲಿ ನಡೆದ ಅನ್ನ ದಾಸೋಹ ಮತ್ತು ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ಮಾತನಾಡಿ,ಧಾರವಾಡ ಲಯನ್ಸ್ ಸಂಸ್ಥೆಯಿಂದ ಹೆಚ್ಚಿನ ಸಹಕಾರ ನೀಡುವದಾಗಿ ಹೇಳಿದರು.
ವಿಶೇಷ ಸಾಮರ್ಥ್ಯವುಳ್ಳ ಮಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಉಡಾನ ಸಂಸ್ಥೆಯು ಶ್ರಮಿಸುತ್ತಿದೆ ಎಂದು ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಹೇಳಿದರು.
ಈ ಸಂದರ್ಭದಲ್ಲಿ ಡಾ.ಕೆ.ವಿ.ಅಚ್ಯುತ,ಡಾ.ಅನಿರುಧ್ ಕುಲಕರ್ಣಿ ಮತ್ತು ಡಾ.ಶ್ರೇಯಾ ಪಾಸ್ತೆ ಅವರು 40 ಕ್ಕಿಂತ ಹೆಚ್ಚು ಮಕ್ಕಳನ್ನು ಆರೋಗ್ಯ ತಪಾಸಣೆ ಮಾಡಿದರು.
ಉಡಾನ ಸಂಸ್ಥೆಯ ಸಂಸ್ಥಾಪಕಿ ರೇಖಾ ಎಸ್.ಪಿ.,ಶಿಕ್ಷಕಿಯರಾದ ಸುಜಾತಾ ರಜಪೂತ, ಶೃತಿ ಸತ್ತಿಗೇರಿ ಹಾಗೂ ಸಹಾಯಕಿ ಪ್ರೀತಿ ಹಡಪದ ಅವರನ್ನು ಗುರು ಪೂರ್ಣಿಮೆಯ ನಿಮಿತ್ತ ಗೌರವಿಸಲಾಯಿತು.
ಹರ್ಷ ದೇಸಾಯಿ,ಹರ್ಷ ಡಂಬಳ, ಅರವಿಂದ ಹೆಬಸೂರ,ಉಷ್ಮಾ ದೇಸಾಯಿ,ನೀತಾ ಕೊಪ್ಪಿಕರ, ಕವಿತಾ ಅಂಗಡಿ, ವನಿತಾ ಹೆಬಸೂರ,ಅಮೃತಾ ಜೋಶಿ,ರಶ್ಮಿ ಭಾರದ್ವಾಜ್, ಡಾ.ರಾಜಶ್ರೀ ಗುದಗನವರ ಇತರರು ಇದ್ದರು.
ಲಯನ್ಸ್ ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ಸ್ವಾಗತಿಸಿದರು. ಡಾ.ಉಷಾ ಗದ್ದಗಿಮಠ ನಿರೂಪಿಸಿದರು.ಖಜಾಂಚಿ ಶ್ರೀಕಾಂತ ದೇವಗಿರಿ ವಂದಿಸಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 