ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ನಿಡಸೋಸಿ ಶ್ರೀ

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ನಿಡಸೋಸಿ ಶ್ರೀ Give more emphasis to education: Nidsosi Sri

ಲೋಕದರ್ಶನ ವರದಿ 

ಮಾಂಜರಿ 11: ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮ ಪಂಚಾಯತ ಹೊಸ ಕಟ್ಟಡ ನಿರ್ಮಾಣವಾಗಿರುವುದು ಸಂತಸದ ವಿಷಯ. ಜೊತೆಗೆ ಗ್ರಾಮದಲ್ಲಿನ ಶಾಲೆಗಳು ಅಭಿವೃದ್ಧಿಯಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು. 

ಅವರು ಮಂಗಳವಾರ ರಂದು ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. 

ಗ್ರಾಮ ಪಂಚಾಯತ ಸದಸ್ಯರಾದ ಬಳಿಕ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ,ಮಾದರಿಯ ಗ್ರಾಮವನ್ನಾಗಿ ರೂಪಿಸಿ ಎಂದು ಸಲಹೆ ನೀಡಿದರು. 

ಚಿಕ್ಕೋಡಿಯ ಚರಮೂರ್ತಿ ಮಠದ ಸಂಪದನಾ ಸ್ವಾಮೀಜಿಯವರು ಮಾತನಾಡಿ ಜೈನಾಪೂರ ಗ್ರಾಮ ಪಂಚಾಯತನ ಹೊಸ ಕಟ್ಟಡ ನಿರ್ಮಾಣವಾಗಿರುವುದು ಖುಷಿಯ ವಿಚಾರ.ವಿಂಡ ಪವರನ ಮಾಲಿಕರಾದ ಪ್ರವೀಣ ದೊಡ್ಡನವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ದೊಡ್ಡನವರ ದೊಡ್ಡ ಗುಣವು ಮೆಚ್ಚುವಂತಹದ್ದು ಎಂದರು. 

ಚಿಂಚಣಿಯ ಶಿವಪ್ರಸಾದ ಸ್ವಾಮೀಜಿ ಮಾತನಾಡಿ ಜೈನಾಪೂರ ಗ್ರಾಮವು ನನ್ನ ಸ್ವಂತ ಊರು ಎನ್ನುವುದು ಹೆಮ್ಮೆ ಇದೆ.ಜೇನಿನಂತಹ ಮನಸ್ಸಿನ ಜನರು.ಗ್ರಾಮ ಅಭಿವೃದ್ಧಿ ಬಯಸಿದಕ್ಕೆ ಇಂತಹ ಕಟ್ಟಡ ನಿರ್ಮಾಣವಾಗಿದೆ ಎಂದರು. 

ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಸುರೇಶ ಘರಬುಡೆ ಮಾತನಾಡಿ ನಾನು ಅಧ್ಯಕ್ಷನಾಗಿದ್ದಾಗ ಸದಸ್ಯರಿಗೆ ಸಭೆ ಮಾಡಲು ಸರಿಯಾದ ಜಾಗ ಇಲ್ಲದೇ ಇರುವುದರಿಂದ ಎಲ್ಲ ಸದಸ್ಯರು ಸೇರಿ ವಿಂಡ ಪವರನ ಮಾಲಿಕರಾದ ಪ್ರವೀಣ ದೊಡ್ಡನವರ ಭೇಟಿ ಮಾಡಿದಾಗ ಅವರು ನಮಗೆ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾದ ಕಟ್ಟಡ ನಿರ್ಮಾಣ ಮಾಡಿ ಕೊಟ್ಟಿದ್ದಾರೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. 

ಇದೇ ಸಂದರ್ಭದಲ್ಲಿ ಅಗ್ನಿಶಾಮಕದಳದಲ್ಲಿ ಸೇವೆ ಸಲ್ಲಿಸಿ ನಿವೃತಗೊಂಡ ದುಂಡಪ್ಪ ಕೆಳಗಿನಮಣಿ, ವಿಂಡ್ ಪವರನ ಮಾಲೀಕರಾದ ಪ್ರವೀಣ ದೊಡ್ಡನವರ ಹಾಗೂ ಜೈನಾಪೂರ ಗ್ರಾಮ ಪಂಚಾಯತ ಸತತವಾಗಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿರುವ ಪಿಡಿಓ ಸತ್ಕರಿಸಲಾಯಿತು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಜಾತಾ ಸೊಲಬನ್ನವರ ಉಪಾಧ್ಯಕ್ಷರಾದ ಅವ್ವಕ್ಕಾ ಜೋಗೆ, ಸದಸ್ಯರಾದ ರಾಮಗೌಡ ಕರಗಾಂವ, ಅನೀಲ ಕುಮಾರ ಪಾಟೀಲ, ಶೃತಿ ತಳಕೇರಿ, ತಮ್ಮಣ್ಣಾ ಘರಬುಡೆ, ಮಹಾದೇವಿ ನಿಂಗನೂರೆ, ಲಕ್ಷ್ಮೀ ಮಜಲಟ್ಟಿಸುರೇಶ ಘರಬುಡೆ, ಸುಗಂಧಾ ಘರಬುಡೆ, ಸುಗಂಧಾ ಘರಬುಡೆ, ರಾಜು ಗೌರಾಗೋಳ, ಸುಮಾ ನಾಗರಾಳೆ, ರೋಜಾಬಾಯಿ ತಳವಾರ, ಬಾಳಕೃಷ್ಣ ದೊಡ್ಡಲಚ್ಚಪ್ಪಗೋಳ, ಬಸವರಾಜ ಮಾಳಗೆ, ಮಹಾದೇವ ಯಾದಗೂಡೆ, ಎಪಿಎಂಸಿ ಸದಸ್ಯ ಈರಗೌಡ ಕೆಳಗಿನಮಣಿ, ರಾಜಕುಮಾರ ವಾಡೆಕರ ಆನಂದ ಕುಮಾರ ಆವಟೆ, ಸಂಜಯ ತುಕಾರಾಂ ಪರಿಟ ಸೇರಿದಂತೆ ಗ್ರಾಮದ ಹಿರಿಯರು ಗಣ್ಯರು ಇನ್ನಿತರರು ಉಪಸ್ಥಿತರಿದ್ದರು.