ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಿ: ಜೆ.ಟಿ.ಪಾಟೀಲ
Give first priority to Kannada language: J.T. Patil
ಲೋಕದರ್ಶನ ವರದಿ
ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಿ: ಜೆ.ಟಿ.ಪಾಟೀಲ
ಬೀಳಗಿ 02: ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಿ. ಕನ್ನಡ ಭಾಷೆಯನ್ನು ಆರಾಧಿಸಿದರೆ ಅನ್ಯ ಭಾಷೆಗಳನ್ನು ಪ್ರೀತಿಸಿ. ವಿವಿಧ ಭಾಷೆಗಳನ್ನು ಮಾತನಾಡಬಲ್ಲವನು ಬದುಕಿನಲ್ಲಿ ಯಶಸ್ವಿ ಹೊಂದಿರುತ್ತಾನೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ್ ಹೇಳಿದರು.
ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ತಾಲೂಕಾ ಆಡಳಿತ, ತಾಪಂ, ಪಪಂ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸ್ಥಾಪನೆಯಲ್ಲಿ ಅನೇಕ ಹೋರಾಟಗಾರರ ಶ್ರಮವಿದೆ. ನಾಡಿನ ಕನ್ನಡಿಗರಿಗಾಗಿ ಭಾಷಾ ಅನುಕೂಲ ಕಲ್ಪಿಸುವ ಸಲುವಾಗಿ ಭಾಷಾವಾರು ಪ್ರಾಂತಗಳನ್ನು ಮಾಡಲಾಯಿತು. ಶಿಕ್ಷಣದಲ್ಲಿ ಮಕ್ಕಳಿಗೆ ಇತಿಹಾಸ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ಮಕ್ಕಳಲ್ಲಿ ಭಾಷೆ, ನೆಲ, ಜಲ, ನಾಡು-ನುಡಿಗಳ ಬಗ್ಗೆ ಅಭಿಮಾನ ಬೆಳೆಸಬೇಕು. ಜಾತಿ, ಮತ, ಧರ್ಮಗಳು ಮಾನವ ನಿರ್ಮಿತವಾಗಿದೆ. ವಿಶ್ವದಲ್ಲಿ ಇರುವುದು ಒಂದೇ ಧರ್ಮ, ಅದು ಮಾನವಿಯತೆಯ ಧರ್ಮವಾಗಿದೆ.
ಬಾಕ್ಸ್ ಐಟಂ-
ಶಿಕ್ಷಣ ಇಲಾಖೆಯಿಂದ ಮಕ್ಕಳಲ್ಲಿ ಸ್ವಚ್ಚತೆ ಹಾಗೂ ಪರಿಸರ ಬಗ್ಗೆ ಜಾಗೃತಿ ಅಗತ್ಯ. ತಾಲೂಕಿನ ಪ್ರತಿ ಶಾಲೆಗಳಲ್ಲಿ ಕೈತೋಟಗಳ ನಿರ್ಮಾಣವಾಗಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿಯ ಬಗ್ಗೆ ಚಿಂತನೆ ಮೂಡಿಸಬೇಕು. ಮಕ್ಕಳ ಪ್ರತಿಭೆಗಳನ್ನು ಹೊರಹಾಕಲು ಮಕ್ಕಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ವಚ್ಚತೆ ಹಾಗೂ ಪರಿಸರ ಬಗ್ಗೆ ಜಾಗೃತಿ ಮಾಡಿದರೆ ಸಾಲದು ಅವುಗಳ ಕಲುಷಿತವನ್ನು ತಡೆಗಟ್ಟುವ ಕಾರ್ಯವಾಗಬೇಕು ಎಂದು ವೇದಿಕೆ ಕೆಳಗೆ ಕುಳಿತ ಬಿಇಒ ಆರ್.ಎಸ್.ಆದಾಪೂರರವರಿಗೆ ಶಾಸಕ ಜೆ.ಟಿ.ಪಾಟೀಲರು ಸೂಚಿಸಿದರು.
ತಹಶೀಲ್ದಾರ ವಿನೋದ್ ಹತ್ತಳ್ಳಿ ಧ್ವಜಾರೋಹಣ ನೆರವೇರಿಸಿದರು. ಉಪನ್ಯಾಸವನ್ನು ಆದರ್ಶ ವಿದ್ಯಾಲಯ ಶಿಕ್ಷಕ ಎಲ್.ಐ.ಮೇಲಿನಮನಿ ಮಾಡಿದರು. ಪಪಂ ಅಧ್ಯಕ್ಷ ಮುತ್ತು ಭೋರ್ಜಿ, ಉಪಾಧ್ಯಕ್ಷೆ ಕಲಾವತಿ ಗಡ್ಡದವರ, ಪಪಂ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ, ಶಿವಾನಂದ ಮಾದರ್, ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕಾ ಅಧ್ಯಕ್ಷ ಅನ್ನವೀರಯ್ಯ ಪ್ಯಾಟಿಮಠ, ತಾಪಂ ಇಒ ಎಸ್.ಎಸ್.ಪಾಟೀಲ್, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್, ವಿಠ್ಠಲ್ ಹಿರೆನಿಂಗಪ್ಪನವರ ಇತರರು ಇದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವದ ಸನ್ಮಾನ ಮಾಡಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 