ಎಕರೆಗೆ 25 ಲಕ್ಷ ಪರಿಹಾರ ಕೊಡಿ**- ಮುಖಂಡ ಬಸವರಾಜ ಕ್ಯಾವಟರ್ ಆಗ್ರಹ
Give compensation of 25 lakhs per acre** - Leader Basavaraj Cavatar demands
ಕೊಪ್ಪಳ 29: ತಾಲೂಕಿನ ಬಂಡಿಹರ್ಲಾಪೂರ-ಬಸಾಪೂರ ಗ್ರಾಮದ ಬಳಿ ಕಾಲುವೆ ಒಡೆದು ಅಪಾರ ಹಾನಿಗೊಳಗೆ ಒಳಗಾಗಿರುವ ರೈತರಿಗೆ ಎಕರೆಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 90 ಎಕರೆಗೂ ಹೆಚ್ಚು ಭತ್ತದ ಬೆಳೆ ಹಾಳಾಗಿದೆ. ಎರಡನೇ ಬೆಳೆಗೆ ನೀರಿಲ್ಲದಿದ್ದರೂ ಕಾಲುವೆಯ ಮೂಲಕ ಇರುವ ಅಲ್ಪ- ಸಲ್ಪ ನೀರಿನಲ್ಲಿಯೇ ಈ ಭಾಗದ ವ್ಯಾಪ್ತಿಯ ನೂರಾರು ರೈತರು ಭತ್ತ ಬೆಳೆದಿದ್ದರು. ಆದರೆ, ವಾರದ ಹಿಂದೆ ಏಕಾಏಕಿ ಕಾಲುವೆ ಒಡೆದು ಹೊಲಗಳಿಗೆ ನೀರು ಹೊಕ್ಕಿದ ಪರಿಣಾಮ 90 ಎಕರೆಗೂ ಹೆಚ್ಚು ಭತ್ತದ ಬೆಳೆ ಬೆಳೆದಿದ್ದಾರೆ. ಪ್ರತಿಯೊಬ್ಬ ರೈತ ಎಕರೆಗೆ ಕನಿಷ್ಠ 30 ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಿದ್ದ.
ಆದರೆ, ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ಜನಪ್ರತಿನಿಧಿಗಳ ಅಸಡ್ಡೆಯ ಪರಿಣಾಮ ಕಾಲುವೆ ಹೋಡೆದು ಹೋಯಿತು. ಸಕಾಲಕ್ಕೆ ನಿರ್ವಹಣೆ ಮಾಡಿದ್ದರೇ ಅನ್ನದಾತನಿಗೆ ಸಮಸ್ಯೆಯಾಗುತ್ತಿರಲಿಲ್ಲ. ಮೇಲಿಂದ ಮೇಲೆ ರೈತರು ಕಾಲುವೆ ದುರಸ್ತಿ ಮಾಡುವಂತೆ ಒತ್ತಾಯ ಮಾಡಿದರೂ ಅಧಿಕಾರಿಗಳು ಕಿವಿಗೊಡಲಿಲ್ಲ. ತತ್ಪರಿಣಾಮ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲದೆ, ಇದೀಗ ಬೆಳೆ ಹಾನಿಯಾದ ಪ್ರದೇಶವನ್ನು ಸರ್ವೆ ಮಾಡಲು ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸರ್ವೆ ಮಾಡಲು ಮಿನಮೇಷ ಎಣಿಸುತ್ತಿರುವುದು ಸರಿಯಲ್ಲ.ಕೂಡಲೇ ಸಮರ್ಕ ಸರ್ವೆ ನಡೆಸಿ, ರೈತರಿಗೆ ಪರಿಹಾರ ಒದಗಿಸಬೇಕು. ಜತೆಗೆ ಕಾಲುವೆ ಒಡೆದ ಪರಿಣಾಮ ಬಿರು ಬೇಸಿಗೆಯ ಈ ಅವಧಿಯಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವದ ಆತಂಕ ಶುರುವಾಗಿದೆ. ಹೀಗಾಗಿ ಕಾಲುವೆ ದುರಸ್ತಿ ಕಾರ್ಯ ಕೂಡ ತ್ವರಿತವಾಗಿ ಮುಗಿಸುವುದಕ್ಕೆ ಸರಕಾರ ಆದ್ಯತೆ ನೀಡಬೇಕು ಎಂದು ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.*ಡಾ. ಬಸವರಾಜ್ ಎಸ್ ಕ್ಯಾವಟರಿ್ನಕಟಪೂರ್ವ ಬಿಜೆಪಿ ಅಭ್ಯರ್ಥಿಗಳು ಕೊಪ್ಪಳ ಲೋಕಸಭಾ ಕ್ಷೇತ್ರ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 