ಲೋಕದರ್ಶನವರದಿ
ವಿಜಯಪುರ೧೭: ನಗರದ ವಾಡರ್್ ನಂ 34 ರಲ್ಲಿ ರವಿವಾರದಂದು ಬಬಲೇಶ್ವರ ನಾಕಾ ಹತ್ತಿರ ಮಾಜಿ ನಗರಪಾಲಿಕೆ ಸದಸ್ಯ ಅಬ್ದುಲ್ ರಜಾಕ್ ಹೊತರ್ಿ ಅವರು ಕೊರೋನಾ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾನಗರ ಪಾಲಿಕೆ ಪೌರ ಕಾಮರ್ಿಕರಿಗೆ ಬಟ್ಟೆ ಮತ್ತು ಆಹಾರ ದಿನಸಿ ವಿತರಿಸಿ ಹೂ ಗುಚ್ಛ ನೀಡಿ ಸನ್ಮಾನಿಸಿದರು.
ಇದೇ ವೇಳೆ ಮಹಾನಗರ ಪಾಲಿಕೆಯ ನಿವೃತ್ತ ನೌಕರರಾದ ಸೀತಾರಾಮ ಚವ್ಹಾಣ, ಇನ್ಸ್ಪೆಕ್ಟರಾದ ವೆಂಕಟರಾಮ ಸಂಜು ಅಥಣಿ, ದುಂಡಪ್ಪಾ ಕಾಲೇಬಾಗ ಹಾಗೂ ಸಂತೋಷ ಭೋವಿ, ಚಾರಸಾವ ಶೇಖ, ನಬೀಲಾ ಬಾಗವಾನ ಅವರನ್ನು ಸನ್ಮಾನಿಸಲಾಯಿತು.
ಅದರಂತೆ ಡಾ.ರಾಜು ಶಿರಶ್ಯಾಡ, ಡಾ.ಎ.ಎಮ್ ಪಠಾಣ, ಡಾ.ಅಶೋಕ ಗುಡಗುಂಟಿ ಅವರನ್ನು ಸನ್ಮಾನಿಸಿ, ಪೊಲೀಸ್ ಸಿಬ್ಬಂದಿಗಳಿಗೂ ಧನ್ಯವಾದಗಳನ್ನು ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅಶಫಾಕ್, ಡಾ.ಅಂಶಾನ್ ಹಬಿಬುಲ್ಲಾ ಜಮಾದಾರ, ಅಬಿರ್ ಪೀರಾ ಜಮಖಂಡಿ ಬುಡನ್, ಮುಲ್ಲಾ ನಜೀರ್ ಮನಿಯಾರ, ದಾದಾಪೀರ ಚಿನ್ನೆಂಗಾವ, ಬಬು ಮೆಂಡೆಗಾರ, ಜಾಫರ್ ಸೌದಾಗರ, ವಸೀಂ ಉಪಸ್ಥಿತರಿದ್ದರು.