ಮಕ್ಕಳಲ್ಲಿ ಅಡಗಿರುವ ನೈಜ ಪ್ರತಿಭೆ ಪ್ರದರ್ಶಿಸಲು ಮುಕ್ತ ಅವಕಾಶ ನೀಡಿ
Give children the opportunity to showcase their true hidden talents.
ಮಕ್ಕಳಲ್ಲಿ ಅಡಗಿರುವ ನೈಜ ಪ್ರತಿಭೆ ಪ್ರದರ್ಶಿಸಲು ಮುಕ್ತ ಅವಕಾಶ ನೀಡಿ
ಬ್ಯಾಡಗಿ 14: ಪಾಲಕರು ತಮ್ಮ ಮಕ್ಕಳಲ್ಲಿ ಅಡಗಿರುವ ನೈಜ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶ ನೀಡಿತ್ತಿರುವ ಇಂತಹ ಚಿತ್ರ ಸಂತೆ ವೇದಿಕೆಗಳು ಬಹಳ ಮುಖ್ಯವಾಗಿದೆ ಎಂದು ಕರ್ನಾಟಕ ಶಿಲ್ಪ ಕಿಲಾ ಅಕಾಡೆಮಿಯ ಸದಸ್ಯ ಅಂತರಾಷ್ಟ್ರೀಯ ಕಲಾವಿದ ಹರೀಶ್ ಮಾಳಪ್ಪನವರ್ ಹೇಳಿದರು.ಇಲ್ಲಿನ ಶಿವಪುರ ಬಡಾವಣೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಮಾಜ ಸೇವಾ ಟ್ರಸ್ಟ್ ಬ್ಯಾಡಗಿ ಇವರುಗಳು ವತಿಯಿಂದ ಬ್ಯಾಡಗಿ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಚಿತ್ರ ಸಂತೆ ಕಾರ್ಯಕ್ರಮದ ತೀರ್ುಗಾರರಾಗಿ ಮತ್ತು ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡು ಮಾತನಾಡಿದವರು.
ಸ್ಪರ್ಧೆಯಲ್ಲಿ ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿ ರೇಖಾ ಸುಣಗಾರ. ದ್ವಿತೀಯ ಸ್ಥಾನದಲ್ಲಿ ಲತೇಶ್ ಹಳ್ಳಳ್ಳಿ ಸಾ. ಹಿರೇಮಲ್ಲಾಪುರ. ತೃತೀಯ ಸ್ಥಾನದಲ್ಲಿ ಕವನ ಕುಂಬಾರ್ ಲಯನ್ಸ ಸ್ಕೂಲ್ ಹಾವೇರಿ. ಮತ್ತು ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಐಶ್ವರ್ಯ ಕುರುವತ್ತಿ ಪೋದಾರ ಶಾಲೆ ರಾಣೆಬೆನ್ನೂರು. ದ್ವಿತೀಯ ಸ್ಥಾನವನ್ನು ಪ್ರಿಯಾ ಭೋಗಾವಿ ಸ್ವಾಮಿ ವಿವೇಕಾನಂದ ಶಾಲೆ ಹಂಸಬಾವಿ. ತೃತೀಯ ಸ್ಥಾನವನ್ನು ಲೇಖನಾ ಜವಳಿ ಸರ್ಕಾರಿ ಪ್ರೌಢಶಾಲೆ ಹಿರೇಕೇರೂರು ಇವರು ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯ ವರ್ತಕರಾದ ಬಸವರಾಜ್ ಸುಂಕಾಪುರ. ರೋಟರಿ ಕ್ಲಬ್ ನ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಉಪ್ಪಾರ್. ರೋಟರಿ ಕ್ಲಬ್ ನ ಅಧ್ಯಕ್ಷ ಅನಿಲ್ ಬೊಡ್ಡಪಾಟಿ. ಆನಂದ್ ಗೌಡ ಸುರಟೂರು. ಸಿದ್ದಲಿಂಗಯ್ಯ ಬೂದಿಹಾಳ ಮಠ. ಹಾಗೂ ಇದೇ ವಿಜೆತರಾದ ಮಕ್ಕಳ ಪೋಷಕರುಗಳು. ಸಮಾಜ ಸೇವಾ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 