ಗಿರೀಶ್ ಕಾರ್ನಾಡ್ ನಿಧನಕ್ಕೆ ಪಂಡಿತಾರಾಧ್ಯ ಶ್ರೀಗಳ ಸಂತಾಪ
ಲೋಕದರ್ಶನವರದಿ
ಸಾಣೇಹಳ್ಳಿ10: ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಬೆಂಗಳೂರಿನಲ್ಲಿ ಇಂದು ಬೆಳಗಿನಜಾವ ನಮ್ಮನ್ನಗಲಿದ ಡಾ. ಗಿರೀಶ್ ಕಾನರ್ಾಡ್ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿ ಕಾನರ್ಾಡ್ ಅಪ್ರತಿಮ ನಾಟಕಕಾರ, ಚಿಂತಕ, ಲೇಖಕ, ವಾಗ್ಮಿ, ನಟ, ನಿದರ್ೇಶಕರಾಗಿದ್ದವರು. ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು.
ಕನ್ನಡ ರಂಗಭೂಮಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದವರು. ಕನ್ನಡನಾಡಿನ ಸಾಂಸ್ಕೃತಿಕ ವಕ್ತಾರರಾಗಿ ಕೆಲಸ ಮಾಡಿದವರು. ಅವರ ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದ ನಾಟಕಗಳು ಭಾರತೀಯ ಭಾಷೆಗಳಲ್ಲಲ್ಲದೆ ವಿದೇಶಿ ಭಾಷೆಗಳಲ್ಲಿಯೂ ಅನುವಾದಗೊಂಡಿರುವುದು ಮತ್ತು ಪ್ರದರ್ಶನಗಳನ್ನು ಕಂಡಿರುವುದು ಅವುಗಳ ಮಹತ್ವವನ್ನು ಸಾರುತ್ತದೆ. ನಮ್ಮ ಶಿವಸಂಚಾರ ತಂಡ ಅವರ `ತಲೆದಂಡ' ನಾಟಕವನ್ನು ಕನ್ನಡದಲ್ಲಿ, ಭಾರತ ಸಂಚಾರ ತಂಡ ಹಿಂದಿಯಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿದೆ.
ಇಂತಹ ಅಪ್ರತಿಮ ಚೇತನ ನಮ್ಮನ್ನು ಅಗಲಿರುವುದು ವಿಷಾದದ ಸಂಗತಿ. ಅವರ ಅಗಲುವಿಕೆಯ ನೋವನ್ನು ತುಂಬುವ ಶಕ್ತಿ ಕನ್ನಡಿಗರಿಗೆ ಬರಲಿ. ಮತ್ತೆ ಅಂತಹ ಚೇತನಗಳು ಕನ್ನಡ ನೆಲದಲ್ಲಿ ಮೈದಾಳುವಂತಹ ವಾತಾವರಣ ನಿಮರ್ಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿ ಎಂದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 