ಗ್ಯಾಸ್ ಗೋದಾಮಿನಲ್ಲಿ ಭಯ ಹುಟ್ಟಿಸಿದ ದೈತ್ಯ ನಾಗರಹಾವು!

ಗ್ಯಾಸ್ ಗೋದಾಮಿನಲ್ಲಿ ಭಯ ಹುಟ್ಟಿಸಿದ ದೈತ್ಯ ನಾಗರಹಾವು!  Giant cobra sparks fear in gas warehouse!


ಲೋಕದರ್ಶನ ವರದಿ  

ಮುಂಡಗೋಡ 02 : ಪಟ್ಟಣದ ಎಚ್‌.ಪಿ. ಗ್ಯಾಸ್ ಏಜೆನ್ಸಿ ಗೋದಾಮಿನಲ್ಲಿ  ದಿಢೀರನೇ  ನಾಗರಹಾವೊಂದು ಪ್ರತ್ಯಕ್ಷವಾಗಿ, ಸಿಬ್ಬಂದಿ ಹಾಗೂ ಕಾರ್ಮಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ. ಸಿಲಿಂಡರ್ ನಡುವೆ ನಾಗರಹಾವು ಪ್ರತ್ಯಕ್ಷ: ಬಸವರಾಜ ಓಶಿಮಠ ಅವರಿಗೆ ಸೇರಿದ ಗ್ಯಾಸ್ ಗೋದಾಮಿನ ಒಳಗೆ ಬೃಹತ್ ಪ್ರಮಾಣದ ನಾಗರಹಾವು ಪ್ರತ್ಯಕ್ಷವಾಗಿತ್ತು. ಸಿಲಿಂಡರ್ಗಳ ನಡುವೆ ಹಾವು ಹೆಡೆಬಿಚ್ಚಿ ನಿಂತಿದ್ದನ್ನು ಕಂಡು ಭಯಭೀತರಾದ ಸಿಬ್ಬಂದಿ ಉಮೇಶ್, ತಕ್ಷಣವೇ ಗಸ್ತು ಅರಣ್ಯಪಾಲಕರಾದ  ಮುತ್ತುರಾಜ ಹಳ್ಳಿ ಅವರಿಗೆ ದೂರವಾಣಿ ಕರೆ ಮಾಡಿ ನೆರವು ಕೋರಿದರು.

ಸ್ಪಾಟ್ಗೆ ಧಾವಿಸಿದ ಅರಣ್ಯಪಾಲಕನ ರಕ್ಷಣೆ: ವಿಷಯ ತಿಳಿಯುತ್ತಿದ್ದಂತೆಯೇ ಕ್ಷಣವೂ ತಡಮಾಡದೆ ಸ್ಥಳಕ್ಕೆ ಧಾವಿಸಿದ ಅರಣ್ಯಪಾಲಕ ಮುತ್ತುರಾಜ್ ಹಳ್ಳಿ, ಅತ್ಯಂತ ಜಾಗರೂಕತೆ ಹಾಗೂ ಸಮಯಪ್ರಜ್ಞೆಯಿಂದ ಹಾವನ್ನು ಹಿಡಿದರು. ಯಾರಿಗೂ ಯಾವುದೇ ಹಾನಿಯಾಗದಂತೆ ನಾಗರಹಾವನ್ನು ಸುರಕ್ಷಿತವಾಗಿ ಬಾಟಲಿಯಲ್ಲಿ ಬಂಧಿಸಿ, ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟುರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿ, ಸಾರ್ವಜನಿಕರ ಪ್ರಾಣ ರಕ್ಷಣೆ ಹಾಗೂ ಪ್ರಾಣಿ ದಯೆ ಮೆರೆದ ಅರಣ್ಯಪಾಲಕ ಮುತ್ತುರಾಜ ಹಳ್ಳಿ ಅವರ ಸಾಹಸಕ್ಕೆ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.