ಇಂದಿನಿಂದ ಗೈಬಿಸಾಬ್ ದರ್ಗಾ ಉರುಸು
Ghaibisab Dargah Urs from today
ಲೋಕದರ್ಶನ ವರದಿ
ಬೀಳಗಿ 20: ತಾಲೂಕಿನ ಯಡಹಳ್ಳಿ (ಗಲಗಲಿ) ಹಜರತ್ ಪೀರ್ ಗೈಬಿಸಾಬ್ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯ ಕೇಂದ್ರವಾಗಿದ್ದು, ಮಾ.21 ರಂದು ಉರುಸು ನಡೆಯಲಿದೆ. ಈ ಬಾರಿಯೂ ಮೂರು ದಿನ ಉರುಸು ಅದ್ದೂರಿಯಾಗಿ ಜರುಗಲಿದ್ದು, ನಾನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಉರುಸು ದಿವಸ ಮಹರ್ಷಿ ವಾಲ್ಮೀಕಿ ನಾಟ್ಯ ಸಂಘದಿಂದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ ಎಂದು ಸಾಮಾಜಿಕ ನಾಟಕ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷ ಮೌಲಾಸಾಬ್ ಜಮಾದಾರ, ಕಾರ್ಯದರ್ಶಿ ಭಾಷಾಸಾಬ್ ಚಿಕ್ಕಗಲಗಲಿ ತಿಳಿಸಿದ್ದಾರೆ. ಹಿಂದೂ-ಮುಸ್ಲಿಂ ಸಮುದಾಯಕ್ಕೂ ಪವಿತ್ರ ಕ್ಷೇತ್ರವಾಗಿರುವ ಈ ದರ್ಗಾಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ದೇಸಾಯಿ ಮನೆತನದ ಗಲೀಫ್ ಹಾಗೂ ನೈವೇದ್ಯ ಆರ್ಿಸಿದ ಮೇಲೆಯೇ ಉರುಸು ಆರಂಭವಾಗುತ್ತದೆ. ಸುತ್ತಮುತ್ತಲಿನ ಜನತೆ ಜಾತಿ ಭೇದವಿಲ್ಲದೇ ಎಲ್ಲರೂ ಮನೆಗಳನ್ನು ಶೃಂಗರಿಸುವ ಮೂಲಕ ಉರುಸಿನಲ್ಲಿ ಭಕ್ತಿಯಿಂದ ಭಾಗವಹಿಸುತ್ತಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 