ತಾಳಿಕೋಟಿ ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ

ತಾಳಿಕೋಟಿ ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ  General meeting of all members of Talikoti Municipality

ತಾಳಿಕೋಟಿ 20: ಪಟ್ಟಣದ ಎಲ್ಲ 23 ವಾರ್ಡ್‌ ಗಳಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳಾದ ಸುಸಜ್ಜಿತ ರಸ್ತೆಗಳು ಚರಂಡಿ ವಿದ್ಯುತ್ ದೀಪ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟು ಕೆಲಸ ಮಾಡಬೇಕೆಂದು ಸದಸ್ಯರು ಮುಖ್ಯಾಧಿಕಾರಿಗಳಿಗೆ ಒತ್ತಾಯಿಸಿದರು.  

ಪುರಸಭೆ ಅಧ್ಯಕ್ಷೆ ಜುಬೇದಾಬೇಗಂ ಹುಸೇನ ಭಾಷಾ ಜಮಾದಾರ ಅಧ್ಯಕ್ಷತೆಯಲ್ಲಿ ಬುಧವಾರ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಸಭೆಯಲ್ಲಿ ಒಟ್ಟು 19 ವಿಷಯಗಳ ಕುರಿತು ಚರ್ಚಿಸಲಾಯಿತು ಇವುಗಳಲ್ಲಿ ಪ್ರಮುಖವಾಗಿ ವಿವಿಧ ದಲಿತ ಪರ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳಿಂದ ಸಿ ಎ ಸೈಟ್ ಒದಗಿಸಲು ಕೋರಿ ಬಂದ ಅರ್ಜಿಗಳ ಕುರಿತು ಮಂಜೂರಾತಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸಿ ಎ ಸೈಟ್ ಒದಗಿಸುವ ಕುರಿತು,ಡಾ.ಬಾಬು ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ ಜಾಗ ಒದಗಿಸುವ ಬಗ್ಗೆ,ಡಾ.ಬಿ.ಆರ್‌. ಅಂಬೇಡ್ಕರ್ ಸಮುದಾಯ ಭವನಕ್ಕೆ ಸರ್ವೆ ನಂಬರ್ 110 ಕ್ಷೇತ್ರ ಒಂದು ಎಕರೆ 13 ಗುಂಟೆ ಜಾಗದ ಕುರಿತು, ತಾಳಿಕೋಟಿ ಪುರಸಭೆಗೆ ಹತ್ತಿರದ ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ರಜಪೂತ ಕ್ಷೇಮಾ ಭಿವೃದ್ಧಿ ಸಂಘ ಮತ್ತು ಟಿಪ್ಪು ಸುಲ್ತಾನ್ ವೃತ್ತ ನಿರ್ಮಿಸಲು ಜಾಗ ಕೊಡವ ಕುರಿತು, ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಚೌಕಿ ನಿರ್ಮಾಣ, ಪುರಸಭೆಯಲ್ಲಿ ಬಾಕಿ ಉಳಿದ ಪುರಸಭೆ ಮಾಲ್ಕಿ ವಾಣಿಜ್ಯ ಮಳಿಗೆಗಳ ಹರಾಜು, ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡ್ಗಳಲ್ಲಿ ಅತಿ ಮಳೆಯಿಂದಾಗಿ ಹಾನಿಗೆ ಒಳಗಾದ ರಸ್ತೆಗಳಿಗೆ ಮುರ್ರಂ ಹಾಕೋದಕ್ಕೆ ಅನುಮೋದನೆ, ಈಗಾಗಲೇ ಹರಾಜಾದ ಮಳಿಗೆಗಳ ಮಂಜುರಾತಿ, ವಿವಿಧ ಯೋಜನೆಗಳಲ್ಲಿ ಕರೇದ ಟೆಂಡರ್ ಕಾಮಗಾರಿಗಳಿಗೆ ಬಂದ ದರವಾರುಗಳಿಗೆ ಮಂಜುರಾತಿ ನೀಡುವ ಕುರಿತು, ಹೊಸ ವಿನ್ಯಾಸಗಳಿಗೆ ಮಂಜೂರಿ ನೀಡುವ ಕುರಿತು, ಘನತಾಜ್ಯ ವಸ್ತು ವಿಲೇವಾರಿ ಸ್ಥಳದಲ್ಲಿ ಸಂಸ್ಕರಿಸಿದ ಪಾರಂಪರಿಕ ಗೊಬ್ಬರದ ಲೀಲಾವು, ಹೀಗೆ ಒಟ್ಟು 19 ವಿಷಗಳನ್ನು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಒಪ್ಪಿಗೆ ಪಡೆಯಲಾಯಿತು.  

ಸದಸ್ಯರಾದ ವಾಸುದೇವ ಹೆಬಸೂರ, ಮುದುಕಪ್ಪ ಬಡಿಗೇರ ಹಾಗೂ ಜೈಸಿಂಗ್ ಮೂಲಿಮನಿ ಮಾತನಾಡಿ ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ಬರಬೇಕಾದ ಬಾಡಿಗೆಯನ್ನು ವಸೂಲಿ ಮಾಡಲು ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ತಿಳಿಸಿದರು ಹಾಗೂ ಅಮೃತ 2.01 ಯೋಜನೆ ಕಾಮಗಾರಿ ಕುರಿತು ಸಾಕಷ್ಟು ದೂರುಗಳಿವೆ ಅವುಗಳನ್ನು ಸರಿಪಡಿಸಬೇಕೆಂದು ಮುಖ್ಯಾಧಿಕಾರಿಗೆ ಆಗ್ರಹಿಸಿದರು. ಈಗಾಗಲೇ ರೂಪಿಸಿದ ಕ್ರಿಯಾ ಯೋಜನೆಯ ಅನುದಾನವನ್ನು ಎಲ್ಲ 23 ವಾರ್ಡುಗಳಲ್ಲಿಯೂ ಅಗತ್ಯಕ್ಕೆ ಅನುಸಾರವಾಗಿ ಬಳಸಬೇಕು ಎಂದು ಹೇಳಿದರು. ಸದಸ್ಯರ ಸಲಹೆಗಳಿಗೆ ಸ್ಪಂದಿಸಿ ಮುಖ್ಯಾಧಿಕಾರಿ ವಸಂತ ಪವಾರ ಮಾತನಾಡಿ ಸಲಹೆಗಳನ್ನು ಪರಿಗಣಿಸಿ ಸೂಕ್ತ ಕ್ರಮವನ್ನು ವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.  

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಗೌರಮ್ಮ ಕುಂಬಾರ ಸದಸ್ಯರಾದ ವಾಸುದೇವ್ ಹೆಬಸೂರ, ಕಸ್ತೂರಿಬಾಯಿ ಬಿರಾದಾರ, ಪರುಶುರಾಮ ತಂಗಡಗಿ, ಇಸ್ಮಾಯಿಲಬಿ ಮಕಾಂದಾರ, ಮುತ್ತಪ್ಪ ಚಮಲಾಪೂರ, ಶಾಂತಾಬಾಯಿ ಹೊಟ್ಟಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಸಾಹಿದಾಬೇಗಂ ಬೇಪಾರಿ, ಮುಸ್ತಫಾ ಚೌಧರಿ,ಮೈಹಿಬೂಬಿ ಮನಗೂಳಿ,ನಿಂಗಪ್ಪ ಕುಂಟೋಜಿ, ಜೈ ಸಿಂಗ್ ಮೂಲಿಮನಿ, ಜಗತಾಪ ಅಣ್ಣಪ್ಪ, ಯಾಸಿನ್ ಮಮದಾಪೂರ, ಅಕ್ಕಮಹಾದೇವಿ ಕಟ್ಟಿಮನಿ, ದುಂಡಪ್ಪಗೌಡ ಪಾಟೀಲ,ಮೋಹನ್ ಬಡಿಗೇರ, ಫಾತಿಮಾಬಿ ಖಾಜಾಬಸರಿ, ಪುರಸಭೆ ಸಿಬ್ಬಂದಿಗಳಾದ ಸಂದೀಪ ವಠಾರ, ಸುರೇಶ ಅಮರಣ್ಣವರ, ಶರಣಗೌಡ ಪಾಟೀಲ, ಫಿರೋಜ್ ಮುಲ್ಲಾ, ಶಿವಾನಂದ ಜುಮ್ಮನಾಳ, ರಂಗನಾಥ ಅಜ್ಮನಿ, ಶ್ರೀಪಾದ ಜೋಶಿ, ಸಿದ್ಧಲಿಂಗ ಪಾಟೀಲ, ಶಂಕರಗೌಡ ಬಿರಾದಾರ,ಪ್ರಭು ನಾಲತವಾಡ, ದಾವಲಸಾಬ ಜಾನ್ವೇಕರ್ ಹಾಗೂ ಪ್ರದೀಪ ಇದ್ದರು.