ಆಡಳಿತ ಅಧಿಕಾರಿಗಳಿಗೆ ಸಾಮಾನ್ಯ ಸಭೆ
General meeting for administrative officers
ಬ್ಯಾಡಗಿ 13: ತಾಲೂಕಿನ 21 ಗ್ರಾಮ ಪಂಚಾಯತಿಗಳ ಪೈಕಿ 18 ಗ್ರಾಮ ಪಂಚಾಯತಿಗಳ ಆಡಳಿತ ಅಧಿಕಾರಿಯನ್ನು ನೇಮಿಸಿರುವ ಹಿನ್ನೆಲೇ ಅಲ್ಲಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ ಎಮ್ ಅವರು ನೇಮಕಗೊಂಡ ಅಧಿಕಾರಿಗಳಿಗೆ ಸಾಮಾನ್ಯ ಸಭೆ ನೆಡೆಸಲಾಯಿತು
ಆಡಳಿತ ಅಧಿಕಾರಿಗಳಿಗೆ ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಬೆಟ್ಟಿ ಕೊಟ್ಟು ಹಾಗೂ ಗ್ರಾಮ ಪಂಚಾಯತಿ ಪಿ ಡಿ ಓ ಹಾಗೂ ಕಾರ್ಯದರ್ಶಿಗಳ ಸಮೂಖದಲ್ಲಿ ಗ್ರಾಮದ ಸಮಸ್ಯಗಳ ಬಗ್ಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಗ್ರಾಮಗಳಲ್ಲಿ ಬೆಸಿಗೆ ಇರುವುದರಿಂದ ಧನಕರುಗಳಿಗೆ ಹಾಗೂ ಜನರಿಗೆ ನೀರಿನ ಕೊರತೆ ಆಗದಂತೆ ಹಾಗೂ ಕೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹಾಗೂ ಪಂಚಾಯತಿಗಳಲ್ಲಿ ನೆಡಿಯುತ್ತಿರುವ ಕಾಮಗಾರಿಗಳ ಬಗ್ಗೆ ಬೆಟ್ಟಿ ಕೊಟ್ಟು ಪರೀಶೀಲಿಸಬೇಕು. ಹಾಗೂ ಕೆಲವೂಂದು ಗ್ರಾಮ ಪಂಚಾಯತಿಯಲ್ಲಿ ಟಿಸಿ (ಕರೆಂಟ್) ಹಾಳಾಗಿದ್ದು ಕಂಡುಬಂದಿರುತ್ತದೆ ಕೊಡಲೇ ಸಂದಭಪಟ್ಟ ಅಧಿಕಾರಗಳಿಂದ ರೀಪೇರಿ ಕೆಲಸ ಮಾಡಿಸಬೇಕು.
ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸುವುದು ಹಾಗೂ ಕುಡಿಯುವ ಟ್ಯಾಂಕಗಳನ್ನು ಸ್ವಚ್ಚತೆ ಬಗ್ಗೆ ನೋಡಿಕೊಳ್ಳುವುದು ಮತ್ತು ಜನರಿಗೆ ಯಾವುದೇ ರೀತಿಯ ರೋಗರುಜಿಗಳನ್ನು ತಡೆಗಟ್ಟಲು ಗ್ರಾಮದ ಜನರಿಗೆ ತಿಳಿಸುವುದು. ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವುದರಿಂದ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಟಿವಿ ಮತ್ತು ಮೋಬೈಲ ಹಾಗೂ ಊರಿನ ಗ್ರಾಮದ ದೇಸ್ಥಾನದ ಮೈಕಗಳನ್ನು 2 ತಾಸಗಳವರೆಗೆ ಬಂದಮಾಡಿ ವಿದ್ಯಾರ್ಥಿಗಳ ಓದುವುದರ ಸಲುವಾಗಿ ಸಾರ್ವಜನಿಕರಿಗೆ ಡಂಗುರ ಸಾರುವ ಮುಖಾಂತರ ಪ್ರಚಾರ ಮಾಡಬೇಕು. ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿಗಳು ಡಾ: ನೀಲಕಂಠ ಅಂಗಡಿ, ಚಂದ್ರಶೇಖರ, ಗಣೇಶ ಕಮ್ಮಾರ, ಅಶೋಕ ಕುರುಬರ, ಮಹಬೂಬಸಾಬ ನದಾಫ್, ಆಂಜನೇಯ, ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 