ಜೆನ್ ಜಿ ದೇಶದ ನಿರ್ಮಾತೃಗಳು: ಶ್ರೀರಾಮುಲು
Gen Z are the nation-builders: Sriramulu
ಗದಗ, ಸೆ. 6: ಜೆನ್ ಜಿ ಯುವಕರು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಪೀಳಿಗೆಯಾಗಿದ್ದು, ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಗದಗ ನಗರದಲ್ಲಿ ನೀರು ಹಾಗೂ ಕೈಗಾರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಅವರು ಹೇಳಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಭಾನುವಾರ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಬಿಜೆಪಿ ಪಾದಯಾತ್ರೆಯಲ್ಲಿ ಮಾತನಾಡಿದ ಶ್ರೀರಾಮುಲು, ಜೆನ್ ಜಿ ಪರ ನಡೆಯುವ ಪ್ರತಿಭಟನೆಗಳು ಹಾಗೂ ಅವರಿಗೆ ಬೆಂಬಲ ನೀಡುವ ಸಂಘಟನೆಗಳಿಗೆ ಬಿಜೆಪಿ ಬೆಂಬಲ ನೀಡಲಿದೆ ಎಂದರು.
ಜೆನ್ ಜಿ ಹೋರಾಟದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನೋಟಿಸ್ ನೀಡಿರುವ ಘಟನೆ ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಜಿಲ್ಲಾ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅನಿಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದ ಶ್ರೀರಾಮುಲು, “ನನಗೆ ಅಧಿಕಾರ ಇಲ್ಲ. ಆದರೆ ಜನರ ಮನಸ್ಸಿನಲ್ಲಿ ನನಗೆ ಜಾಗ ನೀಡಿದ್ದೀರಿ. ನಾವು ಹಿಂದೆ ಹೊಸ ಪಕ್ಷ ಕಟ್ಟಿದಾಗ ಅನಿಲ್ ಮೆಣಸಿನಕಾಯಿ ಜೋಡೆತ್ತಿನಂತೆ ನನಗೆ ಸಹಕಾರ ನೀಡಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೂರು ಹೊತ್ತಿನ ಬುತ್ತಿ ಕಟ್ಟಿಕೊಂಡು ಅನಿಲ್ ಅವರನ್ನು ಗೆಲ್ಲಿಸೋಣ” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅನಿಲ್ ಮೆಣಸಿನಕಾಯಿ ಜನನಾಯಕ. ಗದಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಇತರರಿಗಿಂತ ಅನಿಲ್ ಮೆಣಸಿನಕಾಯಿ ಅವರ ಮೇಲೆ ನಮ್ಮ ಪ್ರೀತಿ ಹೆಚ್ಚಿದೆ. ಸೂಕ್ತ ಸಮಯದಲ್ಲಿ ಪ್ರಚಾರಕ್ಕೆ ಬರುವುದಾಗಿ ಹೇಳಿದ ಅವರು, ಅನಿಲ್ ಅವರನ್ನು ವಿಧಾನಸೌಧದಲ್ಲಿ ಶಾಸಕರಾಗಿ ನೋಡಬೇಕೆಂಬ ಆಸೆ ಇದೆ ಎಂದರು.
ಈ ಸಂದರ್ಭದಲ್ಲಿ ರವಿಕಾಂತ ಅಂಗಡಿ, ವಸಂತ ಪಡಗದ, ಪರಮೇಶ ಲಮಾಣಿ, ಶರಣು ಚಿಂಚಲಿ, ವಿರೇಶ ಕಲ್ಮಠ, ಮಂಜುನಾಥ ಹಳ್ಳೂರುಮಠ, ಬಸಯ್ಯ ಸಾಸೊಳ್ಳಿಮಠ, ಸುಭಾಷ ಸುಂಕದ, ಕುಮಾರ ಮಾರನಬಸರಗಿ, ಚೆನ್ನಮ್ಮ ಹುಳಕನ್ನವರ, ಆಶಾ ಜೂಲಗುಡ್ಡ, ಟಿ.ಡಿ. ಪೂಜಾರ, ಕಾಳು ತೋಟದ, ಶಶಿಕುಮಾರ ಕಳಸಾಪೂರಶೆಟ್ರ, ಫಕೀರೇಶ ಮುಳಗುಂದ, ರಾಮು ವಾಲ್ಮೀಕಿ, ದೇವಾನಂದ ತೋಟದ, ಗೋಪಾಲ ನಾಯಕ, ಸಂತೋಷ ಪವಾರ, ಪ್ರಭುಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 