ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾಗಿ ಗೀತಾ ಮಲ್ಲಿಕಾರ್ಜುನ ಥಾಂವಶಿ ನಾಮನಿರ್ದೇಶನ

ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾಗಿ ಗೀತಾ ಮಲ್ಲಿಕಾರ್ಜುನ ಥಾಂವಶಿ ನಾಮನಿರ್ದೇಶನ Geetha Mallikarjuna Thamvashi nominated as member of Karnataka State Commission for Scheduled Castes

ಧಾರವಾಡ 26: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ಹೆಚ್ಚುವರಿ ಸದಸ್ಯರಾಗಿ ಧಾರವಾಡದ ಗೀತಾ ಮಲ್ಲಿಕಾರ್ಜುನ ಥಾಂವಶಿ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಧಾರವಾಡದ ಸಪ್ತಾಪೂರ, 12 ನೇ ಕ್ರಾಸ್, ಜಯನಗರ ನಿವಾಸಿಯಾಗಿರುವ ಗೀತಾ ಮಲ್ಲಿಕಾರ್ಜುನ ಥಾಂವಶಿ ಅವರು ವೃತ್ತಿಯಿಂದ ವಕೀಲರಾಗಿದ್ದಾರೆ. ಇವರನ್ನು ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದಾದರೂ ಮೊದಲನೆಯದಾಗುವವರೆಗೆ ಸದಸ್ಯರಾಗಿ ನೇಮಕ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.