ಗೀಗೀ ಪದಗಳು ದೇಶದ ಹಿರಿಮೆಯನ್ನು ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಜನರಿಗೆ ಎತ್ತಿ ತೋರಿಸುವುದು: ಮಲ್ಲಯ್ಯಸ್ವಾಮಿ ತೋಟಗಂಟಿ
Geegee words highlight the greatness of the country and the importance of the freedom struggle to th
ಲೋಕದರ್ಶನ ವರದಿ
ಧಾರವಾಡ 09: ಲಾವಣಿ ಹಾಗೂ ಗೀಗೀ ಪದಗಳು ಕೇವಲ ಮನರಂಜನೆಗಾಗಿ ರಚಿಸಿದವುಗಳಲ್ಲ. ಆ ಎಲ್ಲಾ ಹಾಡುಗಳಲ್ಲಿ ನಮ್ಮ ಜನಪದ ಸಂಸ್ಕೃತಿ ಹಾಗೂ ನೀತಿ ಪಾಠಗಳನ್ನು ಸಮಾಜಕ್ಕೆ ತಿಳಿಸುವ ಸಂದೇಶಗಳಿವೆ. ಜಾನಪದ ಶೈಲಿಯ ಈ ಪದಗಳಲ್ಲಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ವೀರರ ಕಥನಗಳನ್ನು ಸಾರುವಂತವುಗಳಾಗಿವೆ ಎಂದು ಜಾನಪದ ವಿದ್ವಾಂಸರಾದ ಮಲ್ಲಯ್ಯಸ್ವಾಮಿ ತೋಟಗಂಟಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ. ದೇವೇಂದ್ರಕುಮಾರ ಹಕಾರಿ ದತ್ತಿ’ ಕಾರ್ಯಕ್ರಮದಲ್ಲಿ ‘ಲಾವಣಿ ಪದ ಹಾಗೂ ಗೀಗೀ ಪದಗಳಲ್ಲಿ ದೇಶಭಕ್ತಿ’ ವಿಷಯ ಕುರಿತು ಮಾತನಾಡುತ್ತಿದ್ದರು.
ಗೀಗೀ ಪದಗಳು ಭಾರತದ ಸ್ವಾತಂತ್ರ್ಯ ಹೋರಾಟದ ಆ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಜನಸಾಮಾನ್ಯರಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿಯನ್ನು ಉಂಟು ಮಾಡಲು ಬೆಳಗಾವಿ ಜಿಲ್ಲೆಯ ಹುಲಕುಂದದ ಭೀಮಕವಿಯು ಸ್ವತಃ ಹಾಡುಕಟ್ಟಿ ಮೇಳಗಳ ಮೂಲಕ ಜನಜಾಗೃತಿ ಮೂಡಿಸಿದರು. ಈ ಎಲ್ಲಾ ಗೀಗೀ ಪದಗಳು ದೇಶದ ಹಿರಿಮೆಯನ್ನು ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಜನರಿಗೆ ಎತ್ತಿ ತೋರಿಸಿದವು.
ಗೀಗೀ ಪದಗಳಲ್ಲಿ ಐತಿಹಾಸಿಕ, ಸಾಮಾಜಿಕ ಹಾಸ್ಯ ಪೌರಾಣಿಕ ಪದಗಳಿವೆ. ಅಂದಿನ ಕಾಲದ ನಮ್ಮ ಸಂಸ್ಕೃತಿ, ಪರಂಪರೆ, ದೇಶದ ಜನರ ಸ್ಥಿತಿಗತಿಗಳನ್ನು ಹಾಡಿನ ಮೂಲಕ ಪ್ರಚಾರ ಮಾಡಿ, ಜನಮನ ತಿದ್ದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿದರು. ಹುಲಕುಂದದ ಭೀಮಕವಿಯ ನಂತರ ಇಂದು ನೂರಾರು ಗೀಗೀ ಪದಗಳ ಮೇಳಗಳು ಕರ್ನಾಟಕದಲ್ಲಿ ಹುಟ್ಟಿಕೊಂಡವು. ಫಕ್ಕೀರವ್ವ ಗುಡಿಸಾಗರಂತಹ ಕಲಾವಿದರ ಸೇವೆ ಸ್ಮರಣೀಯ ಎಂದು ಹೇಳಿದ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹಾದೇವಪ್ಪ, ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣರ ಕುರಿತು ಹಾಡುಗಳನ್ನು ಹಾಡಿ ಜನಮನ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ಧ ಕ.ವಿ.ವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಮಹೇಶ ಧ. ಹೊರಕೇರಿ ಮಾತನಾಡಿ, ಲಾವಣಿ ಹಾಗೂ ಗೀಗೀ ಪದಗಳನ್ನು ಮೂಲ ಜಾನಪದಕ್ಕೆ ದಕ್ಕೆ ಬಾರದಂತೆ ಹಾಡಬೇಕು. ಈ ಪದಗಳಲ್ಲಿ ದ್ವಂದಾರ್ಥದ ಹಾಡುಗಳು ಜನಪದರ ಮನೋವಿಕಾರಕ್ಕೆ ಕಾರಣವಾಗುತ್ತವೆ. ಬದಲಾಗಿ ಪದಗಳು ಮನಸ್ಸಿಗೆ ಮುದ ನೀಡುವಂತಿರಬೇಕು. ನಮ್ಮ ನೆಲದ ಹೋರಾಟಗಾರರ ಸೇವೆ, ತ್ಯಾಗ ಸ್ಮರಿಸಬೇಕು. ಗೀಗೀ ಪದಗಳು ಅರ್ಥಗರ್ಭಿತವಾಗಿದ್ದು ಜನಸಾಮಾನ್ಯರಿಗೂ ತಿಳಿಯುತ್ತವೆ ಎಂದರು.
ವೇದಿಕೆಯಲ್ಲಿದ್ದ ದತ್ತಿದಾನಿ ರವಿಶಂಕರ ಹಕಾರಿ ದತ್ತಿ ಆಶಯ ಕುರಿತು ಮಾತನಾಡಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಉದಯಶಂಕರ ಹಕಾರಿ, ರವಿ ತೋಟಗಂಟಿ, ಎಚ್.ಎನ್. ಸುಣಗಾರ, ಡಾ. ಸದಾಶಿವ ಮರ್ಜಿ, ಡಾ. ಚಂದ್ರಶೇಖರ ರೊಟ್ಟಿಗವಾಡ ಸೇರಿದಂತೆ ಹಕಾರಿ ಪರಿವಾರದವರು, ಅಭಿಮಾನಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 