ಗಾಯತ್ರೀ ತಪೋಭೂಮಿಯ ರಜತ ಮಹೋತ್ಸವ ಸಮಾರಂಭಕ್ಕೆ ವಿದ್ಯುಕ್ತ ತೆರೆ
ಶಿಗ್ಗಾವಿ 17: 'ಗಾಯತ್ರಿ ತಪೋಭೂಮಿಯ ಈ ನೆಲದಲ್ಲಿ ಇದೇ ರೀತಿಯ ಹೋಮ ಹವನಗಳು ನಿರಂತರ ಜರಗುವಂತಾಗಲಿ ಎಂದು ಶಿವಮೂರ್ತಿ ಜೋಯಿಸ ಕಾರವಾರ ಹೇಳಿದರು. ತಾಲೂಕಿನ ತಡಸ ಗಾಯತ್ರಿ ತಪೋಭೂಮಿಯ ರಜತ ಮಹೋತ್ಸಕ್ಕೆ ಏಪ್ರಿಲ್ 16ರಂದು ಜಗದ್ಗುರುಗಳಾಗಿರುವಂಥ ಶೃಂಗೇರಿಯ ವಿಧುಶೇಖರ ಭಾರತಿ ಮಹಾಸ್ವಾಮಿಯವರ ಆಶೀರ್ವಚನದೊಂದಿಗೆ ವಿದ್ಯುಕ್ತ ತೆರೆ ಬಿದ್ದಿತು. ನಂತರ ಮಾತನಾಡಿದ ಅವರು ಗುರು ವಲ್ಲಭ ಚೈತನ್ಯರ ಮತ್ತು ಗಾಯತ್ರಿ ದೇವಿಯ ಅನುಗ್ರಹ ಇಲ್ಲಿನ ಎಲ್ಲಾ ಅನುಯಾಯಿಗಳಿಗೆ ದೊರೆಯಲಿ' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬೆಳಗ್ಗೆ 8 ರಿಂದ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳಾಗಿರುವಂತ ದಕ್ಷಿಣ ಮೂರ್ತಿ ಪ್ರತಿಷ್ಠಾಪನೆ, ಧರ್ಮ ಧ್ವಜ ನವಗ್ರಹ ಪ್ರತಿಷ್ಠಾಪನೆಗಳು ಆಗಮಿಕರ ಮಂತ್ರ ಮತ್ತು ಪದ್ಧತಿ ಅನುಸಾರ ಪೂರ್ಣಗೊಂಡಿದ್ದು. ಏಪ್ರಿಲ್ 9 ರಿಂದ ಜರುಗುತ್ತಿದ್ದ ಹೋಮ ಹವನಗಳ ಪೂರ್ಣಾಹುತಿಯೊಂದಿಗೆ, ಕುಂಭಾಭಿಷೇಕ, ಕಳಸ ಸ್ಥಾಪನೆ ನಂತರ, ಶ್ರೀಗಳು ವೇದಿಕೆಯ ಮೇಲಿಂದ ಭಕ್ತರಿಗೆ ಆಶೀರ್ವಚನವನ್ನು ನೀಡಿದರು. ನೆರೆದಿದ್ದ ಭಕ್ತರಿಗೆ ಶ್ರೀಗಳು ಫಲಕ್ಷತೆಗಳನ್ನು ನೀಡಿ ಆಶೀರ್ವದಿಸಿದರು. ಗಾಯತ್ರಿ ತಪ್ಪೊ ಭೂಮಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ವಿನಾಯಕ್ ಪಿ ಅಕಲವಾಡಿ, ಉಪಾಧ್ಯಕ್ಷ ಅಶೋಕ್.ವಿ. ಹರ್ಪನಹಳ್ಳಿ, ಬಿ. ಆರ್ .ಪದಕಿ, ಕೆ .ಎಲ್. ಕುಲಕರ್ಣಿ, ಕೆ. ಎಸ್. ಕುಲಕರ್ಣಿ, ಜಿ.ಎಸ್. ಕುಲಕರ್ಣಿ, ಎನ್. ಪಿ.ಆಕಳವಾಡಿ, ಡಾ. ಎಸ್ ವಿ .ಕೊಣ್ಣುರು ,ಆರ್. ಡಿ.ರತ್ತಿ, ಜಿ ,ಎನ್. ಕುಲಕರ್ಣಿ, ಎನ್ .ಸಿ. ಐಲ್ ಮತ್ತುಎಲ್ಲ ಪದಾಧಿಕಾರಿಗಳು ಶ್ರೀಗಳಿಗೆ ಟ್ರಸ್ಟ್ ನ ಪರವಾಗಿ ಗೌರವ ಅಭಿನಂದನೆಗಳನ್ನ ಸಲ್ಲಿಸಿದರು.