ಶ್ರದ್ಧಾಭಕ್ತಿಯಿಂದ ಗಾಯತ್ರಿದೇವಿ ಮೂರ್ತಿ ಪ್ರತಿಷ್ಠಾಪನೆ
Gayatri Devi idol installed with devotion
ಲೋಕದರ್ಶನ ವರದಿ
ಕಂಪ್ಲಿ 21: ಪಟ್ಟಣದ ದೇವಾಂಗ ಸಮಾಜದ ಆನೆಮಠದಲ್ಲಿ ಶ್ರೀಗಾಯತ್ರಿದೇವಿಯ ಮೂರ್ತಿ ಪ್ರತಿಷ್ಠಾಪನೆ ಅತ್ಯಂತ ಶ್ರದ್ಧೆಯ ಜೊತೆಗೆ ಸಡಗರ ಸಂಭ್ರಮದಿಂದ ಮಂಗಳವಾರ ನೆರವೇರಿತು. ಆನೆಮಠದಲ್ಲಿ ಮಹಾಗಣಪತಿ ಮತ್ತು ಗೋಪೂಜೆ, ವಾಸ್ತು, ಮಹಾರುದ್ರ, ನವಗ್ರಹ, ಹೋಮಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು. ಕಾರ್ಯಕ್ರಮದ ದಿವ್ಯಸಾನಿದ್ಯ ಆನೆಮಠ ದೇವಾಂಗ ಮಠ(ಆನೆಮಠ)ದ ಗುರು ಮಾತೆ ಶ್ರೀ ಸಾವಿತ್ರಮ್ಮ ತ್ರಿಪುರಾಂತ ಸ್ವಾಮಿ ಇವರು ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು. ನಂತರ ಆಶೀರ್ವಚನ ನೀಡಿದರು. ಪುರೋಹಿತ ಶಂಕ್ರಯ್ಯಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಾರ್ಯಗಳು ಭಕ್ತಿ ಪೂರ್ವಕವಾಗಿ ನಡೆದವು. ನಂತರ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಗೌರವಾಧ್ಯಕ್ಷ ಶೀಲವಂತರ ವಿರೇಶ, ಉಪಾಧ್ಯಕ್ಷರಾಗಿ ಶೀಲವಂತರ ತುಳಿಸಿ ರಾಮಚಂದ್ರ, ಕಾರ್ಯದರ್ಶಿ ಮಾಗನೂರು ರಾಜೇಶವರ್ಮ, ಸಹಕಾರ್ಯದರ್ಶಿ ದೂಪದ ಪ್ರಶಾಂತಕುಮಾರ್, ಪುಟ್ಟಿ ರಾಘವೇಂದ್ರ, ಖಜಾಂಚಿ ಗದ್ಗಿ ವಿರುಪಾಕ್ಷಿ, ಸದಸ್ಯರಾದ ಡಿ.ದೂಪದ ಸುಭಾಷಚಂದ್ರ, ದೂಪದ ಮಂಜುನಾಥ, ವೀರೇಶ, ಸಜ್ಜೆ ರಮೇಶ, ಕಡೆಕಲ್ ವಿರುಪಣ್ಣ, ಕಾಕಂಡ್ಡಿ ಮಹೇಶ, ಸಜ್ಜೆ ವೆಂಕಟೇಶ, ಓದ ವಿರುಪಾಕ್ಷಿ, ಸಲಹಾ ಸಮಿತಿ ಸದಸ್ಯರಾದ ವನಕೆ ಶಂಕರ್ಪ, ಶೀಲವಂತರ ಸುಬ್ಬಣ್ಣ, ಪೋಡಿ ನಾರಾಯಣಪ್ಪ, ಓದ ಬಸವರಾಜ, ಹಂಪರಗುಂದಿ ನಾಗರಾಜ ಹಾಗೂ ಗದ್ದಿ ಚೌಡೇಶ್ವರಿದೇವಿ ಸೇವಾ ಸಮಿತಿ, ಶ್ರೀಬನಶಂಕರಿ ದೇವಾಂಗ ಮಹಿಳಾ ಸಮುದಾಯದವರು ಸೇರಿದಂತೆ ಸಮಾಜದ ಭಕ್ತರು ಪಾಲ್ಗೊಂಡಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 