ಅಂಧರಿಗೆ ಆನಂದ ಕೊಟ್ಟವರು ಗವಾಯಿಗಳು : ಮೂಗನೂರಮಠ

ಅಂಧರಿಗೆ ಆನಂದ ಕೊಟ್ಟವರು ಗವಾಯಿಗಳು : ಮೂಗನೂರಮಠ Gawais are the ones who gave joy to the blind: Muganuram Math


ಬಾಗಲಕೋಟೆ (03): ಬದುಕಿನುದ್ದಕ್ಕೂ ಸ್ವಯಂ ಅಂಧರಾಗಿ, ಅಂಧ, ಅನಾಥ, ಅಂಗವಿಕಲ, ಬಡಮಕ್ಕಳಿಗೆ ಬೆಳಕನ್ನು ಕೊಟ್ಟವರು ಪಂಡಿತ ಪುಟ್ಟರಾಜ ಗವಾಯಿಯವರು ಎಂದು ಪ್ರಾಚಾರ್ಯರಾದ ಎಸ್‌. ಆರ್‌. ಮೂಗನೂರಮಠ ಹೇಳಿದರು.  

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯೋತ್ಸವದಲ್ಲಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪ ಸಮರ​‍್ಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಗೀತದ ಅನೇಕ ವಾದ್ಯಗಳಲ್ಲಿ ಪಾಂಡಿತ್ಯ ಹೊಂದಿದವರು. ಉಭಯ ಗಾಯನ ವಿಷಾಂದರಾಗಿದ್ದರು. ಕವಿ, ಸಾಹಿತಿಗಳಾಗಿ ಅನೇಕ ಪುರಾಣಗಳು, ಸಂಗೀತ ಬಂದಿಶ್‌ಗಳು, ವಚನಗಳನ್ನು ರಚನೆ ಮಾಡಿ ಭಾಷಾಂತರಿಸಿದವರು. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮನ್ನು ತಾವು ಸಮರಿ​‍್ಸಕೊಂಡವರು ಗವಾಯಿಗಳು ಎಂದರು.  

ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಿ.ಮಠ ಅವರು ಮಾತನಾಡಿ ಬಾಲ್ಯದಲ್ಲಿಯೇ ಕಣ್ಣುಗಳನ್ನು ಕಳೆದುಕೊಂಡು ಸೋದರಮಾವನ ಆಶ್ರಯದಲ್ಲಿ, ಪಂಚಾಕ್ಷರಿ ಗವಾಯಿಗಳ ಮಾರ್ಗದರ್ಶನದಲ್ಲಿ ಸಂಗೀತವನ್ನು ಕಲಿತು, ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತವನ್ನು ಅಭ್ಯಸಿಸಿ, ಸಂಸ್ಕೃತ, ಹಿಂದಿ, ಕನ್ನಡ, ತೆಲುಗು ನಾಲ್ಕು ಭಾಷೆಗಳಲ್ಲಿ ಪರಿಣಿತಿ ಹೊಂದಿ, ಕನ್ನಡ ಸಂಗೀತ ಕಲಿಕೆಯಲ್ಲಿ ಕರ್ನಾಟಕ ಸಂಗೀತ ಕಲಿಯುವ ಮಕ್ಕಳಿಗೆ ಸ್ಫೂರ್ತಿಯಾಗಿದ್ದರು.  

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಎ.ಯು.ರಾಠೋಡ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಆರ್‌.ನಾಗರಾಜು, ಪ್ರಾಧ್ಯಾಪಕರಾದ ಡಾ. ಎಸ್‌.ಡಿ.ಕೆಂಗಲಗುತ್ತಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಎಂ.ಎಂ.ದೇವನಾಳ ಸೇರಿದಂತೆ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.