26 ರಂದು ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ
Gavisiddha N. Bellary - Literary Festival on the 26th
26 ರಂದು ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ
ಕೊಪ್ಪಳ 24 : ‘ನಾಡಕವಿ’ ಖ್ಯಾತಿಯ ಗವಿಸಿದ್ಧ ಎನ್. ಬಳ್ಳಾರಿಯವರ ಸ್ಮರಣೆಯಲ್ಲಿ ಪ್ರತೀ ವರ್ಷ ಆಯೋಜಿಸಲಾಗುವ ‘ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ’ ಕಾರ್ಯಕ್ರಮವು ಇದೇ ಅಕ್ಟೋಬರ್ 26 ರಂದು ನಗರದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ. ಕಡೂರಿನ ಮಾಜಿ ಶಾಸಕರು, ಚಿಂತಕರೂ ಆದ ವೈ.ಎಸ್.ವಿ. ದತ್ತ ಮತ್ತು ಮೂಡಬಿದಿರೆಯ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ. ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ, ಬಸವ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ಪತ್ರಕರ್ತ ಡಾ. ಜಗದೀಶ ಅಂಗಡಿ, ಕವಯಿತ್ರಿ ಮಮತಾ ಅರಸೀಕೆರೆ, ವರ್ತಕ ಪದಮ್‌ಚಂದ್ ಮೆಹತಾ, ಹಿರಿಯ ಸಾಹಿತಿಗಳಾದ ಎಚ್.ಎಸ್. ಪಾಟೀಲ ಮತ್ತು ಅಲ್ಲಮಪ್ರಭು ಬೆಟ್ಟದೂರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬಯಿಯ ಅನಿತಾ ಪಿ. ತಾಕೊಡೆ ಮತ್ತು ಬೆಳಗಾವಿಯ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಇವರಿಗೆ ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತ್ರಿ’ ಪ್ರದಾನ ಮಾಡಲಾಗುವುದು. ಕೊಪ್ಪಳದ ಹಿರಿಯ ವೈದ್ಯರಾದ ಡಾ. ಟಿ.ಎಚ್. ಮುಲ್ಲಾ, ಹಿರಿಯ ವರ್ತಕ ಸಿದ್ಧಣ್ಣ ನಾಲವಾಡ, ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಆಡೂರ ಅವರಿಗೆ ಅಭಿನಂದನಾ ಗೌರವವನ್ನು ಮತ್ತು ಪಾರಂಪರಿಕ ಓಷಧ ವಿತರಕರಾದ ದೇವಕಿಬಾಯಿ ಶೇಖಣ್ಣಾಚಾರ್ ಶಿಲ್ಪಿ, ಫಿಸಿಯೋಥೆರಪಿಸ್ಟ್ ಪ್ರಭಾಕರ ಸನಗುಂದಿ, ವಿಕಲಚೇತನ ಕಲಾವಿದರೂ, ಗ್ರಾಮ ಪಂಚಾಯಿತಿಯ ಸದಸ್ಯರೂ ಆದ ಮರಿಯಪ್ಪ ಚಾಮಲಾಪುರ ಅವರಿಗೆ ಸಮಾಜಮುಖಿ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕವಯಿತ್ರಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’, ಶ್ರೀನಿವಾಸ ಚಿತ್ರಗಾರರ ‘ನಮ್ಮ ನಡೆ - ನಿಮ್ಮ ನುಡಿ’, ಯಲ್ಲಮ್ಮ ಹರನಾಳಗಿಯವರ ‘ಪ್ರೀತಿಯ ನಶೆಯಲಿ’ ಮತ್ತು ಮಹೇಶ ಬಳ್ಳಾರಿಯವರ ‘ದುಬೈ ದೌಲತ್ತು’ ಕೃತಿಗಳೂ ಸಹ ಈ ಸಂದರ್ಭದಲ್ಲಿ ಲೋಕಾರೆ್ಣಯಾಗಲಿವೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಸಾಹಿತ್ಯೋತ್ಸವ’ವನ್ನು ಯಶಸ್ವಿಗೊಳಿಸಬೇಕು ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 