ಗವೀದೀಪ್ತಿ-ಕೌಶಲ್ಯ ಭಾರತಿ 2.0 ಅಂತರ್ ರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಸಮಾರೋಪ ಸಮಾರಂಭ
Gavideepti-Kaushalya Bharati 2.0 International Ayurveda Symposium Closing Ceremony
ಗವೀದೀಪ್ತಿ-ಕೌಶಲ್ಯ ಭಾರತಿ 2.0 ಅಂತರ್ ರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಸಮಾರೋಪ ಸಮಾರಂಭ
ಕೊಪ್ಪಳ 12: ಶನಿವಾರ ದಿನಾಂಕ 11-10-2025 ರಂದು ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಆರೋಗ್ಯ ಭಾರತಿ ಕರ್ನಾಟಕ ಉತ್ತರ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗವೀದೀಪ್ತಿ-ಕೌಶಲ್ಯಭಾರತಿ 2.0 ಅಂತರ್ ರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣವು ನಗರದ ಮಧುಶ್ರೀ ಗಾರ್ಡನ್‌ದಲ್ಲಿ ಸಮಾರೋಪಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಬಿ.ಸಿ.ಭಗವಾನ, ಉಪಕುಲಪತಿಗಳು, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಡಾ.ಬಿ.ಎಸ್.ಪ್ರಸಾದ, ಮಾಜಿ ಅಧ್ಯಕ್ಷರು, ಬೋರ್ಡ ಆಫ್ ಆಯುರ್ವೇದ, ಎನ್.ಸಿ.ಐ.ಎಸ್.ಎಂ, ನವದೆಹಲಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸದಸ್ಯರು ಜಣಗಢನ ಆಯುರ್ವೇು ಋಢದಜಣಎದಣೋಎಂಢದದಢ ಕಾರ್ಯಾಧ್ಯಕ್ಷರಾದ ೌಥ ಚಢಂಜಂಢದ ಕಫನತಢಉಣಳ ಸಸಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದ ಡಾ. ಬಿ.ಸಿ.ಭಗವಾನ, ಉಪಕುಲಪತಿಗಳು, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮಾತನಾಡಿ ಇಂದಿನ ಈ ಗವೀದೀಪ್ತಿ-ಕೌಶಲ್ಯಭಾರತಿ ವಿಚಾರ ಸಂಕಿರಣವು ಕುಶಲತೆಯ ಮೇಲೆ ಹಮ್ಮಿಕೊಂಡಿರುವುದು ಅಗತ್ಯವಾಗಿದೆ. ಇದನ್ನು ಸರಿಯಾಗಿ ಅರಿತು ಕೌಶಲ್ಯವನ್ನು ಬೆಳೆಸಿಕೊಂಡರೆ ಮುಂದಿನ ದಿನಮಾನಗಳಲ್ಲಿ ವೈದ್ಯವೃತ್ತಿಯಲ್ಲಿ ತೊಡಗಲು ಬಹಳ ಸುಲಭವಾಗುತ್ತದೆ. ಆಯುರ್ವೇದದ ಸುಶೃತ ಆಚಾರ್ಯರು ಶಸ್ತ್ರಚಿಕಿತ್ಸಾ ಪದ್ಧತಿಯ ತಳಹದಿಗೆ ಕಾರಣೀಕರ್ತರಾಗಿದ್ದಾರೆ. ನಾನು ಒಬ್ಬ ಶಸ್ತ್ರಚಿಕಿತ್ಸಕನಾಗಿ ಅವರು ಉಲ್ಲೇಖಿಸಿದ ಕ್ಷಾರಸೂತ್ರ ಚಿಕಿತ್ಸೆಯನ್ನು ಕಲಿತು ಇನ್ನೊಬ್ಬರಿಗೂ ತಿಳಿಸಿಕೊಟ್ಟಿದ್ದೇನೆ ಎಂದು ಹೇಳಿದರು. ಆಯುರ್ವೇದವು ಒಂದು ಸಂಪೂರ್ಣ ಚಿಕಿತ್ಸಾ ಪದ್ಧತಿಯಾಗಿದ್ದು ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆಯುವ ಸಾಮರ್ಥ್ಯ ಹೊಂದಿದೆ ಎಂದರು. ಈ ನಿಟ್ಟಿನಲ್ಲಿ ಶ್ರೀ ಗವಿಮಠವು ತನ್ನದೇ ಆದ ಸಾಮಾಜಿಕ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಿದೆ. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಸಹ ಕೌಶಲ್ಯ ಮತ್ತು ಸಿಮ್ಯುಲೇಶನ್ ಲ್ಯಾಬ್ ಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು. ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಅಭಿಯಾನಕ್ಕೂ ಚಾಲನೆಯನ್ನು ನೀಡಿ ಅಂಗಾಂಗ ದಾನ ಪ್ರತಿಜ್ಞೆ ಮಾಡಲು ತಿಳಿಸಿದರು.
ಕಾರ್ಯಕ್ರಮದ ಇನ್ನೊರ್ವ ಅತಿಥಿಗಳಾದ ಡಾ. ಬಿ.ಎಸ್.ಪ್ರಸಾದ, ಮಾಜಿ ಅಧ್ಯಕ್ಷರು, ಬೋರ್ಡ ಆಫ್ ಆಯುರ್ವೇದ, ಎನ್.ಸಿ.ಐ.ಎಸ್.ಎಂ, ನವದೆಹಲಿ ಮಾತನಾಡಿ ಸುಶೃತ ಯೋಗ್ಯಸೂತ್ರೀಯ ಕಲಿಕಾ ಪದ್ಧತಿಯನ್ನು ಎಲ್ಲಾ ಮಹಾವಿದ್ಯಾಲಯಗಳು ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ವೈದ್ಯಕೀಯ ಶಿಕ್ಷಕರು ಹಾಗೂ ವೈದ್ಯರು ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವಲ್ಲಿ ನಿಪುಣತೆ ಹೊಂದಬೇಕು ಎಂದರು.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ವಹಿಸಿದ ಶ್ರೀ ಮಹೇಶ ಮುದಗಲ್ ಮಾತನಾಡಿ ಶ್ರೀ ಗವಿಮಠದ ಮೌಲ್ಯಗಳ ಮತ್ತು ಸೇವೆಯ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೂ ತಮ್ಮ ವೈದ್ಯವೃತ್ತಿಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ಹೇಳಿದರು.
ಕಾರ್ಯಕ್ರಮದಲ್ಲಿ ಆಯುರ್ವೇದದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ಎ.ಐ.ಸಣಕಲ್, ಡಾ. ಲಕ್ಷ್ಮಣಾಚಾರ್ಯ ಡಿಂಗಾರೆ, ಡಾ. ಮಮತಾ.ಕೆ.ವಿ ಹಾಗೂ ಡಾ. ಸಿದ್ದೇಶ ಆರಾಧ್ಯಮಠ ಇವರುಗಳಿಗೆ ’ಕೌಶಲ್ಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ದಿಲಿಪ್ ಪುರಾಣಿಕ್ ಇವರಿಗೆ ’ಜೀವಮಾನದ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧನೆಯನ್ನು ಮಂಡಿಸಿದ ವಿದ್ಯಾರ್ಥಿಗಳು ಹಾಗೂ ವೈದ್ಯರುಗಳಿಗೆ ಉತ್ತಮ ಪ್ರಬಂಧನ ಪ್ರಶಸ್ತಿಗಳನ್ನು ನೀಡಲಾಯಿತು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಸೆನೆಟ್ ಸದಸ್ಯರುಗಳಿಗೆ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದ ಘಢಃಢ ಉಆಢಛೀತಿಂಢದಃಢದೃ ಡಾ. ಕೆ.ಬಿ.ಹಿರೇಮಠ, ಡಾ. ಸಿದ್ದನಗೌಡ ಪಾಟೀಲ, ಡಾ. ಎಸ್.ಕೆ ಬನ್ನಿಗೋಳ ವಹಿಸಿಕೊಂಡಿದ್ದರು.
ಎರಡು ದಿನಗಳ ಗವೀದೀಪ್ತಿ-ಕೌಶಲ್ಯಭಾರತಿ 2.0 ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದ ವರದಿಯನ್ನು ಡಾ. ಗವಿಸಿದ್ದನಗೌಡ ಪಾಟೀಲ ತಿಳಿಸಿದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಉಆಢಆಣೌಂಓಢದಆಣಎರಣದಢ ಡಣ. ಚಢದರಫಥಓಢ ಜಢಕಢಮಂಡಿ ಹಾಗೂ ಋಢದಜಣಎದಣೋಎಂಢದದಢ ಪ್ರಾಂಶುಪಾಲರು, ಕಾರ್ಯಕ್ರಮದ ಅಧ್ಯಕ್ಷರಾದ ಡಣ. ಋಢದಜಣಂತಫಥಓಢ ಚಣಓಋಢದಠ ವಂದನಾರ್ಪಣಖೆ್ಲೂ್ದೂ ಚಢಓ್ಛದಢರಢದ ಹಾಗೂ ನಿರೂಪಣೆಯನ್ನು ಡಾ. ನೇಹಾ ಹಾಗೂ ಡಾ. ಐಶ್ವರ್ಯ ನಡೆಸಿಕೊಟ್ಟರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 