ಗವಿಮಠದ ಜಾತ್ರೆ ಸಮಾಜಮುಖಿ ಕಳಕಳಿಯ ಪ್ರತೀಕಽಽ ಬಿ.ಗೀರೀಶಾನಂದ ಮಿಠಾಯಿ ಅಂಗಡಿಗಳ ಮಾಲಕರಿಗೆ ಕರವೇಯಿಂದ ಸನ್ಮಾನ
Gavi Matha Fair is a symbol of social concern. B. Girishananda. The owners of the sweets shops were
ಕೊಪ್ಪಳ 17: ದಕ್ಷಿಣದ ಕುಂಭಮೇಳದ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಷ್ಟೆ ಅಲ್ಲದೇ ಸಮಾಜಮುಖಿ ಕಳಕಳಿಯ ಪ್ರತೀಕವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಹೇಳಿದರು. ಶನಿವಾರದಂದು ಜಾತ್ರೆಯ ಮಿಠಾಯಿ ಅಂಗಡಿಗಳ ನಾಮಫಲಕಗಳಲ್ಲಿ ಸಾಮಾಜಿಕ ಕಳಕಳಿಯ ಘೋಷ ವಾಕ್ಯಗಳನ್ನು ಗುರುತಿಸಿ ಪ್ರೋತ್ಸಾಯಿಸಲು ಟಿ.ಎ ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಂಗಡಿ ಮಾಲಕರಿಗೆ ಗೌರವ ಸನ್ಮಾನ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ಜ.05 ರಂದು ಜಿಲ್ಲೆಯವರೆಯಾದ ಮೇಘಾಲಯ ರಾಜ್ಯಪಾಲ ಹೆಚ್.ಸಿ ವಿಜಯಶಂಕರ್ ಅವರು ಜಾತ್ರಾ ಧ್ವಜಾರೋಹಣ ಮಾಡುವ ಮುಖಾಂತರ ಲಕ್ಷಾಂತರ ಭಕ್ತಸಾಗರದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನೇರವೇರಿದ್ದು, ಜಾತ್ರೆಯ ಅಂಗವಾಗಿ ಮಿಠಾಯಿ ಅಂಗಡಿಗಳ ನಾಮಫಲಕಗಳಲ್ಲಿ ಸಾಮಾಜಿಕ ಕಳಕಳಿಯ ಘೋಷ ವಾಕ್ಯಗಳಾದ ನಮ್ಮ ಕನ್ನಡನಾಡು ನುಡಿಯ ಅಭಿಮಾನದ ಘೋಷ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಹಕಾರ, ಕಾರ್ಖಾನೆಗಳಿಂದಾಗುವ ಪರಿಸರ ಮಾಲಿನ್ಯ ತಡೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸ್ಮರಣೆ, ಭಯೋತ್ಪಾದನೆ ನಿಗ್ರಹಕ್ಕೆ ಆಪರೇಷನ್ ಸಿಂಧೂರ, ರೈತರ ಬೆಳೆಗೆ ಬೆಂಬಲ ಬೆಲೆ, ದೇಶ ಕಾಯುವ ಯೋಧರ ಸ್ಮರಣೆ, ಇನ್ನೂ ಅನೇಕ ರೀತಿಯ ಘೋಷ ವಾಕ್ಯಗಳು ಮಿಠಾಯಿ ಅಂಗಡಿಗಳ ನಾಮಫಲಕಗಳಲ್ಲಿ ಸಾಮಾಜಿಕ ಬದ್ದತೆಯನ್ನು ಎತ್ತಿ ತೋರಿಸಿದ್ದು, ಜಾತ್ರೆಗೆ ಬೇಟಿ ನೀಡುವ ಲಕ್ಷಾಂತರ ಭಕ್ತರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಗೌರವ ಸಲಹೆಗಾರ ಗವಿಸಿದ್ದಪ್ಪ ಹಂಡಿ, ತಾಲೂಕಾಧ್ಯಕ್ಷ ಹುಸೇನಬಾಷಾ ಮಣ್ಣೂರ, ಗೌರವಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ತಾಲೂಕ ಮಹಿಳಾಧ್ಯಕ್ಷೆ ಬೋರಮ್ಮ ತಳಗಡೆ, ಗೌರವಾಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ, ಸಾಮಾಜಿಕ ಜಾಲತಾಣ ಸಂಚಾಲಕ ರಮೇಶ ಬೂದಗುಂಪ, ಮುಖಂಡರಾದ ಚನ್ನಮ್ಮ ಆನಂದಳ್ಳಿ, ಗಂಗಯ್ಯ ಚಿಕ್ಕಮಠ, ಶೇಖರ ಈಳಗೇರ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 