ಕಾರಿಗನೂರು ಗ್ರಾಮದಲ್ಲಿ ಗೌರಿ ದೇವಿಯ ಜಾತ್ರಾ ಮಹೋತ್ಸವ
Gauri Devi's fair celebrated in Kariganur village
ಹೊಸಪೇಟೆ 07: ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು ಕಾರಿಗನೂರು ಗ್ರಾಮದ 23ನೇ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಶ್ರೀ ಗೌರಿ ಸುಂಕಲಮ್ಮ ದೇವಿ ಸೇವಾ ಟ್ರಸ್ಟ್ ಉತ್ಸವ ಸಮಿತಿಯಿಂದ 47 ನೇ ವರ್ಷದ ಶ್ರೀ ಗೌರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ಗೌರಿ ದೇವಿಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಈ ಒಂದು ರಥೋತ್ಸವಕ್ಕೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್. ಎನ್ ಮಹಮ್ಮದ್ ಇಮಾಮ್ ನಿಯಾಜಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ನಾಡಿನ ಸಮಸ್ತ ಜನತೆಗೆ ಗೌರಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ಆ ಭಗವಂತನ ದಯೆಯಿಂದ ಸಮಸ್ತ ನಾಡಿನ ಜನತೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಮ್ಮದಿ, ಪ್ರೀತಿ, ಪ್ರೇಮ, ವಾತ್ಸಲ್ಯ, ಅನುರಾಗ, ಸಹಾನುಭೂತಿ, ಸೌಹಾರ್ಧತೆ, ತುಂಬಿ ತುಳುಕುವಂತಾಗಲಿ ಹಾಗೂ ಸಕಾಲಕ್ಕೆ ಉತ್ತಮ ಮಳೆ ಬೆಳೆಯಾಗಿ ಒಳ್ಳೆಯ ಫಸಲು ನೀಡಲಿ ಮನೆ ತುಂಬೆಲ್ಲ ದವಸ ಧಾನ್ಯ ತುಂಬಲಿ ರೈತರು ಸದಾ ಹಸನ್ಮುಖಿಯಾಗಿರಲಿ ಎಂದು ಪ್ರಾರ್ಥಿಸಿದರು.
ಭಾರತದ ಸಂಸ್ಕೃತಿ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ಪ್ರತಿಯೊಬ್ಬರು ಗೌರವ ಕೊಡುವ ಉದ್ದೇಶದಿಂದ ಹಲವಾರು ಆಚರಣೆಗಳನ್ನು ನೆಡೆಸಿಕೊಂಡು ಬಂದಿರುತ್ತೇವೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳನ್ನು ಸಿಂಗಾರ ಮಾಡುವ ಮೂಲಕ ಸಂಭ್ರಮ ಸಡಗರದ ವಾತಾವರಣವನ್ನು ನಿರ್ಮಿಸಿ, ಹಬ್ಬದ ಆಚಾರ ವಿಚಾರಗಳು ಮುಂದಿನ ತಲೆಮಾರಿಗೆ ಹೊತ್ತು ಸಾಗುವ ಗೌರಿ ಹಬ್ಬ ಅಥವಾ ಗೌರಿ ಹುಣ್ಣಿಮೆಯ ವಿಶೇಷ.
ಅದೇ ರೀತಿಯಲ್ಲಿ ಇಂದು ಹೊಸಪೇಟೆ ತಾಲೂಕು ಕಾರಿಗನೂರು 23ನೇ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಗೌರಿ ಹುಣ್ಣಿಮೆ ಬಂತೆಂದರೆ ಸಾಕು ಹೆಣ್ಣು ಮಕ್ಕಳಲ್ಲಿ ಸಂಭ್ರಮ- ಸಡಗರ ಗರಿಗೆದರುತ್ತದೆ. ಹೆಣ್ಣು ಮಕ್ಕಳು ವಾರಪೂರ್ಣ ಹೊಸ ಸೀರೆ, ಉಡುಪು ಧರಿಸಿ ಸಂತಸದಿಂದ ನಲಿದಾಡುವ ಗೌರಿ ಹುಣ್ಣಿಮೆ ಆಚರಣೆಯ ಸಂಭ್ರಮೋತ್ಸಾಹ ಕಣ್ತುಂಬಿಕೊಳ್ಳುವುದೇ ಚೆಂದ ಎಂದರು. ಈ ನಿಟ್ಟಿನಲ್ಲಿ ಊರಿನ ಸುಂಕ್ಲಮ್ಮ ದೇವಸ್ಥಾನದಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗಲು ಓಡಾಡುವ ಹೆಣ್ಣು ಮಕ್ಕಳ ಸಂಭ್ರಮ ಹೇಳತೀರದ್ದು. ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪ ಹಚ್ಚಿಕೊಂಡು ಗೌರಮ್ಮನ ವಿಗ್ರಹಕ್ಕೆ ಆರತಿ ಎತ್ತಿ ಆ ಬಳಿಕ ಕುಟುಂಬದ ಸದಸ್ಯರಿಗೆ, ನೆರೆ ಹೊರೆಯವರಿಗೆ, ಸಂಬಂಧಿಕರಿಗೆ ಆರತಿ ಬೆಳಗುವ ಸಂಪ್ರದಾಯ ಕಾಣಬಹುದಾಗಿದೆ.
ಹಾಗು ಈ ಒಂದು ರಥೋತ್ಸವ ಅತ್ಯಂತ ಯಶಸ್ವಿಯಾಗಲು ಸಹಕಾರ ನೀಡಿದ ಎಲ್ಲಾ ಪೋಲೀಸ್ ಅಧಿಕಾರಿಗಳಿಗೂ ಹಾಗು ಮಾಧ್ಯಮ ಮಿತ್ರರಿಗೂ ಧನ್ಯವಾದಗಳನ್ನು ತಿಳಿಸಿದರು.
ಈ ಒಂದು ಜಾತ್ರಾ ಮಹೋತ್ಸವದಲ್ಲಿ ಊರಿನ ಎಲ್ಲಾ ಯುವಕ, ಯುವತಿಯರು ಡಿ.ಜೆ ಹಾಡುಗಳಿಗೆ ಸಂತಸದಿಂದ ನೃತ್ಯ ಮಾಡಿದರು.
ಈ ಒಂದು ಜಾತ್ರಾ ಮಹೋತ್ಸವದಲ್ಲಿ ಕಾರಿಗನೂರು ಭಾಗದ ನಗರಸಭಾ ಸದಸ್ಯರಾದ ನಾಗೇಂದ್ರ ಎಸ್ ಎರಿಸ್ವಾಮಿ, ವಡ್ಡಟ್ಟಿ ಸುಂಕಪ್ಪ ಹುಲುಗಪ್ಪ, ರಾಮಣ್ಣ, ಭರತ್, ನಾಗರಾಜ, ಪ್ರವೀಣ, ಹನುಮಂತ, ಆಂಜನೇಯ, ಮೇಸ್ತ್ರಿ ರಾಮಾಂಜನಿ, ಹುಲುಗಪ್ಪ, ಗಿಡ್ಡ ಬಸವ, ತಿಮ್ಮಣ್ಣ, ಎನ್ ಆರ್ ಟಿ ಸುಂಕಣ್ಣ, ಸಣದಣ ಓಬಳೇಶ್, ನೆಲ್ಲಕ್ಕೆ ಹನುಮಂತ, ಗೋವಿಂದ, ಹೊನ್ನುರ ಸ್ವಾಮಿ, ಮೂರ್ತಿ ನಾಗರಾಜ್, ಹುಲುಗಪ್ಪ, ಪ್ರಕಾಶ್ , ಬೋದ ಯರಿಸ್ವಾಮಿ, ಮಲ್ಲಿಕಾರ್ಜುನ, ಎ. ಎನ್ ಎಸ್ ಹನುಮಂತ, ಬಾಲೆಸಾಬ್, ಸಾಯಿಬಣ್ಣ, ಬಾಷ, ಖಾಸಿಂ, ಮಾಬು ಫಕ್ರುದ್ದೀನ್, ಹಾಗೂ ಗ್ರಾಮದ ಸಾವಿರಾರು ಜನರು ಹಿರಿಯ ಮುಖಂಡರು, ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 