ಗರುಡಕಂಬ ಗುಡ್ಡೇಕಲ್ಲು ಮತ್ತು ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಗರುಡಕಂಬ ಗುಡ್ಡೇಕಲ್ಲು ಮತ್ತು ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ  Garudakamba Guddekallu and Utsava idol installation

ಲೋಕದರ್ಶನ ವರದಿ

ಕಂಪ್ಲಿ 01:  ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗೋಡ್‌ಹಾಳ್ ಗ್ರಾಮದಲ್ಲಿ ಆರಾಧ್ಯ ದೈವರಾದ ಶ್ರೀ ಆಂಜನೇಯ ಸ್ವಾಮಿಯ ನೂತನ ಗರುಡಕಂಬ ಹಾಗೂ ನೂತನ ಗುಡ್ಡೇಕಲ್ಲು ಮತ್ತು ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಹೆಬ್ಬಾಳ್ ಬೃಹನ್ ಮಠ ಸುಕ್ಷೇತ್ರ ಪರಮಪೂಜ್ಯ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಪ್ಲಿ ಸುನೀತಮ್ಮ ಅನಂತಸೇಹನಗುಡಿ ಅವರ ದೇಣಿಗೆಯೊಂದಿಗೆ ನಿರ್ಮಿಸಲಾದ ಗರುಡಕಂಬ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಕಾರ್ಯಕ್ರಮದ ನಿಮಿತ್ತವಾಗಿ ಗ್ರಾಮದ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪ್ರಧಾನ ಕಳಸ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನದಲ್ಲಿ ಜರಗಿದವು.

ಒಂದುದಿನ ಮುಂಚಿತವಾಗಿ ಗ್ರಾಮದಲ್ಲಿ ತುಂಗಭದ್ರ ನದಿಯಿಂದ ಆರಂಭಗೊಂಡ ಉತ್ಸವ ಮೂರ್ತಿ ಮೆರವಣಿಗೆ ಕಳಸ, ಕುಂಭದೊಂದಿಗೆ ಸಕಲ ವಾದ್ಯಗಳಿಂದ ವಿಜೃಂಭಣೆಯಿಂದ ಜರುಗಿತು. ತದನಂತರ ಆಂಜನೇಯಸ್ವಾಮಿ, ಗರುಡಕಂಬ, ಗುಡ್ಡೇಕಲ್ಲಿಗೆ ರುದ್ರಾಭಿಷೇಕ, ಸಂಜೆ ಕಳಸ ಪೂಜೆ, ನವಗ್ರಹ, ಅಷ್ಟಪೂಜೆ, ಅಷ್ಟಲಕ್ಷ್ಮಿ, ಅಷ್ಟಾಸ್ಟಿಕ್ ಅಲಂಕರು, ಪಂಚಕಾಲದ ಸ್ವಸ್ತಿಪುಣ್ಯ, ದ್ವಾದಶ ರುದ್ರ, ಮೃತ್ಯುಂಜಯ, ಉಮಾಮಹೇಶ್ವರ, ಗಣಪತಿ ಪೂಜೆ ಸೇರಿ ಮುಂತಾದವು ಶ್ರದ್ದೆಯಿಂದ ನಡೆದವು. ಈ ಸಂದರ್ಭದಲ್ಲಿ ಬೆಳಗೋಡಹಾಳ್ ಗ್ರಾಮದ ಗುರುಹಿರಿಯರು, ಮುಖಂಡರು ಸೇರಿದಂತೆ ಸಕಲ ಸದ್ಭಕ್ತರು ಹಾಗೂ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.