ಗಣಪತಿ ಹಬ್ಬ: ಶಾಂತಿ ಸಭೆ
Ganpati Festival: Peace Meeting
ಗಣಪತಿ ಹಬ್ಬ: ಶಾಂತಿ ಸಭೆ
ಯಮಕನಮರಡಿ 08: ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಗಣಪತಿ ಉತ್ಸವ ಮಂಡಳಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮಗಳ ಮುಖಂಡರ ಸಭೆಯನ್ನು ದಿ. 8ರಂದು ಪೊಲೀಸ್ ಠಾಣೆ ಸಭಾಭವನದಲ್ಲಿ ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಠಾಣೆಯ ಸಿಪಿಐ ಜಾವೇದ್ ಮುಸಾಪುರಿ ಅವರು ವಹಿಸಿ ಮಾತನಾಡುತ್ತಾ ಎಲ್ಲ ಉತ್ಸವ ಮಂಡಳಿಯವರು ಮಂಟಪಗಳಲ್ಲಿ ಅಪಾಯಕಾರಿ ಧ್ವನಿವರ್ಧಕ ಬಳಸತಕ್ಕದ್ದಲ್ಲ ಅಲ್ಲದೆ ಮಂಟಪಗಳಲ್ಲಿ ಜೂಜಾಟ ನಡೆದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಣಪತಿ ಮಂಟಪಗಳಲ್ಲಿ ಕೇವಲ ಭಕ್ತಿ ಗೀತೆಗಳು ಶಾಂತಿಯುತವಾಗಿ ಬಳಸುತ್ತಿರಬೇಕು. ಮಧ್ಯಪಾನ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಗಣಪತಿ ಮೂರ್ತಿಗಳನ್ನು ಶಾಂತಿ ಸೌಹಾರ್ದತೆ ಇಂದ ಮೆರವಣಿಗೆ ಮುಖಾಂತರ ತರಬೇಕು ಮತ್ತು ಸಿಡಿ ಮದ್ದುಗಳನ್ನು ಯಾವುದೇ ತರದ ತಕರಾರು ಹೊಗೆ ಬರದಂತೆ ಬಳಸಬೇಕು ಅಲ್ಲದೇ ಪ್ರತಿನಿತ್ಯ ಸಂಪ್ರದಾಯ ಪ್ರಕಾರ ಪೂಜೆ ಪುರಸ್ಕಾರಗಳನ್ನು ನಡೆಸಬೇಕು. ಡಾಲ್ಬಿಗಳಿಗೆ ಅವಕಾಶವಿರುವುದಿಲ್ಲ. ವಿಸರ್ಜನೆ ವೇಳೆಗೆ ಸಮಯಕ್ಕೆ ಅನುಗುಣವಾಗಿ ಸೂರ್ಯನು ಮುಳುಗುವ ವೇಳೆಗೆ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಉತ್ತಮ ಮಂಡಲಗಳಿಗೆ ನಮ್ಮ ಪೊಲೀಸ್ ಠಾಣೆಯ ವತಿಯಿಂದ ಸೂಕ್ತ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಜಾವಿದ್ ಮುಸಾಪೋರಿಯವರು ಹೇಳಿದರು.
ಸಭೆಯಲ್ಲಿ ಪಿಎಸ್‌ಐ ಶಿವಾನಂದ ಮನ್ನಿಕೇರಿ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು. ಕಳೆದ ವರ್ಷವೂ ಸಹಿತ ಉತ್ತಮ ಉತ್ಸವ ಮಂಡಳಿಗಳಿಗೆ ಸೂಕ್ತ ಬಹುಮಾನ ನೀಡಲಾಗಿತ್ತು. ಈ ಸಲವು ಸಹಿತ ಸೂಕ್ತ ಬಹುಮಾನ ನೀಡುವುದಾಗಿ ಸಭೆಯಲ್ಲಿ ಜಾಹೀರಾಪಡಿಸಲಾಗಿದೆ. ಇದರಿಂದಾಗಿ ಮಂಡಲಗಳ ಎಲ್ಲ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಶಾಂತಿಯುತವಾಗಿ ನಾವು ಗಣಪತಿ ಹಬ್ಬವನ್ನು ಆಚರಿಸುತ್ತೇವೆ ಎಂದು ಭರವಸೆ ನೀಡಿದರು. ಅಲ್ಲದೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ನೋಟ್ಬುಕ್ಕು ಇತ್ಯಾದಿ ಬರವಣಿಗೆಗಳ ವಸ್ತುಗಳನ್ನು ನೀಡಲಾಗುವುದು ಎಂದು ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 