ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಾಂಸ್ಕೃತಿಕ ಏರಿಕೆಯನ್ನು ತೋರಿಸುತ್ತದೆ
Gangavathi Pranesh at B.K. Model High School Centenary Celebration
ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವದಲ್ಲಿ ಗಂಗಾವತಿ ಪ್ರಾಣೇಶ
ಬೆಳಗಾವಿ 22: ಒಂದು ಶಾಲೆ ನೂರು ವರ್ಷ ನಡೆದುಕೊಂಡು ಬಂದಿದೆಯೆಂದರೆ ಅಲ್ಲಿಯ ಶೈಕ್ಷಣಿಕ ಮಟ್ಟ ಎಷ್ಟು ಎತ್ತರಕ್ಕೆ ಬೆಳೆದಿದೆ, ಸಾಂಸ್ಕೃತಿಕ ಬೆಳವಣಿಗೆಯನ್ನು ತೋರಿಸುತ್ತದೆ ಇದೊಂದು ಸಂತೋಷ, ಸಂಭ್ರಮ, ಅಭಿಮಾನ ಪಡುವಂತಹ ವಿಷಯ. ಆದರೆ ಪೋಲಿಸ ಸ್ಟೇಷನ್. ಜೈಲು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರೆ ಅಲ್ಲಿ ಕೊಲೆ, ಸುಲಿಗೆ ದರೋಢೆಗಳು ಹೆಚ್ಚುತ್ತಿವೆ ಎಂಬುದನ್ನು ಹೇಳುತ್ತದೆ ಇದು ತುಂಬ ದುಃಖದ ವಿಷಯ ಎಂದು ಅಂತರರಾಷ್ಟ್ರೀಯ ಮಟ್ಟದ ಹಾಸ್ಯ ಭಾಷನಕಾರ ಗಂಗಾವತಿ ಪ್ರಾಣೇಶ ಇಂದಿಲ್ಲಿ ಹೇಳಿದರು.
ಬೆಳಗಾವಿ ಎಜುಕೇಶನ್ ಸೊಸೈಟಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಮಾರಂಭದ ನಿಮಿತ್ತ ವೈವಿದ್ಯಮಯ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಹೈಸ್ಕೂಲ ಮೈದಾನದಲ್ಲಿ ಹಮ್ಮಿಕೊಂಡಿದ್ದರು. ದಿನಾಂಕ 19 ಶುಕ್ರವಾರದಂದು ಅಂತರರಾಷ್ಟ್ರೀಯ ಖ್ಯಾತಿಯ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಅಲ್ಲದೇ ಬಸವರಾಜ ಮಹಾಮನಿ ಇವರಿಂದ ಹಾಸ್ಯ ಕಾರ‌್ಯಕ್ರಮವಿತ್ತು ಪ್ರಮುಖ ಭಾಷಣಕಾರರಾದ ಬಿ. ಪ್ರಾಣೇಶ ಅವರು ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಪ್ರಾಣೇಶ ಅವರು ಬೆಳಗಾವಿ ಎಜುಕೇಶನ್ ಸೊಸೈಟಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಶಿಕ್ಷಣ ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಒಂದು ಅಪರೂಪದ ಕಾರ‌್ಯಕ್ರಮಕ್ಕೆ ನಾನು ಅತಿಥಿಯಾಗಿ ಆಗಮಿಸಿರುವುದು ನನಗೆ ತುಂಬ ಖುಷಿಯನ್ನುಂಟು ಮಾಡಿದೆ ಎಂದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಕಾರ‌್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಸ್ಯ ಚಟಾಕೆಗಳಿಂದ ಜನರನ್ನು ರಂಜಿಸಿದರು.
ನಗೆಮಾತುಗಾರ ಬಸವರಾಜ ಮಹಾಮನಿ ಮಾತನಾಡುತ್ತ ಕನ್ನಡ ಭಾಷೆಯನ್ನೇ ಉತ್ತರ ಕರ್ನಾಟಕ, ಬೆಂಗಳೂರು, ಉಡುಪಿ, ಮಂಗಳೂರು ಜನರು ಮಾತನಾಡುತ್ತಿದ್ದು ಅವಗಳನ್ನು ಆಸ್ವಾದಿಸಬೇಕು. ಅವುಗಳಲ್ಲಿಯ ಹಾಸ್ಯವನ್ನು ಕಂಡುಕೊಂಡು ಬೇರೆಯವರಿಂದಿಗೆ ಹಂಚಿಕೊಳ್ಳಬೇಕು. ಹಾಸ್ಯಕ್ಕೆ ಬೇರೆಯವರನ್ನು ಕೂಡಿಸುವ ಶಕ್ತಿಯಿದೆ ಎಂದು ಹೇಳಿದರು.
ಲೇಖಕ ಪತ್ರಕರ್ತ ಗುಂಡೇನಟ್ಟಿ ಮಧುಕರ ಮಾತನಾಡುತ್ತ ನಾನು ಇದೇ ಶಾಲೆಯ ವಿದ್ಯಾರ್ಥಿ ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ಶಾಲೆಯ ಸುಮರ್ಣ ಮಹೋತ್ಸವ ಆಚರಿಸಲಾಗಿತ್ತು. ವಜ್ರಮಹೋತ್ಸವ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶರಿಂದ ನನ್ನ ರಚನೆಯ ‘ಸಂದರ್ಶನ’ ಎಂಬ ಕೃತಿಯೊಂದು ಬಿಡುಗಡೆಗೊಂಡಿತು. ಶತಮಾನೋತ್ಸವದಲ್ಲಿ ಮತ್ತೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವ ನಾನೇ ಭಾಗ್ಯವಂತ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ಪೋತದಾರ ಕಾರ‌್ಯಕ್ರಮ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. .ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿಯವರು ಸಂಸ್ಥೆಯು ನಡೆದ ಬಂದಿರುವ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. . ಅರವಿಂದ ಹುನಗುಂದ ಕಾರ್ಯಕ್ರಮ ನಿರೂಪಿಸಿದರು. ಸುಧೀರ ಕುಲಕರ್ಣಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 