ಸಂಭ್ರಮದಿಂದ ಗಂಗಾಪರಮೇಶ್ವರಿ ಜಯಂತಿ ಆಚರಣೆ
Gangaparameshwari Jayanti celebrated with enthusiasm
ಕಂಪ್ಲಿ:ಜೂ.20: ಪಟ್ಟಣದ ಗಂಗಾಮತ ಸಮಾಜದ ಸಮುದಾಯ ಭವನದಲ್ಲಿ ಗಂಗಾಪರಮೇಶ್ವರಿ ಜಯಂತ್ಯೋತ್ಸವ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಲಾಯಿತು.
ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಎಲಿಗರ್ ನಾಗರಾಜ್ ಮಾತನಾಡಿ, ಗಂಗಾಮತ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಸಮಾಜವಾಗಿದೆ. ಗಂಗಾಮತ ಸಮಾಜದ ಅಭಿವೃದ್ಧಿಯ ದೃಷ್ಠಿಯಿಂದ ಎಸ್ಟಿ ಮೀಸಲಾತಿ ಅವಶ್ಯಕವಾಗಿದೆ. ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಾಗೃತಿವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ್, ಅಯ್ಯೋದಿ ವೆಂಕಟೇಶ್, ಧನರಾಜ್, ಯಲ್ಲಪ್ಪ, ಆಟೋ ರಾಘವೇಂದ್ರ, ವಿರುಪಣ್ಣ, ಜೋಳಮರೋ ಈರ್ಪ, ಎಲಿಗರ್ ವೀರಭದ್ರ್ಪ, ಮಹೇಶ, ಗಂಗಣ್ಣ, ರಾಮಸಾಗರ ದುರುಗಪ್ಪ, ಅಯ್ಯೋದಿ ರಮೇಶ್, ಎಲ್.ಗುರುರಾಜ, ಬಸವರಾಜ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 