ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌ನಿಂದ ಹುಟ್ಟು ಹಬ್ಬದ ನಿಮಿತ್ಯ ಪ್ರಶಸ್ತಿ ಪ್ರದಾನ

ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌ನಿಂದ ಹುಟ್ಟು ಹಬ್ಬದ ನಿಮಿತ್ಯ ಪ್ರಶಸ್ತಿ ಪ್ರದಾನ  Gangamma Bommai Trust presents birthday award

           ಶಿಗ್ಗಾವಿ : ಮಾತೋಶ್ರೀ ಗಂಗಮ್ಮ ಎಸ್‌.ಬೊಮ್ಮಾಯಿ ಅವರ 92ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌ ವತಿಯಿಂದ ಜ.26 ರಂದು ಪಟ್ಟಣದ ಬಸವರಾಜ ಬೊಮ್ಮಾಯಿ ಅವರ ಸ್ವಗೃಹ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. 

           ಪಟ್ಟಣದ ಹೊರವಲಯದಲ್ಲಿರುವ ಬಸವರಾಜ ಬೊಮ್ಮಾಯಿಯವರ ನಿವಾಸದಲ್ಲಿ ನಡೆದ ಶ್ರೀಮತಿ ಗಂಗಮ್ಮ ಎಸ್‌. ಬೊಮ್ಮಾಯಿರವರ 92ನೇ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ, ಸಂಘ ಸಂಸ್ಥೆಗಳಿಗೆ ಕೊಡ ಮಾಡುವ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐವರಿಗೆ ನಗದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಶಿಗ್ಗಾವಿ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ನೀಡಿ ಗೌರವಿಸುವ ಸಂಪ್ರದಾಯ ಟ್ರಸ್ಟ್‌ ಮಾಡುತ್ತಿದೆ ಎಂದರು. ಸಮಾಜ ಮತ್ತು ಸಂಸ್ಕೃತಿ ಜತೆ ಮಾನವೀಯ ಸಂಬಂಧ, ಆದರ್ಶ ಸಂಬಂಧಗಳ ಪುನರ್ ಸ್ಥಾಪನೆ ಮಾಡಲು ನಾವು ಪದೇ, ಪದೆ ತಾಯಿ ಬಗ್ಗೆ ಮಾತ ನಾಡುತ್ತೇವೆ.

          ಅಂದು ಆರೋಗ್ಯ ಶಿಬಿರವನ್ನು ಏರಿ​‍್ಡ ಸುವ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯದಲ್ಲಿ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳನ್ನು ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.  ಮಾಜಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ಶೋಭಾ ನಿಸ್ಸಿಮಗೌಡ್ರ, ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗಿಮಠ, ಬಿಜೆಪಿ ಅಧ್ಯಕ್ಷರಾದ ಶಿವಪುತ್ರ​‍್ಪ ಕಲಕೋಟಿ, ವಿಶ್ವನಾಥ ಹರವಿ, ದೇವಣ್ಣ ಚಾಕಲಬ್ಬಿ, ಶಿವಾನಂದ ಸೊಬರದ, ಡಾ.ಮಲ್ಲೇಶಪ್ಪ ಹರಿಜನ, ಶಂಕರಗೌಡ್ರ ಪೊಲೀಸ್ ಗೌಡ್ರ, ಎಂ.ಎನ್‌.ಹೊನಕೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ರೇಣುಕನಗೌಡ ಪಾಟೀಲ ಸ್ವಾಗತಿಸಿದರು. ಸಚಿನ ಮಡಿವಾಳರ ನಿರೂಪಿಸಿದರು.