ರಾಣೆಬೆನ್ನೂರಲ್ಲಿ ಸುಸಂಪನ್ನಗೊಂಡ ಗಂಗಾಜಲ ಮತ್ತು ತುಂಗಾಜಲ ಜಾತ್ರೆಗಳು
Gangajal and Tungajal fairs held in Ranebennur
ರಾಣಿಬೆನ್ನೂರು :14 ಇಲ್ಲಿನ ಮಾರುತಿ ನಗರದ, ಇತಿಹಾಸ ಪ್ರಸಿದ್ಧ ಬೆಂಚಿ ಮರಡಿ ತುಂಗಾಜಲ ಚೌಡೇಶ್ವರಿ ದೇವಿ ಹಾಗೂ ತುಂಗಾಜಲ ಚೌಡೇಶ್ವರಿ ವಾರ್ಷಿಕ ಜಾತ್ರೋತ್ಸವ, ಉದ್ಘಾಟನಾ ಸಮಾರಂಭಕ್ಕೆ ಪತ್ನಿ ಸಮೇತ ಆಗಮಿಸಿ ಪೂಜೆ ಸಲ್ಲಿಸಿ ಮಹಾ ಜಾತ್ರೋತ್ಸವಕ್ಕೆ, ಸಾವಿರಾರು ಪುರ ಜನರೊಂದಿಗೆ ಚಾಲನೆ ನೀಡಿದ, ಶಾಸಕ ಪ್ರಕಾಶ್ ಕೋಳಿವಾಡ ಮತ್ತು ಪತ್ನಿ ಶ್ರೀಮತಿ ಪೂರ್ಣಿಮಾ ಕೋಳಿವಾಡ ಅವರನ್ನು, ಸಾರ್ವಜನಿಕವಾಗಿ ಚೌಡೇಶ್ವರಿ ದೇವಸ್ಥಾನಗಳ ಎರಡು ಸಮಿತಿಯ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ದೇವಸ್ಥಾನಗಳ, ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪ್ರಕಾಶ್ ಕೋಳಿವಾಡ ಅವರು ಮಾನವನ ವಿಕಾಸತೆ, ಬೌದ್ಧಿಕ ಬೆಳವಣಿಗೆ ಮತ್ತು ಶಾಂತಿ ನೆಮ್ಮದಿಗೆ ದೇವರು ಮತ್ತು ಧರ್ಮದ ಆರಾಧನೆ ಅಗತ್ಯವಿದ್ದು, ನಮ್ಮ ಪೂರ್ವಜರು ತಮ್ಮ ದೂರದೃಷ್ಟಿಯ ಚಿಂತನೆಯಿಂದಾಗಿ ಜಾತ್ರೆ, ಉತ್ಸವ, ಹಬ್ಬ, ಹರಿದಿನಗಳು ಆಚರಿಸುವುದರ ಮೂಲಕ, ಮಾನವ ಕಲ್ಯಾಣಕ್ಕೆ ಮುಂದಾಗಿ ಪರಂಪರೆಯಿಂದಲೂ ಭಾವೈಕ್ಯತೆ ಮೆರೆದಿದ್ದಾರೆ. ಇಂದಿನ ಆಧುನಿಕ ಸಮಾಜದಲ್ಲಿ ಪ್ರತಿಯೊಬ್ಬ ಮಾನವ ಜೀವಿಗೂ ಶಾಂತಿ ಮತ್ತು ನೆಮ್ಮದಿ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಾಣಿಜ್ಯ ನಗರದಲ್ಲಿರುವ ಐತಿಹಾಸಿಕ ಪರಂಪರೆ ಇರುವ, ಎರಡು ದೇವಾಲಯಗಳು ಗಂಗಾಜಲ ಚೌಡೇಶ್ವರಿ ದೇವಿ, ಹಾಗೂ ತುಂಗಾಜಲ ಚೌಡೇಶ್ವರಿ ದೇವಿಯರೂ, ನಮ್ಮೆಲ್ಲರ ಹಾಗೂ ಭಕ್ತ ಸಮುದಾಯದ ಭಾವೈಕ್ಯತೆಯ ಕೇಂದ್ರ ಸ್ಥಾನಗಳಾಗಿ ಕಂಗೊಳಿಸುತ್ತಿರುವುದು ನಮ್ಮೂರಿನ ಮತ್ತು ತಾಲೂಕಿನ ಹಾಗೂ ಜಿಲ್ಲೆಯ ಹೆಮ್ಮೆ ಎಂದರು.
ನಮ್ಮೂರ ನಡೆಯುತ್ತಿರುವ ವಿವಿಧ ಜಾತ್ರೆಗಳಿಗೆ ನಾಡಿನಾದ್ಯಂತ ಭಕ್ತರು, ಜನಸಾಗರದಲ್ಲಿ ಹರಿದು ಬರುತ್ತಿರುವುದು ನಮ್ಮೂರಿನ ಹೆಮ್ಮೆ. ರಾಣೆಬೆನ್ನೂರಿನಲ್ಲಿ ಮತ್ತು ತಾಲೂಕಿನಲ್ಲಿ ನಡೆಯುವ ಎಲ್ಲ ದೇವತೆಗಳ ಜಾತ್ರೆಗಳನ್ನು ಅತ್ಯಂತ ಶಾಂತಿ ಮತ್ತು ನೆಮ್ಮದಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸುವುದರ ಮೂಲಕ ವಾಣಿಜ್ಯ ನಗರದ ತಾಲೂಕಿನ ಹೆಸರನ್ನು ಮತ್ತಷ್ಟು ವಿಜ್ರಂಭಿಸುವಂತೆ ಮಾಡಲು ಮುಂದಾಗಬೇಕು ಎಂದು ಭಕ್ತ ಸಮುದಾಯಕ್ಕೆ ಪ್ರಕಾಶ್ ಕೋಳಿವಾಡ ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶೇಕಪ್ಪ ಹೊಸಗೌಡ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಮಾಜಿ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಸದಸ್ಯ ಬಸವರಾಜ ಹುಚ್ಚಗೊಂಡರ, ದುರ್ಗಪ್ಪ ಹುಲಗಮ್ಮನವರ, ಸೇರಿದಂತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು ಸಾರ್ವಜನಿಕ ಭಕ್ತರು ಪಾಲ್ಗೊಂಡಿದ್ದರು. ಸಂಪನ್ನಗೊಂಡ ಜಾತ್ರೆಗಳು: ಕಳೆದ ವಾರ ನಗರದಲ್ಲಿ ಏಕಕಾಲಕ್ಕೆ ಆರಂಭಗೊಂಡ ನಾಡಿನ ಭಾವೈಕ್ಯತೆಯ ಧಾರ್ಮಿಕ ಕ್ಷೇತ್ರಗಳಂದೇ ಪ್ರಸಿದ್ಧಿ ಪಡೆದಿರುವ ಗಂಗಾಜಲ ಚೌಡೇಶ್ವರಿ ಹಾಗೂ ತುಂಗಾಜಲ ಚೌಡೇಶ್ವರಿ ದೇವಿಯ ಜಾತ್ರೋತ್ಸವವು ವಾರಗಳ ಕಾಲ ಅದ್ದೂರಿಯಾಗಿ ನೆರವೇರಿ, ಲಕ್ಷಾಂತರ ಭಕ್ತರಿಗೆ ತನ್ನದರ್ಶನಾಶೀರ್ವಾದ ನೀಡಿದ, ದೇವತೆಗಳ ಎರಡು ಜಾತ್ರೆಗಳು ಶನಿವಾರ ಸಂಜೆ, ತಮ್ಮ ಮೂಲ ಸ್ಥಳಗಳಿಗೆ ತೆರಳುವುದರ ಮೂಲಕ, ಭಕ್ತಾದಿಗಳ ಜಯ ಘೋಷಗಳ ಮಧ್ಯ ಸುಸಂಪನ್ನಗೊಂಡವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 