ಗ್ಯಾಂಗ ರೇಪ: 11 ಯುವಕರ ಬಂಧನ


ಲೋಹರ್ದಾಗಾ, ಆ.20-ಇಬ್ಬರು ಅಪ್ರಾಪ್ತೆಯರ ಮೇಲೆ 11 ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ನ ಲೋಹರ್ದಾಗಾದಲ್ಲಿ ನಡೆದಿದೆ. ಈ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.

ಸ್ಕೂಟರ್ನಲ್ಲಿ ಈ ಬಾಲಕಿಯರು ಲೋಹರ್ದಾಗಾದ ಪ್ರದೇಶವೊಂದಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟು ನಿಂತಿತು. ಆಗ ಒಬ್ಬಾಕೆ ತನ್ನ ಸ್ನೇಹಿತನಿಗೆ ಫೋನ್ ಮಾಡಿ ಸಹಾಯಕ್ಕೆ ಧಾವಿಸುವಂತೆ ಕೋರಿದಳು. ಆದರೆ ಈತ ಸಹಾಯಕ್ಕೆ ಬರುವ ಬದಲು ತನ್ನ 11 ಸ್ನೇಹಿತರನ್ನು ಅಲ್ಲಿಗೆ ಕಳುಹಿಸಿದ.

ಇದೇ ಸಂದರ್ಭದಲ್ಲಿ ಗ್ರಾಮಸ್ಥನೊಬ್ಬ ಬಾಲಕಿಯರಿಗೆ ನೆರವು ನೀಡುತ್ತಿದ್ದ. ಆಗ ಅಲ್ಲಿಗೆ ಬಂದ 18 ರಿಂದ 28 ವರ್ಷ ವಯೋಮಾನದ ಹುಡುಗರು ಗ್ರಾಮಸ್ಥನನ್ನು ಥಳಿಸಿ ಅಲ್ಲಿಂದ ಕಳಿಸಿದರು. ನಂತರ ಇಬ್ಬರು ಅಪ್ರಾಪ್ತೆಯರನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಅವರ ಬಳಿ ಇದ್ದ ಮೊಬೈಲ್ಗಳು ಮತ್ತಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಆಶಿಶ್ ಕುಮಾರ್ ತಿಳಿಸಿದ್ದಾರೆ.  

ಈ ಸಂಬಂಧ ಬಾಲಕಿಯರು ನೀಡಿದ ದೂರನ್ನಾಧರಿಸಿ ಎಲ್ಲ 11 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸದರ್ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.