ಗಣೇಶ ಹಬ್ಬಕ್ಕೆ ಭಕ್ತರ ಪ್ರತಿಷ್ಠಾಪಿಸುವ ಮೂಲಕ ಚಾಲನೆ

ಗಣೇಶ ಹಬ್ಬಕ್ಕೆ ಭಕ್ತರ ಪ್ರತಿಷ್ಠಾಪಿಸುವ ಮೂಲಕ ಚಾಲನೆ  Ganesh festival kicks off with installation of devotees

ಗಣೇಶ ಹಬ್ಬಕ್ಕೆ ಭಕ್ತರ ಪ್ರತಿಷ್ಠಾಪಿಸುವ ಮೂಲಕ ಚಾಲನೆ  

ಚಿಕ್ಕೋಡಿ: ಪ್ರಥಮ ಪೂಜಿತ, ವಿಘ್ನ ನಿವಾರಕ ಗಣೇಶನನ್ನು ಚಿಕ್ಕೋಡಿ ನಗರ ಹಾಗೂ ಗಡಿ ಭಾಗದಲ್ಲಿ ಭಕ್ತರು ಸಂಭ್ರಮ, ಸಡಗರ, ಭಯ, ಭಕ್ತಿಭಾವದಿಂದ ಬುಧವಾರ ಬರಮಾಡಿಕೊಂಡರು. ಗಣಪನ ಸ್ವಾಗತಕ್ಕೆ ಮನೆಗಳಲ್ಲಿ ವಾರದಿಂದ ಸಿದ್ಧತೆ ಮಾಡಿಕೊಂಡಿದ್ದ ಜನರು ಮೊದಲೇ ಗೊತ್ತುಪಡಿಸಿದ್ದ ಗಣೇಶನನ್ನು ಬುಧವಾರ ಬೆಳಗ್ಗೆ ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು  ಗಣಪನನ್ನು ತಲೆ ಮೇಲೆ, ದ್ವಿಚಕ್ರ ವಾಹನ, ಟೆಂಪೋ, ರಿಕ್ಷಾ, ಕಾರುಗಳಲ್ಲಿ ಹೊತ್ತು ಭಕ್ತರು ತಮ್ಮ ತಮ್ಮ ಮನೆಗಳಿಗೆ ಕರೆದು ತರುವ ಕಾರ್ಯ ಬೆಳಿಗ್ಗೆಯಿಂದ ಆರಂಭವಾಗಿತ್ತು. ಮಕ್ಕಳು, ಯುವಕ, ಯುವತಿಯರು, ಮಹಿಳೆಯರು, ಹಿರಿಯರು ಹೀಗೆ ಎಲ್ಲ ವಯೋಮಾನದವರು ಹೊಸ ಬಟ್ಟೆ ತೊಟ್ಟು, ಆರತಿ ಬೆಳಗಿ ಉತ್ಸಾಹದಿಂದಲೇ ಲಂಬೋದರನನ್ನು ಸ್ವಾಗತಿಸಿದರು. 

ಗಣೇಶನನ್ನು ಕರೆತರುವ ದಾರಿಯುದ್ದಕ್ಕೂ ಯುವಕರು, ಮಕ್ಕಳು ಪಟಾಕಿ ಸಿಡಿಸುತ್ತ, ಗಣೇಶನಿಗೆ ಜೈ.. ವಿಘ್ನ ನಿವಾರಕ ವಿನಾಯಕನಿಗೆ ಜೈ... ಏಕ ದೋ ತೀನ ಚಾರ್‌...ಗಣಪತಿಕೋ ಜೈ ಜೈ ಕಾರ... ಎನ್ನುತ್ತ ಭಕ್ತಿ ಭಾವ ಮೆರೆದರು. ಮನೆಯಲ್ಲಿ ಸುಂದರ ಅಲಂಕೃತ ಮಂಟಪಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ  ಪೂಜೆ ನೆರವೇರಿಸಿದರು. ನಂತರ ಲಂಬೋದರನಿಗೆ ಪ್ರಿಯವಾದ ಕಡಬು, ಮೋದಕ, ಪಂಚಕಜ್ಜಾಯ, ಪಾಯಸ ಮುಂತಾದ ಭಕ್ಷಭೋಜ್ಯಗಳನ್ನು ನೈವೇದ್ಯ ಅರ​‍್ಿಸಿದರು. ಸಾರ್ವಜನಿಕ ಗಣಪನಿಗೆ ಅದ್ಧೂರಿ ಸ್ವಾಗತ: ಬೆಳಗ್ಗೆ ಮನೆ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ ಬಳಿಕ ಯುವಕರು ಮತ್ತು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸಂಜೆ ವೇಳೆ ಭಾರಿ ಮೆರವಣಿಯೊಂದಿಗೆ ಉತ್ಸಾಹದಿಂದ ಮೂರ್ತಿ ಪ್ರತಿಷ್ಠಾಪಿಸಿದರು. ಟ್ರ್ಯಾಕ್ಟರ್ ಮತ್ತು ತೆರೆದ ವಾಹನಗಳಲ್ಲಿ ಆಳೆತ್ತರದ ಗಣಪನ ವಿಗ್ರಹಗಳನ್ನು ಪಟಾಕಿಗಳ ಆರ್ಭಟ, ಮಂಗಲವಾದ್ಯದ ಸಡಗರದೊಂದಿಗೆ ಮೆರವಣಿಗೆ ಮೂಲಕ ಕರೆತರುವ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ಕೇಕೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಸಾರ್ವಜನಿಕ ಗಣಪ ಪ್ರತಿಷ್ಠಾಪನೆ ಜೋರಾಗಿ ನಡೆಯಿತು.