ಗಣೇಶ ಹಬ್ಬದ ಆಚರಣೆ : ಡಿಜೆಗೆ ಅನುಮತಿ ನೀಡುವಂತೆ ಒತ್ತಾಯ

ಗಣೇಶ ಹಬ್ಬದ ಆಚರಣೆ : ಡಿಜೆಗೆ ಅನುಮತಿ ನೀಡುವಂತೆ ಒತ್ತಾಯ  Ganesh festival celebrations: Demand to grant permission to DJ

ಹಾವೇರಿ 26 : ಗೌರಿ ಗಣೇಶ ಹಬ್ಬದ ಆಚರಣೆ ವೇಳೆ ದೊಡ್ಡ ಪ್ರಮಾಣದ ಧ್ವನಿವರ್ಧಕ (ಡಿಜೆ) ಬಳಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ನಗರದ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸದಸ್ಯರು ಸೋಮವಾರ ಜಿಲ್ಲಾಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಎಸ್‌ಪಿ ಯಶೋಧಾ ವಂಟಗೋಡಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾದ್ಯಂತ ಸಾರ್ವಜನಿಕ ಗೌರಿ ಗಣೇಶ ಹಬ್ಬವನ್ನು ಅನೇಕ ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಈ ವರ್ಷವು ಸಹಿತ ಸಾರ್ವಜನಿಕ ಗಣೇಶ ಹಬ್ಬವನ್ನು ಸಾವಿರಾರು ಜನರೊಂದಿಗೆ ಶಾಂತಿ ಸುವ್ಯವಸ್ಥೆ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಜಿಲ್ಲಾದ್ಯಂತ ಆ.27ರಿಂದ ಗಣೇಶ ಪ್ರತಿಷ್ಠಾಪನೆ ಮಾಡಿ, ನಂತರ ವಿಸರ್ಜನೆ ಮಾಡುವವರೆಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ರವರೆಗೆ ದೊಡ್ಡ ಪ್ರಮಾಣದ ಧ್ವನಿವರ್ಧಕ(ಡಿಜೆ)ಗಳನ್ನು ಬಳಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದರಾಜ ಕಲಕೋಟಿ, ಡಾ.ಸಂತೋಷ ಆಲದಕಟ್ಟಿ, ಶಿವರಾಜ ನವಲೆ, ಕಿರಣಕುಮಾರ ಕೋಣನವರ, ವರುಣ ಆನವಟ್ಟಿ, ಸುನೀಲ ರಾಯ್ಕರ್, ದೀಪಕ್ ಮಡಿವಾಳರ, ರಾಘವೇಂದ್ರ ಕಾಂಬಳೆ, ಯಲ್ಲಪ್ಪ ಸುಗೂರು, ನಿಖಿಲ ಸಂಗಂ, ಸಂತೋಷ ಗಾಯಕವಾಡ, ರುದ್ರೇಶ ಶಿಶುವಿನಹಳ್ಳಿ, ಶಿವಾನಂದ ಕಮ್ಮಾರ, ಅನಿಲ, ವಿನಾಯಕ ಪವಾರ, ಕಾರ್ತಿಕ ಸೇರಿದಂತೆ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಕಾರಿಗಳು ಹಾಜರಿದ್ದರು.