ಗಣೇಶ ಚತುರ್ಥಿ : ಹಾಸ್ಯ ಸಂಗೀತ ಸಂಜೆ ಕಾರ್ಯಕ್ರಮ
Ganesh Chaturthi: Comedy and musical evening program
ಯರಗಟ್ಟಿ 07: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ವೀರಭದ್ರೇಶ್ವರ ಗಜಾನನ ಮಂಡಳಿ ಹಾಗೂ ಯುವ ಶಕ್ತಿ ಯುವ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಅದ್ವಿಕಾ ಮೆಲೋಡಿಸ್ ಆರ್ಕಿಸ್ಟ್ರಾ ಇವರಿಂದ ಹಾಸ್ಯ ಸಂಗೀತ ಸಂಜೆ ಕಾರ್ಯಕ್ರಮ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ರಿಬ್ಬನ್ ಕಟ್ಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಡುತ್ತದೆ. ಸಂಗೀತ ರೋಗವನ್ನು ನಿವಾರಿಸುವ ಶಕ್ತಿ ಹೊದಿದೆ ಎಂದು ಹೇಳಿದರು.ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಮತ್ತು ಚೆ?ತನ್ಯ ಭರಿತವಾಗುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿದೆ ಎಂದರು.
ಈ ವೇಳೆ ಅಶ್ವತ ವೈದ್ಯ, ಪ್ರಕಾಶ ವಾಲಿ, ಶ್ರೀಶೈಲ ಸಂಗಪ್ಪನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಮಲಿಕಸಾಬ ಬಾಗವಾನ, ನೀಲಕಂಠ ಸಿದ್ದಬಸನ್ನವರ, ಗುತ್ತಿಗೆದಾರ ಮಾಂತೇಶ ಉರುಬಿನ, ಮಾಜಿ ಗ್ರಾ. ಪಂ. ಅಧ್ಯಕ್ಷ ಬಂಗಾರ್ಪ ಹರಳಿ, ಗುರ್ಪ ಶೆಟ್ಟರ, ಉಮೇಶ ಮಾಗುಂಡನವರ, ರಮೇಶ ಗೂಡಿ, ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ, ಸದಾಶಿವ ಚವಲಗಿ, ಚಂದ್ರು ಶಾಮನವರ, ಮಂಜು ಪಾಚಂಗಿ, ಚಂದ್ರ್ಪ ಯಡಳ್ಳಿ, ರಾಜು ಸೋಮಣ್ಣವರ, ರಾಜು ಪಟ್ಟಣಶೆಟ್ಟಿ, ಈರಣ್ಣ ರಾಯರ, ಪ್ರಕಾಶ್ ದಂಡಿನ, ಬಸಯ್ಯ ಸಾಲಿಮಠ, ಜಗದೀಶ್ ತೋಡ್ಕರ ಸೇರಿದಂತೆ ಅನೇಕರು ಇದ್ದರು07 ಯರಗಟ್ಟಿ 02ಪೋಟೋ ಶೇಷಿಕೆ ಹಾಸ್ಯ ಸಂಗೀತ ಸಂಜೆ ಕಾರ್ಯಕ್ರಮವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಚಾಲನೆ ನೀಡಿದ ಶಾಸಕ ವಿಶ್ವಾಸ ವೈದ್ಯ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 