ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಾದರಿ ಕಾಲೇಜ್ ಖಾಸಗಿ ಕಾಲೇಜುಗಳಿಗೆ ಸಮನಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ
Gandhipur Government First Grade College is a model college providing quality education on par with
ಲೋಕದರ್ಶನ ವರದಿ
ಹಾವೇರಿ 24: ರಾಜ್ಯದ 413 ಕಾಲೇಜುಗಳ ಪೈಕಿ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದರಿ ಕಾಲೇಜ್ ಎಂದು ಆಯ್ಕೆಯಾಗಿದ್ದು, ಖಾಸಗಿ ಕಾಲೇಜುಗಳಿಗೆ ಸವಾಲು ನೀಡುವ ಮಟ್ಟದಲ್ಲಿ ಈ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಫರ್ಜಾನ್ ಪಠಾಣ ಅವರು ತಿಳಿಸಿದರು.
ಹಾವೇರಿ ನಗರದ ಸಮೀಪದಲ್ಲಿರುವ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಕಾಲೇಜು ಮಾದರಿ ಕಾಲೇಜಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಾಳೆ ಧಾರವಾಡದಿಂದ ಕಾಲೇಜು ವೀಕ್ಷಣೆ ವಿಶೇಷ ತಂಡ ಆಗಮಿಸಲಿದೆ. ಇದು ಮಾದರಿ ಕಾಲೇಜು ಎಂದು ಅನುಮೋದನೆಗೊಂಡರೆ ಈ ಕಾಲೇಜಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದು ತಿಳಿಸಿದರು. ಈ ಕಾಲೇಜು 2006-07ನೇ ಸಾಲಿನಲ್ಲಿ ಹಾವೇರಿ ನಗರದ ಪುರಸಭೆ ಕಟ್ಟಡದಲ್ಲಿ ಕಾಲೇಜು ಆರಂಭವಾಗಿತ್ತು. ಬಿ.ಎ ಹಾಗೂ ಬಿ.ಕಾಂ. ಕೋರ್ಸುಗಳೀಗೆ 243 ವಿದ್ಯಾರ್ಥಿಗಳು ದಾಖಲಾಗಿದ್ದರು. 2010 ರಲ್ಲಿ ಬಿಎಸ್ಸಿ ಮತ್ತು 2012ರಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ(ಎಂ.ಎ. ಎಕನಾಮಿಕ್ಸ್) ಪದವಿಗಳನ್ನು ಆರಂಭಿಸಲಾಗಿತು ಎಂದರು.
6.11 ಎಕರೆ ಪ್ರದೇಶ: ಗಾಂಧಿಪುರ ಗ್ರಾಮದ 6.11 ಎಕರೆ ಪ್ರದೇಶದಲ್ಲಿ ಜೂನ್ 2015ರಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಯಿತು. ಸಂಸ್ಥೆಯ ನಿರಂತರ ಬೆಳವಣಿಗೆಯಿಂದ ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ಗಡಿ ದಾಡಿತು. ಈ ಹಿನ್ನಲೆಯಲ್ಲಿ 2017-18ರಲ್ಲಿ ರೂ.3.56 ಕೋಟಿ ವೆಚ್ಚದಲ್ಲಿ ತರಗತಿ ಕೊಠಡಿಗಳು ಹಾಗೂ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಕಾಲೇಜು ಆವರಣದಲ್ಲೇ 120 ಸಾಮರ್ಥ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬಾಲಕರ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ.
ರೂ.6.10 ಕೋಟಿ : ವಿಜ್ಞಾನ ವಿಭಾಗದ ಕಟ್ಟಡಕ್ಕೆ ಪ್ರಸಕ್ತ 2025-26ನೇ ಸಾಲಿನಲ್ಲಿ ರೂ.6.10 ಕೋಟಿ ಮಂಜೂರಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಹೆಚ್ಚುವರಿ ಕೊಠಡಿ ನಿರ್ಮಾಣ: 2021 ರಿಂದ 2023ರವರೆಗೆ 11 ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗಿದೆ. ನ್ಯಾಕ್‌ನಿಂದ ಬಿ ಗ್ರೇಡ್: 2017ರಲ್ಲಿ ನಡೆದ ಮೊದಲ ಹಂತದ ಮಾನ್ಯತೆಯಲ್ಲಿ ನ್ಯಾಕ್‌ನಿಂದ ‘ಬಿ’ಗ್ರೇಡ್(2.10 ಸಿಜಿಪಿಎ) ಲಭಿಸಿದೆ.2018-19 ರಿಂದ 2023ರ ಐದು ವರ್ಷದ ನ್ಯಾಕ್‌ನ 2ನೇ ಭೇಟಿಯಲ್ಲಿ ಬಿ + ಗ್ರೇಡ್ 2.69 ಸಿಜಿಪಿಎ ಅಂಕ ಗಳಿಸಿದೆ. 2023-24ನೇ ಸಾಲಿನಿಂದ ಹಾವೇರಿ ವಿಶ್ವವಿದ್ಯಾಲಯದ ಅಡಿಯಲ್ಲಿ ಅಲಿಫಿಯೇಷನ್ ಸಂಯೋಜನೆ ಹೊಂದಿದೆ.
ನಾನ್-ಸಿಬಿಸಿಎಸ್, ಸಿಬಿಸಿಎಸ್, ಎನ್.ಇ.ಸಿ. ಹಾಗೂ ರಿವೈಸ್ಡ್ ಎನ್.ಇ.ಪಿ. ಸಿಲೆಬಸ್ ಅಧ್ಯಯನ ಮಾಡುತ್ತಿದ್ದಾರೆ. 2006 ರಿಂದ ಈವರೆಗೆ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು. 1382 ವಿದ್ಯಾರ್ಥಿಗಳು: 2024-25ರಲ್ಲಿ ಬಿಕಾಂ(ಆರ್‌ಒ) ಹೊಸ ಕೋರ್ಸ್ ಆರಂಭಿಸಲಾಗಿದೆ. ಪ್ರಸ್ತುತ 1382 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿಎ-714, ಬಿಕಾಂ-386, ಬಿಕಾಂ(ಆರ್‌ಒ)-43, ಬಿ.ಎಸ್ಸಿ-215 ಹಾಗೂ ಎಂ.ಎ(ಅರ್ಥಶಾಸ್ತ್ರ) ವಿಭಾಗದಲ್ಲಿ-24 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಬಿ.ಸಿ.ಎ ಕೋರ್ಸ್: 2026-27ನೇ ಶೈಕ್ಷಣಿಕ ಸಾಲಿನಿಂದ ಈ ಕಾಲೇಜಿನಲ್ಲಿ ಬಿ.ಸಿ.ಎ ಕೋರ್ಸ್ ಆಂಭಿಸಲಾಗುತ್ತಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಿಬ್ಬಂದಿ ಕೊರತೆ: ಖಾಯಂ ಬೋಧಕ ಸಿಬ್ಬಂದಿ-17, ಖಾಯಂ ಬೋಧಕೇತರ ಸಿಬ್ಬಂದಿ ಮೂರು ಜನ , ಅತಿಥಿ ಉಪನ್ಯಾಸಕರು-51 ಹಾಗೂ ಹೊರಗುತ್ತಿಗೆ ಸಿಬ್ಬಂದಿ ನಾಲ್ಕು ಹಾಗೂ ಸಿಡಿಸಿ ನಾಲ್ಕು ಜನರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಪಾತದಲ್ಲಿ ಸಿಬ್ಬಂದಿಗಳು ಇರುವುದಿಲ್ಲ. ಹಾಗಾಗಿ ಸಿಬ್ಬಂದಿ ಕೊರತೆ ಇದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ: ಈ ಕಾಲೇಜಿನಲ್ಲಿ ಉತ್ತಮ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಅತ್ಯಂತ ಸುಸಜ್ಜಿತ ಕಟ್ಟಡ ವ್ಯವಸ್ಥೆ ಇದೆ. ಉಪನ್ಯಾಸಕರು ಉತ್ತಮ ರೀತಿಯಲ್ಲಿ ಪಾಠ ಮಾಡುತ್ತಿದ್ದಾರೆ. ಆದರೂ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಗ್ರಾಮೀಣ ಹಾಗೂ ನಗರದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ನೀಡುವಲ್ಲಿ ಕಾಲೇಜಿನ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಈ ಕಾಲೇಜಿನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾರಿಗೆ ಸಮಸ್ಯೆ: ಈ ಕಾಲೇಜು ನಗರದ ಹೊರವಲಯದಲ್ಲಿ ಇರುವುದರಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಮರ್ಕ ಸಾರಿಗೆ ವ್ಯವಸ್ಥೆ ಇರದ ಕಾರಣ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕಾಲೇಜಿನ ಹೆಚ್ಚಿನ ಸಾರಿಗೆ ವ್ಯವಸ್ಥೆ ಅವಶ್ಯಕತೆ ಇದೆ ಎಂದರು.
ತಡೆಗೋಡೆ ಹಾಗೂ ಗೇಟ್: ಕಾಲೇಜಿನ ಸುತ್ತಲೂ ತಡೆಗೊಡೆ ಹಾಗೂ ಮುಂದೆ ಗೇಟ್ ಇಲ್ಲದ ಕಾರಣ ಕಾಲೇಜು ಆವರಣದಲ್ಲಿ ದನಗಳು ಬರುತ್ತವೆ ಹಾಗೂ ರೈತರು ತಮ್ಮ ಉತ್ಪನ್ನ ಕಾಲೇಜು ಆವರಣದಲ್ಲಿ ಹಾಕುತ್ತಿದ್ದಾರೆ. ಇದರಿಂದ ಕಾಲೇಜು ಆವರಣದಲ್ಲಿ ಉದ್ಯಾನವನ ನಿರ್ಮಾಣ ಸಾಧ್ಯವಾಗಿಲ್ಲ. ಕಾಲೇಜು ಕಟ್ಟಡಕ್ಕೆ ತಡೆಗೋಡೆ ಹಾಗೂ ಗೇಟ್ ನಿರ್ಮಾಣ ಮಾಡಿದರೆ ಕಾಲೇಜು ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಾಣ ಮಾಡಬಹುದು ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಂ.ಬಿ.ನಾಗಲಾಪೂರ, ಪ್ರಾ.ರವಿ ಸಿ.ಎಚ್., ಡಾ.ಇಂಡಿಮಠ, ಪ್ರಾ. ಚಂದ್ರ್ರಭಾ ಪಠಗಾರ ಅವರು ಕಾಲೇಜಿನಲ್ಲಿ ಆಯೋಜಿಸಲಾದ ಉದ್ಯೋಗ ಮೇಳ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕೌಶಲ್ಯ ತರಬೇತಿ ಆಯೋಜನೆ ಸೇರಿದಂತೆ ಕಾಲೇಜಿನ ಸಾಧನೆ ಕುರಿತು ಮಾಹಿತಿ ನೀಡಿದರು. ಮಾಧ್ಯಮಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್. ಇತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 