ಧಾರವಾಡ, 1: ಗಾಂಧೀಜಿ ನಮ್ಮೆಲ್ಲರ ಬೆಳಕು. ಪ್ರಪಂಚದ 80 ರಾಷ್ಟ್ರಗಳಲ್ಲಿ ಗಾಂಧೀಜಿ ಅವರ ಅಧ್ಯಯನ ನಡೆದಿದೆ. ಅವರ ತತ್ವಾದರ್ಶಗಳು ವಿಶ್ವವ್ಯಾಪಕವಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು.
ಅವರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕನರ್ಾಟಕ ವಲಯದ ಆಯುಕ್ತರ ಕಛೇರಿಯ ವತಿಯಿಂದ 'ಗಾಂಧೀಜಿ-150 : ಕುಂಚ ನಮನ' ಶೀಷರ್ಿಕೆಯಡಿ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗ ಮಟ್ಟದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಪೇಂಟಿಂಗ್ ಕಾರ್ಯಗಾರವನ್ನು ಸೋಮವಾರ ಇಲ್ಲಿಯ ಸರಕಾರಿ ಚಿತ್ರಕಲಾ ವಿದ್ಯಾಲಯದ ಆರ್ಟ ಗ್ಯಾಲರಿಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸೆಯನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ. ಗಾಂಧೀಜಿ ಕೇವಲ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೇ ವಿಶ್ವಮಾನವರಾಗಿದ್ದಾರೆ. ರಾಷ್ಟ್ರ ಮತ್ತು ಸಮಾಜ ಎಂಬ ಕಲ್ಪನೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಗಾಂಧಿಜಿ ಪ್ರಸ್ತುತರಾಗಿರುತ್ತಾರೆ. ಸಮಾಜದ ಎಲ್ಲ ಧಮನಿತ ವರ್ಗಗಳನ್ನು ಅವರು ಬೆಂಬಲಿಸುತ್ತಿದ್ದರು. ಗಾಂಧೀಜಿ ಈಗ ಇಲ್ಲವಾದರೂ ಸಹಿತ ವಿಶ್ವದ ನಾಯಕರು ಗಾಂಧಿಯನ್ನು ಸದಾ ಸ್ಮರಣೀಯವಾಗಿ ನೆನೆದುಕೊಳ್ಳುತ್ತಿದ್ದಾರೆ. ಜೊತೆಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಆದರೇ ನಮ್ಮ ದೇಶದಲ್ಲಿಯೇ ಗಾಂಧಿ ಅವರ ತತ್ವ ಪಾಲನೆ, ಸಂದೇಶಗಳ ಪ್ರಸಾರ, ಅವರ ಸ್ಮರಣೆ, ಅಧ್ಯಯನ ಹೆಚ್ಚು ನಡೆಯುತ್ತಿಲ್ಲ. ಇದು ನಿರಂತರ ನಡೆಯಬೇಕಿದೆ ಎಂದರು.
ಗಾಂಧಿ ಅವರನ್ನು ಟೀಕಿಸುವ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ನಡೆದಿದೆ. ಇವರು ಗಾಂಧಿ ಅವರನ್ನು ಅಧ್ಯಯನ ಮಾಡಿದ್ದಾರೆಯೇ, ಅಥವಾ ಗಾಂಧಿ ಅವರನ್ನು ನೇರವಾಗಿ ನೋಡಿದ್ದಿರಾ ಎಂದವರು ಪ್ರಶ್ನಿಸಿದರು. ನಮ್ಮ ಮಕ್ಕಳಿಗೆ ವೈಚಾರಿಕ ಶಿಕ್ಷಣ ನೀಡಬೇಕು. ಮಹಾತ್ಮರ ವಿಚಾರಧಾರೆಗಳನ್ನು ತಿಳಿಸುವ ಕಾರ್ಯ ಆಗಬೇಕು. ಮಕ್ಕಳು ನಮ್ಮ ಕೇಂದ್ರ ಬಿಂದುಗಳು. ಉತ್ತಮ ಶಿಕ್ಷಣ ನೀಡಿ ಚಾರಿತ್ರ್ಯಶೀಲರನ್ನಾಗಿ ಮಾಡಬೇಕು. ಮಹಾತ್ಮರ ಬಗ್ಗೆ ಓದಿ ವಿಮಶರ್ೆ ಮಾಡಬೇಕು. ಬಾಯಿ ಚಪಲಕ್ಕೆ ಏನೋನೋ ಮಾತಾಡುವುದು ಸರಿಯಾದ ಕ್ರಮವಲ್ಲ. ಇತಿಹಾಸ ಹೇಳಿಕೊಡುವುದರಲ್ಲಿ ನಾವು ಎಡವಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತ್ಯಾಗ ಬಲಿದಾನಗಳನ್ನು ಮಾಡಿದ ಮಹಾತ್ಮರ ಬಗ್ಗೆ ಹೆಚ್ವು ತಿಳಿದುಕೊಂಡು ಅಲ್ಲಿ ಪಡೆದ ಜ್ಞಾನವನ್ನು ಶಾಲೆಯ ಮಕ್ಕಳಿಗೆ ಪಸರಿಸಿ ಎಂದು ಮೇಜರ್ ಸಿದ್ದಲಿಂಗಯ್ಯ ಸಲಹೆ ನೀಡಿದರು.
ಆಯುಕ್ತರ ಕಛೇರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪ್ರಭಾರಿ ನಿದರ್ೆಶಕ ಡಾ.ಬಿ.ಕೆ.ಎಸ್.ವರ್ದನ್ ಮಾತನಾಡಿ, ವಿಶ್ವ ಕಂಡ ಮೇರು ವ್ಯಕ್ತಿತ್ವದ ನಾಯಕತ್ವ ಮಹಾತ್ಮಾ ಗಾಂಧಿ ಅವರಲ್ಲಿದೆ. ಅವರ ಧ್ಯೇಯ ಆದರ್ಶವನ್ನು ನಾವೆಲ್ಲ ರೂಡಿಸಿಕೊಳ್ಳಬೇಕು. ಎಲ್ಲರಿಗೂ ಕೆಲವು ನ್ಯೂನತೆಗಳು ಇರುತ್ತವೆ. ಹೀಗಾಗಿ ನ್ಯೂನತೆಗಳ ದೃಷ್ಟಿಕೋನವನ್ನು ಕಡಿಮೆ ಮಾಡಿ ಜಗತ್ತಿಗೆ ನಮ್ಮ ನಾಯಕರು ಕೊಟ್ಟ ಕೊಡುಗೆಗಳ ಕುರಿತು ಅವಲೋಕನ ಅಗತ್ಯ. ಟೀಕೆ ಟಿಪ್ಪಣಿ ಎಲ್ಲರಿಗೂ ಇರಬೇಕು. ಆದರೆ ಟೀಕೆ ಮಾಡುವಾಗ ನಾವೆಷ್ಟು ಉತ್ತಮರು ಎನ್ನುವುದನ್ನು ಅರಿಯಬೇಕು. ಇಂದು ಗಾಂಧೀಜಿ ಅವರ ತೆಲೆ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಹೃದಯ ದೇಶಕ್ಕೆ ಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆಯ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಹಾಗೂ ಕಾಯರ್ಾಗಾರದ ನೋಡಲ್ ಅಧಿಕಾರಿ ಪಿ.ಆರ್. ಬಾರಕೇರ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಕುರಿ, ನಿವೃತ್ತ ಅಧ್ಯಾಪಕ ಸಿ.ಎಲ್. ಕೋಲಕಾರ, ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ ಸ್ವಾಗತಿಸಿದರು. ಇ-ಆಡಳಿತ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ ನಿರೂಪಿಸಿದರು. 'ಜೀವನ ಶಿಕ್ಷಣ' ಮಾಸಪತ್ರಿಕೆಯ ಸಹ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ವಂದಿಸಿದರು.
ಇದೇ ಸಂದರ್ಭದಲ್ಲಿ ಚಿತ್ರಕಲಾ ಅಧ್ಯಾಪಕ ಡಾ. ಸಂಗಮೇಶ ಬಗಲಿ ಹಾಗೂ ಇನ್ನೋರ್ವ ಅಧ್ಯಾಪಕ ಸುನೀಲ ಮಠದ ಅವರು ತಾವು ಮೊದಲೇ ಮಾಡಿಕೊಂಡು ಬಂದಿದ್ದ ಚಿತ್ರಕಲಾ ಕೃತಿಗಳನ್ನು ಅಧಿಕಾರಿಗಳಿಗೆ ಸಮಪರ್ಿಸಿದರು.
ಬೆಳಗಾವಿ ವಿಭಾಗದ 9 ಜಿಲ್ಲೆಗಳ ಪ್ರೌಢ ಶಾಲೆಗಳ 80 ಚಿತ್ರಕಲಾ ಶಿಕ್ಷಕರು ಈ 5 ದಿನಗಳ 'ಗಾಂಧೀಜಿ-150 : ಕುಂಚ ನಮನ' ಪೇಂಟಿಂಗ್ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದಾರೆ. ಶುಕ್ರವಾರ (ಜು.19 ರಂದು) ಕಾಯರ್ಾಗಾರ ಕೊನೆಗೊಳ್ಳಲಿದೆ. ಗಾಂಧೀಜಿಯವರ ಸಮಗ್ರ ಬದುಕನ್ನು ಕೇಂದ್ರೀಕರಿಸಿ ಅವರ ಜೀವನ-ಸಾಧನೆಯ ವಿವಿಧ ಆಯಾಮಗಳನ್ನು ಕೇಂದ್ರೀಕರಿಸಿ ಪ್ರತಿಯೊಬ್ಬ ಶಿಕ್ಷಕರು 2 ಕಲಾಕೃತಿಗಳನ್ನು ಸಿದ್ಧಗೊಳಿಸಲಿದ್ದಾರೆ.