ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವುದನ್ನು ಕಲಿಸಿಕೊಟ್ಟವರು ಗಾಂಧೀಜಿ: ಕಾಂಬಳೆೆ

ಲೋಕದರ್ಶನ ವರದಿ

ಹಾವೇರಿ 12: ಮನುಷ್ಯನ ಜೀವಪರ ಚಿಂತನೆಗಳನ್ನು ಸಂಶೆಯದಿಂದ ನೋಡಿ, ವಿಚಾರವಂತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ಗಾಂಧಿ ವಿಚಾರಗಳು ತಕ್ಕ ಉತ್ತರ ಮತ್ತು ತಿಳುವಳಿಕೆಯನ್ನು ಕೊಡಬಲ್ಲವು. ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವುದನ್ನು ಕಲಿಸಿಕೊಟ್ಟವರು ಗಾಂಧೀಜಿ ಎಂದು .ವಿ.ವಿ ಸ್ನಾತಕೋತ್ತರ ಕೇಂದ್ರ ಕನ್ನಡ ವಿಭಾಗದ ಮುಖ್ಯಸ್ಥೆ, ಕವಯತ್ರಿ ಡಾ. ಅನಸೂಯಾ ಕಾಂಬಳೆ  ಹೇಳಿದರು.

                 ಗಾಂಧಿಜಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ  ಗಾಂಧಿ ಸ್ಥಬ್ಧಚಿತ್ರ ಹಾವೇರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ  ವಾತರ್ಾ ಭವನದಲ್ಲಿ ಗುರುವಾರ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಿಂದ ಆಯೋಜಿಸಲಾದ ಗಾಂಧಿ 150 ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಹಿಂಸೆ ಮತ್ತು ಅಹಿಂಸೆಗಳ ಪರಾಮಶರ್ಿಸಿ ಅದರ ಪರಿಣಾಮಗಳನ್ನು ಆಳವಾಗಿ ಕಂಡುಕೊಂಡ ಗಾಂಧೀಜಿ, ಅಹಿಂಸೆಯೇ ಮನುಷ್ಯನ ವಿಕಸನದ ಹಾದಿ ಎಂದವರು. ಮನುಷ್ಯ ಜೀವನ ಒಂದು ಪ್ರಯೋಗ ಶಾಲೆ ಎಂದು ನಂಬಿದ್ದ ಗಾಂಧೀಜಿಯವರು ಈಗಲೂ ಸಾಮಾನ್ಯನ ಪಾಲಿಗೆ ಒಂದು ಆದರ್ಶದ ಮಾದರಿ ಎಂದು ಹೇಳಿದರು.

       ಸಂದರ್ಭದಲ್ಲಿ ಸ್ವರಚಿತ ಹರಿದ ಕಿಸೆಯಲ್ಲಿ ಮತ್ತೆ ಮತ್ತೆ ಮತ್ತೆ ಹುಡುಕುತ್ತಿರುವೆ ಗಾಂಧಿಯನ್ನು' ಎಂಬ ಕಿರು ಕವನವನ್ನು ವಾಚಿಸಿದರು.

       ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕವಿ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, ಗಾಂಧೀ ತತ್ವ ಸಿದ್ಧಾಂತಗಳನ್ನು ಆರಾಧಕರಾಗಿ ನೋಡದೆ, ಅವರ ದಾರಿಯಲ್ಲಿ ನಡೆದರೆ ನಿಜ ಅರ್ಥದಲ್ಲಿ ಅವರನ್ನು ತಿಳಿದಂತೆ ಎಂದರು.

                ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಆರ್ ವ್ಹಿ ಚಿನ್ನಿಕಟ್ಟಿ ಅವರು ಮಾತನಾಡಿ, ಹೊಸ ಪೀಳಿಗೆಯ ಕವಿಗಳು ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಕಾವ್ಯದ ಮೂಲಕ ಕಾಣಲು ಗಾಂಧೀ ಕವಿಗೋಷ್ಠಿ ಪ್ರೇರಣೆ ನೀಡಿದೆ. ಇಲ್ಲಿನ ಎಲ್ಲ ಕವಿತೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.

                ಪ್ರಾಸ್ತಾವಿಕ ನುಡಿಗಳನ್ನಾಡಿದ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಸಹಾಯಕ ನಿದರ್ೇಶಕ ಡಾ. ಬಿ.ಆರ್.ರಂಗನಾಥ ಅವರು ' ಗಾಂಧೀ ಸ್ತಬ್ಧಚಿತ್ರ ಸಂಚರಿಸುವ ಸಂದರ್ಭದಲ್ಲಿ ಅದಕ್ಕೊಂದು ವಿಭನ್ನವಾದ ಆಯಾಮು ನೀಡುವುದು ಗಾಂಧೀ ಕವಿಗೋಷ್ಠಿಯ ಉದ್ದೇಶವಾಗಿದೆ ಎಂದು ಹೇಳಿದರು.

       ಸಿದ್ದುಮತಿ ನೆಲವಿಗಿ, ಗಂಗಾಧರ ನಂದಿ, ಉಷಾ ಪಾಟೀಲ, ಪ್ರತಭಾ ಗಾಂಜಿ, ಶಕುಂತಲಾ ಕೋಣನವರ, ಲಕ್ಷ್ಮೀಕಾಂತ ಮಿರಜಕರ, ರೇಖಾ ಬೈರಕ್ಕನವರ, ಶ್ವೇತಾ ಹನುಮನಹಳ್ಳಿ, ಅಂಜು ಪತ್ತಾರ, ಸಿಂಚನಾ ವ್ಹಿ ಕೆ, ರಾಜೇಶ್ವರಿ ಸಾರಂಗಮಠ, ಮಮತಾ ಪೂಜಾರ, ಶಂಕರ ಬಡಿಗೇರ, ಗೀತಾ ಪೂಜಾರ, ವೀರನಗೌಡ ಪಾಟೀಲ, ರವಿಚಂದ್ರ ಕೊಳ್ಳಿ, ರಾಜಾ ಭಕ್ಷು, ಸಿ ಜಿ ಮಲ್ಲೂರ, ಗಣೇಶ ಜೋಗಿ, ಶಿವಯೋಗಿ ಚರಂತಿಮಠ, ಅಶೋಕ ಎಣ್ಣಿಯವರ, ಅಕ್ಕಮಹಾದೇವಿ ಹಾನಗಲ್ಲ, ಸುವಣರ್ಾ ಮಾಳಗಿಮನಿ, ಎಸ್ ಜೆ ಚಿತ್ರಗಾರ, ಬಸವರಾಜ ಬಾಗೇವಾಡಿಮಠ, ಆರ್ ಸಿ ನಂದೀಹಳ್ಳಿ, ಜಿ ಎಂ ಓಂಕಾರಣ್ಣನವರ, ಭಾಗ್ಯವತಿ ಕೋಡಬಾಳ, ರಶ್ಮಾ ಟಿ ಕೆ, ಹಾಗೂ ಸತೀಶ ಕುಲಕಣರ್ಿ ಮುಂತಾದ 34 ಕವಿಗಳು ಕಾವ್ಯವಾಚನ ಮಾಡಿದರು.

                ಆರಂಭದಲ್ಲಿ ಮಮತಾ ಪೂಜಾರ ಗಾಂಧೀ ಗೀತೆ ಹಾಡಿದರು. ಎಸ್ ಎಂ ಬಡಿಗೇರ ಸ್ವಾಗತಿಸಿದರು. ದಾವಲ್ಮಲಿಕ್ ಇಂಗಳಕಿ ಗೋಷ್ಠಿ ನಡೆಸಿದರು. ಕೊನೆಯಲ್ಲಿ ರಾಹಿಲ್ ರಾಜೂಭಕ್ಷಿ ವಂದಿಸಿದರು.