ಗ್ರಾಮ ಪಂಚಾಯತಿ ಸಮಗ್ರ ಅಭಿವೃದ್ಧಿಗೆ ಸಿಕ್ಕ ಗಾಂಧಿ ಗ್ರಾಮ ಪುರಸ್ಕಾರ
ಬೀಳಗಿ 12: ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ಹಿನ್ನೆಲೆಯಲ್ಲಿ ತಾಲೂಕಿನ ಕಂದಗಲ್ಲ ಗ್ರಾಮ ಪಂಚಾಯತಿ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರದ ಲಭಿಸಿದೆ. ಪುರಸ್ಕಾರದ ಜೊತೆಗೆ ರೂ.5ಲಕ್ಷ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಗುತ್ತದೆ.
ಕಂದಗಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಕಂದಗಲ್ಲ ಪು.ಕೇ, ಹದರಿಹಾಳ ಪು.ಕೇ, ಬೀರಕಬ್ಬಿ ಪು.ಕೇ, ಬೀರಕಬ್ಬಿ, ಹದರಿಹಾಳ, ಮುತ್ತಲದಿನ್ನಿ, ಕೊಪ್ಪ ಸೇರಿ ಒಟ್ಟು 8ಗ್ರಾಮಗಳು ಇದ್ದು 4ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. 8 ಚುನಾಯಿತ ಸದಸ್ಯರ ಬಲ ಹೊಂದಿದೆ.
15ನೇ ಹಣಕಾಸು ಯೋಜನೆಯಡಿ ಒಟ್ಟು ರೂ.16ಲಕ್ಷ ಅನುದಾನದಲ್ಲಿ ಶೇ.25ರಷ್ಟು ಎಸ್ಸಿ, ಎಸ್ಟಿಗೆ ಹಾಗೂ ಶೇ.5ರಷ್ಟು ವಿಶೇಷ ಚೇತನರ ಕಲ್ಯಾಣ ಅಭಿವೃದ್ಧಿಗೆ ನಿಗದಿ ಪಡೆಸಿದ ಅನುದಾನವನ್ನು ಬಳಿಸಲಾಗಿದೆ. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ಚರಂಡಿ, ರಸ್ತೆಗಳು, ಸ್ಮಶಾನ, ಶೌಚಾಲಯ, ಡಿಜಿಟಲ್ ಗ್ರಂಥಾಲಯ ಸೇರಿ ವಿವಿಧ ಅಭಿವೃದ್ಧಿಗೆ ಉಳಿದ ಅನುದಾನವನ್ನು ಬಳಿಸಿಕೊಳ್ಳಲಾಗಿದೆ.
ನರೇಗಾ ಯೋಜನೆ ಸಂಪೂರ್ಣ ಅಭಿವೃದ್ಧಿಗೆ ಬಳಕೆ:
ನರೇಗಾ ಯೋಜನೆ 11216 ಮಾನವದಿನಗಳ ಸೃಜನೆ ಗುರಿ, 11340 ಮಾಡಿದ ಮಾನವ ದಿನಗಳ ಸೃಜನೆ. ನೀಡಿದ ಗುರಿ ಮೀರಿ ಕಾರ್ಯ ನಿರ್ವಹನೆ ಮಾಡಲಾಗಿದೆ. ನರೇಗಾ ಕೂಲಿ ವೆಚ್ಚ-ರೂ.5.53ಲಕ್ಷ, ಸಾಮಗ್ರಿ ಖರೀದಿ-9.7 ಲಕ್ಷ ಒಟ್ಟು ರೂ.15.23ಲಕ್ಷ ಕೆಳಗಿನ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ.
ವೈಯಕ್ತಿಕ ಕಾಮಗಾರಿ: ಕೃಷಿಹೊಂಡ-17, ಬದು ನಿರ್ಮಾಣ-22, ದನದ ಕೊಟ್ಟಿಗೆ-5, ಬಚ್ಚಲ ಗುಂಡಿ-4, ವಸತಿ ಯೋಜನೆ ಮನೆ ನಿರ್ಮಾಣ-4, ತೋಟಗಾರಿಕೆ-13, ಎರೆ ಹುಳು ಗೊಬ್ಬರ-1 ನಿರ್ಮಿಸಲಾಗಿದೆ.
ಸಮುದಾಯ ಕಾಮಗಾರಿ: ಶಾಲಾ ಶೌಚಾಲಯ-1 ಸ್ಮಶಾನ ಅಭಿವೃದ್ಧಿ-1, ನಮ್ಮಹೊಲ ನಮ್ಮದಾರಿ-7, ಚರಂಡಿ ನಿರ್ಮಾಣ-2, ಬೋರವೆಲ್ ರಿಚಾರ್ಜ ಪೀಟ್-2, ಸಿಸಿ ರಸ್ತೆ-2, ಸಿಡಿ ನಿರ್ಮಾಣ-2 ನಿರ್ಮಿಸಲಾಗಿದೆ.