ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ, ಸಚಿವರಿಗೆ ಸನ್ಮಾನ
Gandhi Award for Gram Panchayat, Minister felicitated
ಯಮಕನಮರಡಿ 21: ಸ್ಥಳೀಯ ಗ್ರಾಮ ಪಂಚಾಯಿತಿಗೆ 2025 26ನೇ ಸಾಲಿನ ಮಹಾತ್ಮ ಗಾಂಧಿ ಪುರಸ್ಕಾರವು ಲಭಿಸಿದ್ದು ದಿನಾಂಕ 20 ರಂದು ಲೋಕಉಪಯೋಗಿ ಸಚಿವರಾದ ಸತೀಶ್ ಅಜಾರಕಿಹೊಳಿ ಅವರು ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಸದರಿ ಗ್ರಾ ಪಂ ಅಧ್ಯಕ್ಷ ಅಸ್ಮ ಪಣ್ಣಿಬಂದ ವರು ಪುರಸ್ಕಾರವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಸಚಿವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಪಂಚಾಯತಿ ಸದಸ್ಯರಾದ ದೇವಪ್ಪ ಹೊನ್ನೂರಿ ಪ್ರಕಾಶ್ ಬರಗಾಲಿ ಸದಾಶಿವ ಗುಡಿಕಡೆ ಮುಖಂಡರಾದ ಗ್ರಾಮದ ಮುಖಂಡರಾದ ಶಿವಶಂಕರ್ ಜುಟ್ಟಿ ಸಿದ್ದಪ್ಪ ಸಿಳ್ಳಿ ವೀರಣ್ಣ ಬಿಸಿ ರೊಟ್ಟಿ ಕಿರಣ್ ಸಿಂಗ್ ರಜಪುತ ಗೀರೀಶ್ ಮಿಶ್ರಿಕೋಟಿ ಪಂಚಾಯ್ತಿ ಸಿಬ್ಬಂದಿಗಳಾದ ಶಾಂತಕುಮಾರ್ ಮಲಾಜಿ ಕಾರ್ಯದರ್ಶಿ ಸಂತೋಷ್ ರಾವಳ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ಇದೇ ಸಂಬಂಧದಲ್ಲಿ ಗ್ರಾಮಸ್ಥರಿಂದ ಮನವಿ ಪತ್ರಗಳನ್ನು ಸಚಿವರು ಸ್ವೀಕರಿಸಿದರು ಗ್ರಾಮಸ್ಥರು ಕೆಲವೊಂದು ಕುಂದು ಕೊರತೆಗಳನ್ನು ಸಚಿವರ ಗಮನಕ್ಕೆ ತಂದುಕೊಟ್ಟರು ಇದೇ ಸಂದರ್ಭದಲ್ಲಿ ಸಮೀಪದ ಹತ್ತರಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆನಂದಪುರ ಗ್ರಾಮಸ್ಥರಾದ ಬಸವರಾಜ್ ಅತ್ತಿಮರ ದ ವಿನಾಯಕ್ ಹಳ್ಳಿ ಸಚಿವರ ಆಪ್ತ ಸಹಾಯಕರಾದ ಶಶಿಕಾಂತ್ ಹಟ್ಟಿ ಮುಂತಾದವರು ಉಪಸ್ಥಿತರಿದ್ದು ಆನಂದಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿಗಳ ತೊಂದರೆ ಕುರಿತು ಸಚಿವರು ಗಮನಕ್ಕೆ ತಂದರು ಈ ಕುರಿತು ಮಾತನಾಡುತ್ತಾ ಸದರಿ ಗ್ರಾಮ ಪಂ ಸದಸ್ಯರು ಮಾತನಾಡುವ ಅವಾಚ್ಯ ಶಬ್ದಗಳ ಕುರಿತು ಸಚಿವರ ಗಮನಕ್ಕೆ ತರಲಾಯಿತು ಅಲ್ಲದೆ ಸ್ಥಳೀಯ ಪತ್ರಕರ್ತರಿಗೆ ಪಂಚಾಯತಿ ಸದಸ್ಯರು ಬೆದರಿಕೆ ಹಾಕುತ್ತಿರುವುದನ್ನು ಪತ್ರಕರ್ತರು ಸಚಿವರ ಮುಂದೆ ತಮ್ಮ ನೋವನ್ನು ಹೇಳಿದರು
ಈಗಾಗಲೇ ಆನಂದಪುರ ಗ್ರಾಮಕ್ಕೆ ಬೇಕಾಗುವ ಮೂಲ ಸೌಲತ್ತುಗಳು ಸಂಪೂರ್ಣ ಮರಿಚಿಕೆಯಾಗಿದ್ದು ಸದರಿ ಗ್ರಾಮದ ಜನರಿಗೆ ಸಮರ್ಕ ರಸ್ತೆಗಳು ಇರುವದಿಲ್ಲ ರಾಷ್ಟ್ರೀಯ ಹೆದ್ದಾರಿ ದಾಟಲು ಯಾವುದೇ ತರದ ಅನುಕೂಲತೆಯನ್ನು ಜನಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿರುವುದಿಲ್ಲ ಇಡೀ ಆನಂದಪುರ ಗ್ರಾಮವು ಸಂಪೂರ್ಣ ಕಸದಿಂದ ತುಂಬಿದಂತಾಗಿದೆ ಈ ಕುರಿತು ಸಚಿವರು ಮಾತನಾಡುತ್ತಾ ಗ್ರಾಮದ ಎಲ್ಲ ಮುಖಂಡರು ಮುಂದಾಗಿ ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಹೇಳಿದರು ಈ ಕುರಿತು ಗ್ರಾಮದ ಮುಖಂಡರಿಗೆ ಸಚಿವರೆ ಅಧಿಕಾರ ವಹಿಸಿ ಕೊಡಬೇಕೆಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ರಕರ್ತ ಪತ್ರಕರ್ತರಿಗಾಗಲಿ ಸಾರ್ವಜನಿಕ ಸೆರೆಗಾಗಿ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಿದ ಸದಸ್ಯರಿಗೆ ಉತ್ತರ ಕೊಡುವದಾಗಿ ಪತ್ರಕರ್ತರು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 