ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುವ ಸಾಮರ್ಥ್ಯವನ್ನು ಪಡೆದುಕೊಳ್ಳಿ: ಡಾ. ಡಿ. ವೀರೇಂದ್ರ ಹೆಗ್ಗಡೆ
Gain the ability to face problems and move forward: Dr. D. Veerendra Heggade
ಧಾರವಾಡ 21: ಸಹನೆ ಹೊಂದಾಣಿಕೆ ಪರಸ್ಪರ ಪ್ರೀತಿಯ ಬದುಕು ಮನುಷ್ಯನನ್ನುಎತ್ತರದ ಮಟ್ಟಕ್ಕೆಒಯ್ಯುತ್ತದೆೆ ಸಾಧನೆ ಮಾಡುವಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳುಹಾಗೂ ಜೆ.ಎಸ್.ಎಸ್ ನ ಕಾರ್ಯಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು
ಇಲ್ಲಿಯ ಜನತಾ ಶಿಕ್ಷಣ ಸಮಿತಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ರಾ್ಯಂಕ್ ವಿಜೇತರಿಗೆ ಶೈಕ್ಷಣಿಕ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳೆಲ್ಲ ಸಾಧನೆಯನ್ನು ಮಾಡಿ ಸಂಸ್ಥೆಗೆ ಕೀರ್ತಿತಂದಿದ್ದೀರಿ ನಿಮ್ಮ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ ಸಾಧನೆ ಮಾಡುವವರು ಬೇಕು ಗುರುತಿಸುವವರು ಬೇಕು ಇದುಅತ್ಯಂತ ಮುಖ್ಯವಾದಕಾರ್ಯಎಂದು ಹೇಳಿ ನಿರಂತರ ಸಾಧನೆಇರಲಿ ಸಾಧನೆಗೆ ಶ್ರೀ ಮಂಜುನಾಥ ಸ್ವಾಮಿಯ ಕೃಪೆ ಇರಲಿ ಎಂದು ಆಶೀರ್ವದಿಸಿದರು
ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರು ಸ್ವಾಗತಿಸುವುದರೊಂದಿಗೆಜೆ.ಎಸ್.ಎಸ್ ಸಂಸ್ಥೆ ನಡೆದು ಬಂದದಾರಿಯನ್ನುಇವತ್ತಿನಅದರ ಸಾಧನೆಯನ್ನು ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ರಾ್ಯಂಕ್ ವಿಜೇತರ ಹಾಗೂ ಶೈಕ್ಷಣಿಕ ಸಾಧಕರ ಸನ್ಮಾನಕಾರ್ಯಕ್ರಮದ ನಿರೂಪಣೆಯನ್ನು ಎಂ.ಸಿ.ಎ ಕಾಲೇಜಿನ ನಿರ್ದೇಶಕರಾದಡಾ. ಸೂರಜ್‌ಜೈನ್‌ರವರುನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳ ಚಿತ್ರಣವನ್ನು ಪ್ರತಿಬಿಂಬಿಸುವ “ನಮ್ಮಜೆ.ಎಸ್.ಎಸ್, ನಮ್ಮ ಹೆಮ್ಮೆ, ನಮ್ಮಖಾವಂದರು”ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯದ ಆಗಷ್ಟ 2024 ರಲ್ಲಿಜರುಗಿದಸ್ನಾತಕಪರೀಕ್ಷೆಯಲ್ಲಿಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ವಿಭಾಗಕ್ಕೆ 5 ರಾ್ಯಂಕುಗಳು ಬಂದಿದ್ದು, ಇದೇ ಸಂದರ್ಭದಲ್ಲಿರಾ್ಯಂಕ್ ಪಡೆದ ವಿದ್ಯಾರ್ಥಿಗಳಾದ ಕು. ಅಕ್ಷತಾ ಪವಾರ 96.31 ಶ್ರೇಣಿಯೋಂದಿಗೆ ್ರಥಮರಾ್್ಯಂಕ್, ಕು. ನಿಖಿತಾ ಮಹಾಜನಕಟ್ಟಿ 96.26 ಶ್ರೇಣಿಯೊಂದಿಗೆ ದ್ವಿತೀಯರಾ್ಯಂಕ್, ಕು. ತರುಣಾ ಪುರೋಹಿತ 96.14 ಶ್ರೇಣಿಯೊಂದಿಗೆತೃತೀಯ ಸ್ಥಾನ, ಕು. ಭಾವಿಕಾ ಪುರೋಹಿತ 94.49 ಶ್ರೇಣಿಯೊಂದಿಗೆಆರನೇರಾ್ಯಂಕ್, ಕು. ಪವಿತ್ರಾ ಶೇಠ 94.40 ಶ್ರೇಣಿಯೊಂದಿಗೆ ಏಳನೇ ರಾ್ಯಂಕ್ ಪಡೆದಿದ್ದು, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯ ಜೆ.ಎಸ್.ಎಸ್ ಸಕ್ರಿ ಲಾ ಕಾಲೇಜಿನ ವಿದ್ಯಾರ್ಥಿನಿ ಕು. ನಾಗರತ್ನಾ ಬಿ.ಎಂ (ಸಂಭಾವ್ಯ) ಮೂರನೇರಾ್ಯಂಕ್ ಪಡೆದಿರುತ್ತಾರೆ.ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ, ಭಾರತಿ ಶಾನಭಾಗ, ಡಾ. ಕೆ. ಹೆಚ್ ನಾಗಚಂದ್ರ, ಜಿನ್ನಪ್ಪ ಕುಂದಗೋಳ, ರೂಪಾ ಇಂಗಳಳ್ಳಿ ಉಪಸ್ಥಿತರಿದ್ದರು.
ದೀಪಾ ಕುಲಕರ್ಣಿ ಪ್ರಾರ್ಥನೆಗೀತೆ ಹಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು, ಮಹಾವೀರ ಉಪಾದ್ಯೆ ವಂದಿಸಿದರು. ಸಮಾರಂಭದಲ್ಲಿರಾ್ಯಂಕ್ ವಿಜೇತ ವಿದ್ಯಾರ್ಥಿಗಳು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳು, ಅವರ ಪಾಲಕರು, ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 